ಕನ್ನಡಪ್ರಭ ವಾರ್ತೆ ಬೆಂಗಳೂರು ಶಿಕ್ಷಣ ಸಂಸ್ಥೆ ಮತ್ತು ಉದ್ಯಮ ರಂಗದ ನಡುವಿನ ಅಂತರ ಕಡಿಮೆ ಮಾಡಲು ಹಾಗೂ ವಿದ್ಯಾರ್ಥಿಗಳನ್ನು ಕಾರ್ಪೊರೇಟ್ ಜಗತ್ತಿಗೆ ಸಿದ್ಧಗೊಳಿಸುವ ದೃಷ್ಟಿಯಿಂದ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯವು ನಗರದಲ್ಲಿ ಆಯೋಜಿಸಿದ್ದ ‘ಇಂಡಸ್ಟ್ರಿ ಕನೆಕ್ಟ್ 2026: ಕ್ಯಾಂಪಸ್ ಟು ಕಾರ್ಪೊರೇಟ್’ ಎಂಬ ಶೃಂಗಸಭೆಯು ಯಶಸ್ವಿಯಾಗಿ ಜರುಗಿತು.
ವಿದ್ಯಾರ್ಥಿಗಳ ಉತ್ತೇಜನಕ್ಕಾಗಿ ವಿಶ್ವವಿದ್ಯಾನಿಲಯವು ನಾಲ್ಕು ರಾಷ್ಟ್ರೀಯ ಮಟ್ಟದ ಹ್ಯಾಕಥಾನ್‌ಗಳನ್ನು ಕೂಡ ಸಹ ಆಯೋಜಿಸಿತ್ತು. ಸೈಬರ್‌ಶೀಲ್ಡ್, ಶೀಲೀಡ್ಸ್ 2.0, ಟೆಕ್‌ಬಿಜ್ ಮತ್ತು ಫ್ಯೂಷನ್‌ಎಕ್ಸ್ -24 ಕಾರ್ಯಕ್ರಮಗಳಲ್ಲಿ 400 ಕ್ಕೂ ಹೆಚ್ಚು ತಂಡಗಳಲ್ಲಿ 1500ಕ್ಕು ಹೆಚ್ಚು ವಿದ್ಯಾರ್ಥಿಗಳು ದೇಶದ ವಿವಿಧೆಡೆಯಿಂದ ಭಾಗವಹಿಸಿದ್ದರು ಎಂದು ವಿವಿಯ ಅಧಿಕಾರಿಗಳು ತಿಳಿಸಿದ್ದಾರೆ. ಹ್ಯಾಕಥಾನ್ ನಲ್ಲಿ ತಜ್ಞರು, ಮಾರ್ಗದರ್ಶಕರು ಮತ್ತು ತೀರ್ಪುಗಾರರು ಸದಸ್ಯರಾಗಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದರು. ಈ ಶೃಂಗದಲ್ಲಿ ಭಾಗವಹಿಸಿ ಉದ್ಯಮ ಕ್ಷೇತ್ರದ ಸಮಸ್ಯೆಗಳಿಗೆ ನವೀನ ಮಾದರಿ ಪರಿಹಾರಾತ್ಮಕ ಪ್ರದರ್ಶನಗಳನ್ನು ಗುರುತಿಸಿ 3.5 ಲಕ್ಷ ರು.ಗಳಿಗೂ ಹೆಚ್ಚು ಮೌಲ್ಯದ ನಗದು ಬಹುಮಾನಗಳನ್ನು ವಿವಿಧ ವಿದ್ಯಾರ್ಥಿ ತಂಡಗಳಿಗೆ ವಿತರಿಸಲಾಯಿತು.
ವಿವಿಯ ಕುಲಪತಿ ಡಾ. ಎಸ್.ಜೆ. ತಿರುವೆಂಗಡಮ್ ಅವರ ಮಾರ್ಗದರ್ಶನದಲ್ಲಿ ನಡೆದ ಎಲ್ಲ ಕ್ಯಾಂಪಸ್ ಚಟುವಟಿಕೆಗಳನ್ನು ಪ್ರೊ. ವೈಸ್ ಚಾನ್ಸೆಲರ್ ಡಾ.ಶಿವ ಪೆರುಮಾಳ್, ಸ್ಕೂಲ್ ಆಫ್ ಸಿಎಸ್‌ಇ (ವಿಶೇಷ ವಿಭಾಗ) ಸಹಾಯಕ ಡೀನ್ ಡಾ.ಶಕ್ಕೀರ ಎಲ್. ಮತ್ತು ಅವರ ತಂಡವು ಸಮರ್ಪಕವಾಗಿ ನಿರ್ವಹಿಸಿತು.