ಜಿಲ್ಲೆಯ ಕೃಷ್ಣಾ ಹಾಗೂ ತುಂಗಭದ್ರಾ ನದಿಗಳಲ್ಲಿ ಗುರುತಿಸಿರುವ 65 ಬ್ಲಾಕ್‌ಗಳನ್ನು ಐದು ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ಜಿಲ್ಲಾ ಮರಳು ಸಮಿತಿಯ ನಿರ್ಣಯ ತೆಗೆದುಕೊಂಡಿರುವುದು ಆಕ್ಷೇಪಾರ್ಹವಾಗಿದ್ದು, ಜಿಲ್ಲಾಡಳಿತ ಇದನ್ನು ಮರು ಪರಿಶೀಲನೆ ಮಾಡಿ, ಟೆಂಡರ್ ಪ್ರಕ್ರಿಯೆಯನ್ನು ಮುಂದೂಡಬೇಕು ಎಂದು ಜನಸಂಗ್ರಾಮ ಪರಿಷತ್ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ರಾಯಚೂರುಜಿಲ್ಲೆಯ ಕೃಷ್ಣಾ ಹಾಗೂ ತುಂಗಭದ್ರಾ ನದಿಗಳಲ್ಲಿ ಗುರುತಿಸಿರುವ 65 ಬ್ಲಾಕ್‌ಗಳನ್ನು ಐದು ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ಜಿಲ್ಲಾ ಮರಳು ಸಮಿತಿಯ ನಿರ್ಣಯ ತೆಗೆದುಕೊಂಡಿರುವುದು ಆಕ್ಷೇಪಾರ್ಹವಾಗಿದ್ದು, ಜಿಲ್ಲಾಡಳಿತ ಇದನ್ನು ಮರು ಪರಿಶೀಲನೆ ಮಾಡಿ, ಟೆಂಡರ್ ಪ್ರಕ್ರಿಯೆಯನ್ನು ಮುಂದೂಡಬೇಕು ಎಂದು ಜನಸಂಗ್ರಾಮ ಪರಿಷತ್ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಆಗ್ರಹಿಸಿದರು.ಇಲ್ಲಿನ ಪತ್ರಿಕಾ ಭವನದ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಹಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ
ಅಕ್ರಮ ಮರಳುಗಾರಿಯಿಂದ ಪ್ರಭಲ ಶಕ್ತಿಗಳೇ ಅಡಗಿವೆ. ಜಿಲ್ಲೆ ಎಲ್ಲ ಪಕ್ಷಗಳ ಜನಪ್ರತಿನಿಧಿಗಳ ಬೆಂಬಲದಿಂದಲೆಯೇ ಅಕ್ರಮ ಮರಳು ದಂಧೆ ಎತೇಚ್ಛವಾಗಿ ಸಾಗಿದೆ ಎಂದು ಆರೋಪಿಸಿದರು.ಕಳೆದ ಎರಡು ದಶಕಗಳಲ್ಲಿ ಉಭಯ ನದಿಗಳಿಂದ ಸುಮಾರು ₹10 ಸಾವಿರ ಕೋಟಿ ಅಕ್ರಮವಾಗಿ ಮರಳು ಸಾಗಿಸಿರುವ ಬಗ್ಗೆ ತಜ್ಞರು ಮಾಹಿತಿ ಕಲೆಹಾಕಿದ್ದು, 15 ಟನ್ ಮರಳು ಸಾಗಾಣಿಕೆಯ ರಾಯಲ್ಟಿ ಪಾವತಿಸಿ ಪರವಾನಗಿ ಪಡೆದುಕೊಂಡು 40 ರಿಂದ 50 ಮೆಟ್ರಿಕ್ ಟನ್ ಮರಳು ಸಾಗಿಸುತ್ತಾರೆ. ಆರ್‌ಟಿಒ, ಪೊಲೀಸ್ ಅಧಿಕಾರಿಗಳು ಅಕ್ರಮ ಮರಳು ಗಣಿಗಾರಿಕೆಯ ಫಲಾನುಭವಿಗಳಾಗಿದ್ದಾರೆ. ಆದರೆ, ಅಕ್ರಮ ಮರಳು ನಿಯಂತ್ರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ನದಿಗಳಲ್ಲಿ ಅಕ್ರಮ ಮರಳು ಸಾಗಿಸುವವರು ಉತ್ತಮ ರಸ್ತೆಯನ್ನು ನಿರ್ಮಾಣ ಮಾಡಿದ್ದಾರೆ. ಮರಳು ಸಾಗಿಸುವ ಲಾರಿಗಳಿಗೆ ಜಿಪಿಎಸ್ ಅಳವಡಿಸಿ ಹೆಚ್ಚಿನ ನಿಗಾವಹಿಸಬೇಕು. ಆದರೆ, ಆ ಕಾರ್ಯವನ್ನು ನಡೆಯುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲೆಯ ಕೃಷ್ಣಾ ಹಾಗೂ ತುಂಗಭದ್ರಾ ನದಿಯಲ್ಲಿ ಮರಳು ಗುತ್ತಿಗೆ ಪಡೆದವರು ಹುಬ್ಬಳ್ಳಿ ಸೇರಿದಂತೆ ದೂರದ ಜಿಲ್ಲೆಯವರಾಗಿದ್ದಾರೆ. ಆದರೆ, ಮರಳು ಗಣಿಗಾರಿಕೆಯನ್ನು ಜಿಲ್ಲೆಯ ಜನಪ್ರತಿನಿಧಿಗಳ ಬೆಂಬಲಿಗರಿಗೆ ಹಾಗೂ ಹಿಂಬಾಲಕರಿಗೆ ವಹಿಸಿಕೊಡಲಾಗಿದೆ. ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ನದಿಯಲ್ಲಿ 3 ಅಡಿಯವರೆಗೆ ಮಾತ್ರ ಮರಳು ತೆಗೆಯಬೇಕು ಎಂಬ ನಿಯವಿದೆ. ಆದರೆ, 5 ರಿಂದ 10 ಅಡಿಗಳಷ್ಟು ಇಟಾಚಿಯಿಂದ ಅಗೆದು ಅಕ್ರಮ ಮರಳು ಸಾಗಿಸುತ್ತಾರೆ. ಅಲ್ಲದೇ ಮರಳು ಗಣಿಗಾರಿಕೆಗೆ ನಿರ್ದಿಷ್ಟ ಪ್ರದೇಶ (ಎಕರೆ)ವನ್ನು ನಿಗದಿಪಡಿಸಿದೆ. ಆದರೆ, ನಿಯಮ ಉಲ್ಲಂಘಿಸಿ ಮರಳು ಗಣಿಗಾರಿಕೆ ಮಾಡಲಾಗುತ್ತದೆ ಎಂದು ಆರೋಪಿಸಿದರು.ಅಕ್ರಮ ಮರಳು ತಡೆಯಲು ಹೋದ ಸಾಮಾಜಿಕ ಕಾರ್ಯಕರ್ತರ ಮೇಲೂ ಹಲ್ಲೆಗಳಾಗಿದೆ. ಪೊಲೀಸ್ ಅಧಿಕಾರಿಗಳಿಗೆ ಅಕ್ರಮ ಮರಳು ಗಣಿಗಾರಿಕೆಗೆ ಬೆಂಬಲವಾಗಿದ್ದಾರೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು. ಕೂಡಲೇ ಜಿಲ್ಲೆಯ ಕೃಷ್ಣಾ ಹಾಗೂ ತುಂಗಭದ್ರಾ ನದಿಗಳಲ್ಲಿ 65 ಬ್ಲಾಕ್‌ಗಳನ್ನು ಐದು ವರ್ಷಗಳ ಅವಧಿಯ ಮರಳು ಗುತ್ತಿಗೆ ಟೆಂಡರ್ ಪ್ರಕ್ರಿಯೆಯನ್ನು ಕೂಡಲೇ ರದ್ದುಪಡಿಸಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜನಸಂಗ್ರಾಮ ಪರಿಷತ್ತಿನ ಸದಸ್ಯರಾದ ಭೀಮರಾಯ ನಾಯಕ ಜರದಬಂಡಿ, ಖಾಜಾ ಅಸ್ಲಾಂ ಅಹಮ್ಮದ್, ಜಾನ್ ವೆಸ್ಲಿ ಟಿ.ಕಾತರಕಿ,ಪರಪ್ಪ ನಾಗೋಲಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.