ಶರಣರ ವಚನಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಜಾತಿ- ಭೇದಭಾವ ತೊರೆದು ಸಮಾನತೆಯನ್ನು ಬೆಳೆಸಿಕೊಳ್ಳಬೇಕು ಎಂದು ಲಿಂಗನಾಯಕನಹಳ್ಳಿ ಮಠದ ಚನ್ನವೀರ ಶಿವಯೋಗಿಗಳು ತಿಳಿಸಿದರು
ಹರಪನಹಳ್ಳಿ: ಹಣ, ಅಧಿಕಾರದಿಂದ ತೃಪ್ತಿ ಸಿಗಲ್ಲ. ಶರಣರ ಮಾತುಗಳ ಪಾಲನೆಯಿಂದ ತೃಪ್ತಿ ಸಾಧ್ಯ ಎಂದು ಲಿಂಗನಾಯಕನಹಳ್ಳಿ ಮಠದ ಚನ್ನವೀರ ಶಿವಯೋಗಿಗಳು ತಿಳಿಸಿದರು.
ಪಟ್ಟಣದ ಕಾಶಿಮಠದಲ್ಲಿ ಶರಣ ಸಾಹಿತ್ಯ ಜಿಲ್ಲಾ ಘಟಕ ಹಾಗೂ ಶರಣ ಸಾಹಿತ್ಯ ತಾಲೂಕು ಘಟಕದ ವತಿಯಿಂದ ನಡೆದ ಶರಣ ಸಾಹಿತ್ಯ ಪರಿಷತ್‌ನ ನೂತನ ಪದಾಧಿಕಾರಿಗಳ ಕಾಯಕದೀಕ್ಷೆ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಶರಣರ ವಚನಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಜಾತಿ- ಭೇದಭಾವ ತೊರೆದು ಸಮಾನತೆಯನ್ನು ಬೆಳೆಸಿಕೊಳ್ಳಬೇಕು. ಜತೆಗೆ ಅನ್ನ ಹಾಗೂ ಅಕ್ಷರ, ದಾಸೋಹ ಮಾಡಿ ಚಿಂತನಶೀಲರಾಗಬೇಕು ಎಂದರು.
ರಾಜ್ಯದಲ್ಲಿ ವಚನ ಸಾಹಿತ್ಯ ಹಾಗೂ ಶರಣ ಸಾಹಿತ್ಯದ ಕೊಡುಗೆ ಬಹುದೊಡ್ಡದಿದ್ದು, ಈ ನಿಟ್ಟಿನಲ್ಲಿ ವೀರಶೈವ ಲಿಂಗಾಯತ ಮಠಗಳು ಬಸವತತ್ವವನ್ನು ಪಸರಿಸುವ ಕೆಲಸ ಮಾಡಿವೆ ಎಂದರು.
ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪೂಜಾರ್ ಷಣ್ಮುಖಪ್ಪ ಮಾತನಾಡಿ, ವಚನ ಸಾಹಿತ್ಯವು ವಿಶ್ವ ಸಾಹಿತ್ಯಕ್ಕೆ ಅಪಾರ ಕೊಡುಗೆ ಕೊಟ್ಟಿದೆ. ವರ್ಣಭೇದ ಲಿಂಗಭೇದ ಆಳಿಸಿ ಹಾಕಿದೆ. 21ನೇ ಶತಮಾನದಲ್ಲಿನ ಕಂದಾಚಾರ ಲಿಂಗ ಅಸಮಾನತೆ, ಮೌಢ್ಯತೆ ಆಳಿಸಿ ಹಾಕುವ ಅವಶ್ಯಕತೆ ಇದೆ ಎಂದರು.ಶರಣ ಸಾಹಿತ್ಯ ತಾಲೂಕು ಘಟಕದ ಗೌರವಾಧ್ಯಕ್ಷ ಸಿ. ಸಿದ್ದಪ್ಪ, ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಎಂ. ರಾಜಶೇಖರ ಮಾತನಾಡಿದರು.
ಈ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಂ. ರವಿಕುಮಾರ್, ಸಮಾಜ ಸೇವಕಿ ಎಚ್.ಎಂ. ಲಲಿತಮ್ಮ, ಹಗರಿಬೊಮ್ಮನಹಳ್ಳಿ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಇಂದುಮತಿ, ಕೆ.ಎಸ್. ವೀರಭದ್ರಪ್ಪ, ಎಸ್.ಬಿ. ಪಾಟೀಲ್, ಬಿ. ರಾಜಶೇಖರ, ಜಿ. ಮಹಾದೇವಪ್ಪ, ಕುಸುಮ ಜಗದೀಶ, ಐ. ಬಸವರಾಪ್ಪ, ಕೆ. ಉಮಾಪತಿ, ನಾಗರಾಜ ಸಿ. ಪಾಟೀಲ್, ಶಿಕ್ಷಕರಾದ ಚನ್ನಪ್ಪ, ಡಾ. ಸಂತೋಷ, ಎ.ಕೆ.ಬಿ. ಶೇಖರಪ್ಪ, ಕೊಟ್ರಯ್ಯ, ಪಿ. ಶಂಬುಲಿಂಗನಗೌಡ, ಪಿ. ಕೊಟ್ರಬಸವನಗೌಡ, ಡಿ. ಶಂಕ್ರಣ್ಣ, ವಿಠೋಬ, ಗಾಯತ್ರಮ್ಮ, ಯು.ಎಸ್. ಶಕುಂತಲಮ್ಮ, ಪುಷ್ಪ ದಿವಾಕರ್, ಡಿ. ರಾಮನಮಲಿ, ವಿಜಯ ದಿವಾಕರ್ ಸೇರಿದಂತೆ ಇತರರು ಇದ್ದರು.