ಅನಂತಕುಮಾರ್‌ರಿಂದ ಸಂಸ್ಕೃತಿ ನಿರೀಕ್ಷಿಸಲು ಆಗುತ್ತಾ ?

KannadaprabhaNewsNetwork |  
Published : Jan 14, 2024, 01:32 AM IST
ಮುಖ್ಯಮಂತ್ರಿ ಸಿದ್ದರಾಮಯ್ಯ | Kannada Prabha

ಸಾರಾಂಶ

ಬಾಗಲಕೋಟೆ: ಅದು ಅವರ ಸಂಸ್ಕೃತಿ. ಅವರಿಂದ ನಾವು ಸಂಸ್ಕೃತಿ ಬಯಸೋಕೆ ಆಗುತ್ತಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಸದ ಅನಂತಕುಮಾರ ಹೆಗಡೆಗೆ ತಿರುಗೇಟು ನೀಡಿದರು. ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಶನಿವಾರ ಸಿಎಂ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಂತಕುಮಾರ್ ಹೆಗಡೆ ಅವರು ಕೇಂದ್ರ ಮಂತ್ರಿ ಆಗಿದ್ದಾಗ, ನಾವು ಅಧಿಕಾರಕ್ಕೆ ಬಂದಿರೋದೇ ಸಂವಿಧಾನ ಬದಲಾವಣೆ ಮಾಡಲಿಕ್ಕೆ ಎಂದು ಹೇಳಿದ್ದರು. ಇವರನ್ನು ಸುಸಂಸ್ಕೃತರು ಎಂದು ಹೇಳಲು ಆಗುತ್ತಾ? ಎಂದು ಛೇಡಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ: ಅದು ಅವರ ಸಂಸ್ಕೃತಿ. ಅವರಿಂದ ನಾವು ಸಂಸ್ಕೃತಿ ಬಯಸೋಕೆ ಆಗುತ್ತಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಸದ ಅನಂತಕುಮಾರ ಹೆಗಡೆಗೆ ತಿರುಗೇಟು ನೀಡಿದರು.ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಶನಿವಾರ ಸಿಎಂ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಂತಕುಮಾರ್ ಹೆಗಡೆ ಅವರು ಕೇಂದ್ರ ಮಂತ್ರಿ ಆಗಿದ್ದಾಗ, ನಾವು ಅಧಿಕಾರಕ್ಕೆ ಬಂದಿರೋದೇ ಸಂವಿಧಾನ ಬದಲಾವಣೆ ಮಾಡಲಿಕ್ಕೆ ಎಂದು ಹೇಳಿದ್ದರು. ಇವರನ್ನು ಸುಸಂಸ್ಕೃತರು ಎಂದು ಹೇಳಲು ಆಗುತ್ತಾ? ಎಂದು ಛೇಡಿಸಿದರು.

ಅವರ ಭಾಷೆ ಬಳಕೆ, ಅವರು ಮಾತಾಡೋದು ಇದೇ ರೀತಿ. ರಾಜ್ಯದ ಮುಖ್ಯಮಂತ್ರಿಗೆ ಗೌರವ ಕೊಡುವವರು ಇದ್ದಾರೆ, ಕೊಡದೇ ಇರೋರು ಸಹ ಇದ್ದಾರೆ. ರಾಜಕೀಯವಾಗಿ ಮಾತನಾಡೋರಿಗೆ ಗೌರವ ಕೊಡಿ ಎಮದು ಹೇಳೋಕೆ ಆಗುತ್ತಾ? ಅವರು ರಾಜಕೀಯವಾಗಿ ಅಶ್ಲೀಲ ಪದಗಳನ್ನು ಬಳಸಿದರೆ ಅವರ ಘನತೆಗೆ ಕುಂದು ಬರುತ್ತದೆಯೇ ಹೊರತು ನನಗೇನಾಗಲ್ಲ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀಮಂತರು ಗ್ಯಾರಂಟಿಯಿಂದ ದೂರ ಇರಲಿ: ಎಂ.ಬಿ.ಪಾಟೀಲ್‌
ಖಮೇನಿ ಆತ್ಮಕ್ಕೆ ಶಾಂತಿ ದೊರೆಯಲಿ, ಅಮೆರಿಕ ದಾಳಿ ಖಂಡನಾರ್ಹ: ಸಿಎಂ