ನೋಟಿಸ್‌ ನೀಡದೆ ಜಮೀನು ಹರಾಜಿಗೆ ಮುಂದಾದ ಕೆನರಾ ಬ್ಯಾಂಕ್‌

KannadaprabhaNewsNetwork | Published : Mar 20, 2025 1:20 AM

ಸಾರಾಂಶ

ರೈತರೊಬ್ಬರು ಜಮೀನಿನ ಮೇಲೆ ಪಡೆದಿದ್ದ ಸಾಲ ಮರುಪಾವತಿಸದ ಕಾರಣ ಕನಿಷ್ಠ ನೋಟೀಸನ್ನೂ ನೀಡದೆ ಜಮೀನು ಹರಾಜಿಗೆ ಮುಂದಾದ ಕೆನರಾ ಬ್ಯಾಂಕ್‌ ನಡೆಯನ್ನು ಖಂಡಿಸಿ ರೈತ ಸಂಘದ ಶಾಂತಕುಮಾರ್ ನೇತೃತ್ವದಲ್ಲಿ ಎಚ್ಚರಿಸಿ ನಗರದರುವ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಪ್ರಬಂಧಕರಿಗೆ ಮನವಿ ಸಲ್ಲಿಸಿದರು. ಒತ್ತೆ ಇಟ್ಟಿರುವ ಜಮೀನಿನ ಪೈಕಿ ಆಲೂರು ತಾಲೂಕು ಕುಂದೂರು ಹೋಬಳಿ ಕಾರಿಗನಹಳ್ಳಿ ಗ್ರಾಮದ ಸರ್ವೆ ನಮ. ೬೬/೪ ನ್ನು ಮಾತ್ರ ೨೦೨೫ ಮಾರ್ಚ್ ೨೫ರಂದು ಹರಾಜಿಗೆ ಇಡಲಾಗಿದೆ. ಆದರೆ ರೈತರಿಗೆ ಹರಾಜಿನ ಯಾವುದೇ ರೀತಿಯ ನೋಟಿಸ್‌ ನೀಡಿರುವುದಿಲ್ಲ ಎಂದು ದೂರಿದರು.

ಕನ್ನಡಪ್ರಭ ವಾರ್ತೆ ಹಾಸನ

ರೈತರೊಬ್ಬರು ಜಮೀನಿನ ಮೇಲೆ ಪಡೆದಿದ್ದ ಸಾಲ ಮರುಪಾವತಿಸದ ಕಾರಣ ಕನಿಷ್ಠ ನೋಟೀಸನ್ನೂ ನೀಡದೆ ಜಮೀನು ಹರಾಜಿಗೆ ಮುಂದಾದ ಕೆನರಾ ಬ್ಯಾಂಕ್‌ ನಡೆಯನ್ನು ಖಂಡಿಸಿ ರೈತ ಸಂಘದ ಶಾಂತಕುಮಾರ್ ನೇತೃತ್ವದಲ್ಲಿ ಎಚ್ಚರಿಸಿ ನಗರದರುವ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಪ್ರಬಂಧಕರಿಗೆ ಮನವಿ ಸಲ್ಲಿಸಿದರು.

ಇದೇ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಬಿ. ಧರ್ಮರಾಜು ಮಾಧ್ಯಮದೊಂದಿಗೆ ಮಾತನಾಡಿ, ಕೆ.ಬಿ.ಮಲ್ಲೇಶ್ ಬಿನ್ ಬಸವೇಗೌಡ ಎಂಬುವವರು ಕೆನರಾ ಬ್ಯಾಂಕಿನಿಂದ ೩ ಲಕ್ಷ ಕೃಷಿ ಸಾಲ ಪಡೆದಿರುತ್ತಾರೆ. ಅದು ಈಗ ಅಸಲು ಬಡ್ಡಿ ಸೇರಿ ಸುಮಾರು ೬,೬೬,೭೫೮ ರು. ಆಗಿರುತ್ತದೆ. ಈಗ ಇವರು ಒಟ್ಟು ಒತ್ತೆ ಇಟ್ಟಿರುವ ಜಮೀನಿನ ಪೈಕಿ ಆಲೂರು ತಾಲೂಕು ಕುಂದೂರು ಹೋಬಳಿ ಕಾರಿಗನಹಳ್ಳಿ ಗ್ರಾಮದ ಸರ್ವೆ ನಮ. ೬೬/೪ ನ್ನು ಮಾತ್ರ ೨೦೨೫ ಮಾರ್ಚ್ ೨೫ರಂದು ಹರಾಜಿಗೆ ಇಡಲಾಗಿದೆ. ಆದರೆ ರೈತರಿಗೆ ಹರಾಜಿನ ಯಾವುದೇ ರೀತಿಯ ನೋಟಿಸ್‌ ನೀಡಿರುವುದಿಲ್ಲ ಎಂದು ದೂರಿದರು.

ಹರಾಜಿಗೆ ಇಟ್ಟಿರುವ ಜಮೀನಿನ ಪೈಕಿ ಸರ್ವೆ ನಂ. ೬೬/೪ರಲ್ಲಿ ಮನೆ ಮತ್ತು ಜಾಗ ಸೇರಿ ಒಂದೂವರೆ ಕೋಟಿ ರು. ಬೆಲೆ ಬಾಳುತ್ತದೆ. ಆದರೆ ಬ್ಯಾಂಕಿನವರು ಈ ಆಸ್ತಿಯನ್ನು ಕೇವಲ ೧೦ ಲಕ್ಷ ರು.ಗಳಿಗೆ ಅಂದಾಜು ಮಾಡಿದ್ದಾರೆ. ರೈತ ಕೊಡಬೇಕಾಗಿರುವ ಮೊತ್ತ ಕೇವಲ ೬,೬೬,೭೫೮. ಇವರಿಗೆ ವೃದ್ಧಾಪ್ಯ ವೇತನವನ್ನು ಸಹ ನಿಮ್ಮ ಬ್ಯಾಂಕು ಮುಟ್ಟುಗೋಲು ಹಾಕಿಕೊಂಡಿರುತ್ತೀರಿ. ಅವರಿಗೆ ಕೊಡಬೇಕಾದ ವೃದ್ಧಾಪ್ಯ ವೇತನವನ್ನು ಮೊದಲು ಬಿಡುಗಡೆ ಮಾಡಿ ಅವರ ಖಾತೆಗೆ ಜಮಾ ಮಾಡಿ. ಮತ್ತು ಈಗಾಗಲೇ ಸರ್ಕಾರ ರೈತರ ಸಾಲಗಳ ಮೇಲೆ ವಸೂಲಿಗಾಗಿ ದಬ್ಬಾಳಿಕೆ ಮತ್ತು ಮೈಕ್ರೋ ಫೈನಾನ್ಸ್ ರೀತಿ ನಡೆದುಕೊಳ್ಳಬಾರದೆಂದು ಅಧಿವೇಶನದಲ್ಲಿ ಹೇಳಿದೆ. ಹಾಗಾದರೆ ನೀವು ರೈತರ ಮೇಲೆ ನಡೆಸುತ್ತಿರುವ ಈ ಕಾರ್ಯವನ್ನು ರೈತ ಸಂಘವು ಪ್ರತಿಭಟಿಸುತ್ತೇವೆ ಎಂದು ಹೇಳಿದರು.

ಇದೇ ವೇಳೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಉಪಾಧ್ಯಕ್ಷ ನಾಗೇಶ್, ತಾಲೂಕು ಉಪಾಧ್ಯಕ್ಷ ಕೃಷ್ಣಮೂರ್ತಿ, ನೊಂದ ರೈತ ಮಲ್ಲೇಶ್, ಗುರುಮೂರ್ತಿ, ಮಂಜುನಾಥ್, ಶೇಖರ್, ಮಹೇಶ್ ಇತರರು ಉಪಸ್ಥಿತರಿದ್ದರು.

Share this article