ತಾಲೂಕು, ಗ್ರಾಮಗಳಿಗೆ ವಾಹನಗಳ ಸಂಚಾರ । 23, 24ರಂದು ಕಾರ್ಯಕ್ರಮ, 2 ಲಕ್ಷ ಮಂದಿ ಭಾಗಿ: ಡಾ.ಶಾಮನೂರು
ಕನ್ನಡಪ್ರಭ ವಾರ್ತೆ ದಾವಣಗೆರೆಅಖಿಲ ಭಾರತ ವೀರಶೈವ ಮಹಾಸಭಾದ 24ನೇ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಾ ಅಧಿವೇಶನ ಡಿ.23ರಿಂದ ಎರಡು ದಿನ ನಗರದ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ನಡೆಯುವ ಹಿನ್ನೆಲೆಯಲ್ಲಿ ಪ್ರಚಾರ ವಾಹನಗಳಿಗೆ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಭಾನುವಾರ ಚಾಲನೆ ನೀಡಿದರು.
ನಗರದ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಮಹಾಧಿವೇಶನದ ಪ್ರಚಾರ ವಾಹನಗಳಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಶಾಮನೂರು ಶಿವಶಂಕರಪ್ಪ, ಡಿ.23 ಮತ್ತು 24ರಂದು ದಾವಣಗೆರೆಯಲ್ಲಿ ನಡೆಯುವ ಮಹಾಸಭಾದ 24ನೇ ಮಹಾ ಅಧಿವೇಶನದ ಪ್ರಚಾರ ಕಾರ್ಯಕ್ಕೆ ನಾಲ್ಕು ವಾಹನಗಳ ವ್ಯವಸ್ಥೆ ಮಾಡಿದ್ದು, ಜಿಲ್ಲಾದ್ಯಂತ ಎಲ್ಲಾ ತಾಲೂಕು, ಗ್ರಾಮಗಳಿಗೆ ತೆರಳಿ, ಸಮಾಜ ಬಾಂಧವರಲ್ಲಿ ಪ್ರಚುರಪಡಿಸುವ ಕೆಲಸ ಮಾಡಲಿವೆ ಎಂದರು.ಮಹಾ ಅಧಿವೇಶನಕ್ಕೆ ಸುಮಾರು 2 ಲಕ್ಷಕ್ಕೂ ಅಧಿಕ ಸಮಾಜ ಬಾಂಧವರು ರಾಜ್ಯದ ವಿವಿಧೆಡೆ, ಅನ್ಯ ರಾಜ್ಯ, ದೇಶಗಳಿಂದಲೂ ಆಗಮಿಸುವರು, ಅಧಿವೇಶನಕ್ಕೆ ಬಂದ ಲಕ್ಷಾಂತರ ಸಮಾಜ ಬಾಂಧವರಿಗೆ ಊಟ, ವ್ಯವಸ್ಥೆ ಮಾಡಲಾಗುವುದು. ಈಗಾಗಲೇ ಮಹಾ ಅಧಿವೇಶನಕ್ಕೆ ಈಗಾಗಲೇ ಎಲ್ಲಾ ರೀತಿಯಲ್ಲೂ ಸಿದ್ಧತಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಸಮಾಜ ಬಾಂಧವರು ಸಹ ಸಮಾವೇಶದ ಯಶಸ್ಸಿಗೆ ಕೈಜೋಡಿಸೇಕು ಎಂದು ಕರೆ ನೀಡಿದರು.
ವಿಶಾಲ ವೇದಿಕೆ, ಸಭಾಂಗಣ ನಿರ್ಮಾಣ:ಮಹಾಸಭಾ ಜಿಲ್ಲಾಧ್ಯಕ್ಷ, ದೂಡಾ ಮಾಜಿ ಅಧ್ಯಕ್ಷ ದೇವರಮನಿ ಶಿವಕುಮಾರ ಮಾತನಾಡಿ, ಮಹಾಸಭಾದ 24ನೇ ಮಹಾಧಿವೇಶನಕ್ಕೆ ಎಂಬಿಎ ಕಾಲೇಜು ಮೈದಾನದಲ್ಲಿ 300-140 ಅಡಿ ಅಳತೆಯ ವಿಶಾಲ ವೇದಿಕೆ, ಸಭಾಂಗಣ ನಿರ್ಮಿಸಲಾಗುತ್ತಿದೆ. ಸುಮಾರು 2 ಲಕ್ಷಕ್ಕೂ ಅಧಿಕ ಸಮಾಜ ಬಾಂಧವರು ಭಾಗವಹಿಸಲಿದ್ದು, ಸುಮಾರು 25-30 ಸಾವಿರ ಆಸನಗಳ ವ್ಯವಸ್ಥೆ ಮಾಡಿದೆ. ಪರಸ್ಥಳಧಿಂದ ಬಂದವರಿಗೆ ಊಟ, ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಅಭಾವೀಮ ರಾಷ್ಟ್ರೀಯ ಉಪಾಧ್ಯಕ್ಷ, ಹಿರಿಯ ಉದ್ಯಮಿ ಅಥಣಿ ಎಸ್.ವೀರಣ್ಣ, ಪ್ರಧಾನ ಕಾರ್ಯದರ್ಶಿ ರೇಣುಕಾಪ್ರಸಾದ, ಕೆ.ಜಿ.ಶಿವಕುಮಾರ, ಡಾ.ಎಂ.ಜಿ.ಈಶ್ವರಪ್ಪ, ಹಿರಿಯ ವಕೀಲ ಪ್ರಕಾಶ ಪಾಟೀಲ್, ಬಾ.ಮ.ಬಸವರಾಜಯ್ಯ, ಬಿ.ಜಿ.ರಮೇಶ, ಶಂಭು ಉರೇಕೊಂಡಿ, ಐನಳ್ಳಿ ಶುಭಮಂಗಳ, ಪುಷ್ಪಾ ವಾಲಿ, ಸೌಮ್ಯಾ ಸತೀಶ, ನಿರ್ಮಲ ಸುಭಾಷ್, ಸುಷ್ಮಾ ಪಾಟೀಲ್, ಶಿವರತನ್, ಎ.ಎಚ್.ಕೊಟ್ರೇಶ ಇತರರಿದ್ದರು.....................
ಮಹಾಧಿವೇಶನದ ಹಕ್ಕೊತ್ತಾಯ ಸರ್ಕಾರಕ್ಕೆ ಸಲ್ಲಿಕೆದಾವಣಗೆರೆಯಲ್ಲಿ ಡಿ.23ರಿಂದ ಎರಡು ದಿನ ನಡೆಯುವ ವೀರಶೈವ ಮಹಾಸಭಾದ 24ನೇ ರಾಷ್ಟ್ರೀಯ ಮಹಾ ಅಧಿವೇಶನದಲ್ಲಿ ಜಾತಿ ಗಣತಿ, ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ವೀರಶೈವ ಲಿಂಗಾಯತ ಸಮಾಜ ಸೇರ್ಪಡೆ ಸೇರಿ ಅನೇಕ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಮಹಾ ಅಧಿವೇಶನದಲ್ಲಿ ಕೈಗೊಂಡ ನಿರ್ಣಯಗಳು, ಹಕ್ಕೊತ್ತಾಯವನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಅಭಾವೀಮ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.
.............. ಜಾತಿಗಣತಿ ಬಹಿರಂಗ ಬೇಡಜಾತಿಗಣತಿ ವಿಚಾರವಾಗಿ ರಾಜ್ಯವ್ಯಾಪಿ ವಿರೋಧದ ಹಿನ್ನೆಲೆಯಲ್ಲಿ ವರದಿ ಬಹಿರಂಗಪಡಿಸುವುದು ಬೇಡವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಕ್ಕೆ ತರಲಾಗಿದೆ. ಬೆಳಗಾವಿ ಅಧಿವೇಶನದಲ್ಲೂ ಜಾತಿಗಣತಿ ವಿಚಾರದ ಬಗ್ಗೆ ಚರ್ಚಿಸಲಾಗುವುದು.
ಡಾ.ಶಾಮನೂರು ಶಿವಶಂಕರಪ್ಪ, ಹಿರಿಯ ಶಾಸಕ