ಜಿಬಿಎಲ್ ಕಾರ್ಖಾನೆಯ ಕೇನ್‌ ಕ್ಯಾರಿಯರ್ ಪೂಜೆ

KannadaprabhaNewsNetwork |  
Published : Nov 14, 2026, 03:00 AM IST
೧೩ಎಂಎಲ್ ಪಿ೦೧ | Kannada Prabha

ಸಾರಾಂಶ

ಸಮೀರವಾಡಿಯ ಗೋದಾವರಿ ಬಯೋರಿಫೈನರೀಸ್‌ನ ೨೦೨೬-೨೭ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನ ಕೇನ್ ಕ್ಯಾರಿಯರ್ ಪೂಜಾ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಸಮೀರವಾಡಿಯ ಗೋದಾವರಿ ಬಯೋರಿಫೈನರೀಸ್‌ನ ೨೦೨೬-೨೭ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನ ಕೇನ್ ಕ್ಯಾರಿಯರ್ ಪೂಜಾ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಬಿ ಆರ್ ಬಕ್ಷೀ ಮಾತನಾಡಿ, ಕಾರ್ಖಾನೆ ಪ್ರಸಕ್ತ ಸಾಲಿನ ಹಂಗಾಮಿನಲ್ಲಿ ಅತಿ ಹೆಚ್ಚು ಕಬ್ಬು ನುರಿಸುವ ಗುರಿ ಹೊಂದಿದೆ. ಕಬ್ಬು ಬೆಳೆಗಾರರು ನಿರಂತರ ೫೪ ವರ್ಷಗಳಿಂದ ಸಹಕಾರ ನೀಡಿದಂತೆ ಹೆಚ್ಚು ಕಬ್ಬು ಪೂರೈಕೆ ಮಾಡಿ, ಪ್ರತಿ ಟನ್ ಗೆ ₹೩೮೦೦ ದರ ನೀಡಲಾಗುತ್ತಿದೆ ಎಂದರು.

ಪೂಜಾ ಕಾರ್ಯಕ್ರಮ ಹೋಮ-ಹವನ ವಿಧಿ ವಿಧಾನದೊಂದಿಗೆ ವಲ್ಲಭ ಕವಟೇಕರ ನಡೆಸಿದರು. ಕಾರ್ಖಾನೆಯ ವಿ ಎಸ್ ಕಣಬೂರ ಹಾಗೂ ನಿರ್ಮಲಕುಮಾರ ಜಾ ದಂಪತಿ ಪೂಜಾ ಕಾರ್ಯಕ್ರಮದಲ್ಲಿದ್ದರು.

ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ, ರಂಗನಗೌಡ ಪಾಟೀಲ, ಮಜದೂರ ಯೂನಿಯನ್‌ ಅಧ್ಯಕ್ಷ ರವಿ ಕುರುಬರ, ಬಿ.ಜಿ. ಹೊಸೂರ, ಲಕ್ಷ್ಮಣ ಹುಚರೆಡ್ಡಿ, ಕೆ.ಟಿ. ಪಾಟೀಲ, ಡಾ.ಎಂ.ವಿ. ಬಕ್ಷೀ, ಕಿಶೋರ ಮಸೂರಕರ, ಆರ್.ಕೆ. ಮಳಲಿ, ಭೀಮಸಿ ತೊಳಮಟ್ಟಿ, ಮಹಾಲಿಂಗ ಸನದಿ, ಮಲ್ಲಿಕಾರ್ಜುನ ಖಾನಗೌಡ, ಎಂ.ಜಿ. ಅಂಗಡಿ, ಕೆಂಪಣ್ಣಾ ಅಂಗಡಿ, ತಮ್ಮಣ್ಣಾ ನಾಯಿಕ, ಪರಪ್ಪ ಬ್ಯಾಕೋಡ, ಮಹಾದೇವ ಮಾರಾಪೂರ, ಮಹಾದೇವ ಕರೋಶಿ, ರಮೇಶ ಕಲ್ಲಾರ, ಪರಶು ಚಿನಗುಂಡಿ, ವಿಠ್ಠಲ ಹೊಸಮನಿ, ಶ್ರೀಶೈಲ ಮೈಗೂರ, ಲಕ್ಷ್ಮಣ ಕತ್ತಿ, ಎಂ.ಬಿ. ಪಾಟೀಲ, ಹಣಮಂತ ತೇರದಾಳ, ಸಿಪಿಐ ರಾಜು ಪಾಟೀಲ, ತಹಸೀಲ್ದಾರ ಗಿರೀಶ ಸ್ವಾದಿ, ಪಿಎಸೈ ಪ್ರೀತಮ್ ನಾಯ್ಕ್, ಅಧಿಕಾರಿಗಳಾದ ದಿನೇಶ ಶರ್ಮಾ, ನಂದಕುಮಾರ ಕುಂಚಗೆ, ವಿ.ಎಸ್. ಕಣಬೂರ, ಎಂ.ಕೆ. ಚೌಸ್, ಡಿ.ಎನ್. ಪಾಟೀಲ, ವಿ.ಕೆ. ಕಿಲಾರಿ, ಕೆ.ವಿ. ಗೌಡರ, ರವೀಂದ್ರ ಬಾಗೋಜಿ, ಆರ್.ವಿ. ಸೋನವಾಲ್ಕರ, ಎಂ.ರಾಮಚಂದ್ರ, ಸೋಮಶೇಖರ ಪೇಟಿಮನಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸಿ
ಎಸಿಯಾಗಿ ಪದೋನ್ನತಿ ಹೊಂದಿದ ತಹಸೀಲ್ದಾರ್‌ ಬೋಸಗಿ