ರಾಷ್ಟ್ರ ನಿರ್ಮಾಣದಲ್ಲಿ ಕೆನರಾ ಬ್ಯಾಂಕ್ ಕೊಡುಗೆ ಅಪಾರ

KannadaprabhaNewsNetwork |  
Published : Oct 06, 2025, 01:00 AM IST
ಪೋಟೋ 3 : ಸೋಂಪುರ ಹೋಬಳಿಯ ನಿಡವಂದ ಗ್ರಾಮದಲ್ಲಿ ಕೆನರಾ ಬ್ಯಾಂಕ್ ನ ನೂತನ ಕಟ್ಟಡವನ್ನು ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಕೃಷ್ಣ ಚೈತನ್ಯ ರೆಡ್ಡಿ ಉದ್ಟಾಟಿಸಿದರು | Kannada Prabha

ಸಾರಾಂಶ

ದಾಬಸ್‍ಪೇಟೆ: ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ಹೊಂದಿರಬೇಕು. ಪ್ರತಿ ಐದು ಸಾವಿರ ಜನಸಂಖ್ಯೆಗೆ ಒಂದು ಬ್ಯಾಂಕಿನ ಶಾಖೆ ತೆರೆದು ಆ ಭಾಗದಲ್ಲಿ ಹೆಚ್ಚಿನ ವಾಣಿಜ್ಯ ವ್ಯವಹಾರ ಮಾಡಿ ಆ ಭಾಗವನ್ನು ಅಭಿವೃದ್ಧಿಪಡಿಸಿ ಬಲಿಷ್ಠ ಭಾರತ ನಿರ್ಮಾಣ ಮಾಡಲು ನಿರ್ಧರಿಸಿದೆ ಎಂದು ಕೆನರಾ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಕೃಷ್ಣ ಚೈತನ್ಯರೆಡ್ಡಿ ತಿಳಿಸಿದರು.

ದಾಬಸ್‍ಪೇಟೆ: ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ಹೊಂದಿರಬೇಕು. ಪ್ರತಿ ಐದು ಸಾವಿರ ಜನಸಂಖ್ಯೆಗೆ ಒಂದು ಬ್ಯಾಂಕಿನ ಶಾಖೆ ತೆರೆದು ಆ ಭಾಗದಲ್ಲಿ ಹೆಚ್ಚಿನ ವಾಣಿಜ್ಯ ವ್ಯವಹಾರ ಮಾಡಿ ಆ ಭಾಗವನ್ನು ಅಭಿವೃದ್ಧಿಪಡಿಸಿ ಬಲಿಷ್ಠ ಭಾರತ ನಿರ್ಮಾಣ ಮಾಡಲು ನಿರ್ಧರಿಸಿದೆ ಎಂದು ಕೆನರಾ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಕೃಷ್ಣ ಚೈತನ್ಯರೆಡ್ಡಿ ತಿಳಿಸಿದರು.

ಸೋಂಪುರ ಹೋಬಳಿಯ ನಿಡವಂದ ಕೆನರಾ ಬ್ಯಾಂಕ್ ಶಾಖೆಯ ನೂತನ ಕಟ್ಟಡ ಉದ್ಟಾಟಿಸಿ ಅವರು ಮಾತನಾಡಿದರು. ವಿಭಾಗೀಯ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಮಾತನಾಡಿ, ದಿನದ 24 ಗಂಟೆ ಬ್ಯಾಂಕಿಂಗ್ ಸೇವೆ, ಮೊಬೈಲ್ ಮೂಲಕ ಬ್ಯಾಂಕಿಂಗ್ ವ್ಯವಹಾರ ಮಾಡುವ ಅನುಕೂಲ ಕಲ್ಪಿಸಿದೆ. ಪ್ರತಿ ಹಳ್ಳಿ, ಮನೆಮನೆಗೂ ಬ್ಯಾಂಕಿಂಗ್ ಸೇವೆ ಒದಗಿಸುವ ದಿಸೆಯಲ್ಲಿ ಕೆನರಾ ಬ್ಯಾಂಕ್ ಕಾರ್ಯಕ್ರಮ ಹಾಕಿಕೊಂಡಿದೆ. ಆರ್ಥಿಕ ವ್ಯವಹಾರವಲ್ಲದೇ ಬ್ಯಾಂಕ್‍ಗಳ ಬೆಳವಣಿಗೆ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.

ಮುಖಂಡ ಚಿಕ್ಕೇಗೌಡ ಮಾತನಾಡಿ, ಗ್ರಾಮೀಣ ಜನರಿಗೆ ಭಾಷಾ ಕೊರತೆಯಿದ್ದು, ಅನಕ್ಷರಸ್ಥರು ಹೆಚ್ಚಾಗಿರುವದರಿಂದ ಕನ್ನಡ ಭಾಷೆ ಮಾತನಾಡುವ ಉದ್ಯೋಗಿಗಳನ್ನು ನೇಮಿಸಿದರೆ ಅನುಕೂಲ. ಹಾಗೆ ಪ್ರತಿನಿತ್ಯ ಎಟಿಎಂನಲ್ಲಿ ಹಣ ಹಾಕುವ ತೆಗೆಯುವ ವ್ಯವಸ್ಥೆ ಅಳವಡಿಸಬೇಕು. ಬ್ಯಾಂಕ್‌ನಲ್ಲಿ ಅಗತ್ಯ ಸಿಬ್ಬಂದಿ ನೇಮಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಆಡಳಿತ ಪ್ರಧಾನ ವ್ಯವಸ್ಥಾಪಕ ಜಿಂಕಾ ಸುಮಂತ್, ಶಾಖಾ ವ್ಯವಸ್ಥಾಪಕ ರಾಘವೇಂದ್ರ ಗೋವಿನಾಲ್, ಸಹಾಯಕ ಶಾಖಾ ವ್ಯವಸ್ಥಾಪಕ ಎಂಡಪಲ್ಲಿ ವೆಂಕಟ ಅಜಯ್, ಗ್ರಾಹಕ ಪ್ರತಿನಿಧಿ ಹರೀಶ್ ಕುಮಾರ್, ಗ್ರಾಪಂ ಉಪಾಧ್ಯಕ್ಷೆ ಇಂದ್ರಮ್ಮ, ಮುಖಂಡರಾದ ಪರಮೇಶ್, ಜಗದೀಶ್, ಸಂತೋಷ್, ಡೇರಿ ಅಧ್ಯಕ್ಷ ಕುಮಾರಸ್ವಾಮಿ ಇತರರಿದ್ದರು.

ಪೋಟೋ 3 :

ಸೋಂಪುರ ಹೋಬಳಿಯ ನಿಡವಂದ ಕೆನರಾ ಬ್ಯಾಂಕ್ ಶಾಖೆಯ ನೂತನ ಕಟ್ಟಡವನ್ನು ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಕೃಷ್ಣ ಚೈತನ್ಯರೆಡ್ಡಿ ಉದ್ಟಾಟಿಸಿದರು. ವಿಭಾಗೀಯ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಇತರರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ