ಕನ್ನಡಪ್ರಭ ವಾರ್ತೆ ಉಡುಪಿ
ಅವರನ್ನು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ಬರ ಮಾಡಿಕೊಂಡು ಅಭಿನಂದಿಸಿದರು. ಈ ಸಂದರ್ಭ ನೂರಾರು ಮಂದಿ ಕಾರ್ಯಕರ್ತರು ಉಪಸ್ಥಿತರಿದ್ದು ಭಟ್ ಅವರಿಗೆ ಬೆಂಬಲ ವ್ಯಕ್ತಪಡಿಸಿದರು.
ನಂತರ ರಘುಪತಿ ಭಟ್ ಅವರು ಶಿವಮೊಗ್ಗದ ರಾಷ್ಟ್ರಭಕ್ತರ ಬಳಗದ ಜೊತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ನೈಋತ್ಯ ಪದವೀಧರರ ಕ್ಷೇತ್ರದಲ್ಲಿ ಬೆಂಬಲಿಸಿ ಮತ ನೀಡಿ ಹರಸುವಂತೆ ಮನವಿ ಮಾಡಿದರು.ರಘುಪತಿ ಭಟ್ ಅವರಿಗೆ ಸಂಪೂರ್ಣ ಬೆಂಬಲ ಸೂಚಿಸಿದ ರಾಷ್ಟ್ರ ಭಕ್ತರ ಬಳಗದ ನಾಯಕರು ಅನುಭವಿ, ಶಾಸನ ಸಭೆಯ ಸಂಪೂರ್ಣ ಅರಿವಿರುವ ರಘುಪತಿ ಭಟ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭ ರಘುಪತಿ ಭಟ್ ಅವರು ಹರಿಹರಪುರದ ದಿವ್ಯಕ್ಷೇತ್ರ ಶ್ರೀ ಜಗದ್ಗುರು ಆದಿಶಂಕರಾಚಾರ್ಯ ಶ್ರೀ ಶಾರದಾ ಲಕ್ಷ್ಮೀನೃಸಿಂಹ ಪೀಠಮ್ ಗೆ ಭೇಟಿ ನೀಡಿ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.