ಬೈಂದೂರು ಕ್ಷೇತ್ರಕ್ಕೆ ಕ್ಯಾನ್‌ಫಿನ್‌ 1 ಕೋಟಿ ರು.ದೇಣಿಗೆ: ಗಂಟಿಹೊಳೆ

KannadaprabhaNewsNetwork |  
Published : Nov 15, 2025, 02:30 AM IST
14ಬೈಂದೂರು | Kannada Prabha

ಸಾರಾಂಶ

ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ಇವರ ಸಿಎಸ್ಆರ್ ನಿಧಿಯಿಂದ ಇಲ್ಲಿನ ನಾವುಂದದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 10 ಲಕ್ಷ ರು. ವೆಚ್ಚದಲ್ಲಿ ಸೋಲಾರ್ ಗ್ರಿಡ್ ಪವರ್ ಬ್ಯಾಕಪ್ ಸಿಸ್ಟಮ್ ಅಭಿವೃದ್ಧಿಪಡಿಸಲಾಗಿದೆ.

ಬೈಂದೂರು: ಸಮೃದ್ಧ ಬೈಂದೂರು ಪರಿಕಲ್ಪನೆಯ 300 ಟ್ರೀಸ್ ಯೋಜನೆಯಲ್ಲಿ ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ಇವರ ಸಿಎಸ್ಆರ್ ನಿಧಿಯಿಂದ ಇಲ್ಲಿನ ನಾವುಂದದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 10 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿದ ಸೋಲಾರ್ ಗ್ರಿಡ್ ಪವರ್ ಬ್ಯಾಕಪ್ ಸಿಸ್ಟಮನ್ನು ಶಾಸಕ ಗುರುರಾಜ್ ಗಂಟಿಹೊಳೆ ಹಾಗೂ ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್‌ನ ಉಪಾಧ್ಯಕ್ಷ ಪ್ರಶಾಂತ್ ಜೋಯಿಶಿ ನೆರವೇರಿಸಿದರು.ನಂತರ ಮಾತನಾಡಿದ ಶಾಸಕರು, ಬೈಂದೂರು ಕ್ಷೇತ್ರದ ಸರ್ಕಾರಿ ಶಾಲಾ,ಕಾಲೇಜುಗಳಿಗೆ ಕ್ಯಾನ್ ಫಿನ್ ಸಂಸ್ಥೆ ಇದುವರೆಗೆ 1 ಕೋಟಿ ರು.ಗೂ ಅಧಿಕ ಮೊತ್ತದ ವಿವಿಧ ರೀತಿಯ ಅವಶ್ಯಕ ಮೂಲಭೂತ ಸೌಕರ್ಯಗಳನ್ನು ತನ್ನ ಸಿ.ಎಸ್.ಆರ್ ನಿಧಿಯಿಂದ ಒದಗಿಸಿದೆ. ಸಂಸ್ಥೆಯ ಈ ಕೊಡುಗೆ ವಿದ್ಯಾರ್ಥಿಗಳಿಗೆ ವರದಾನವಾಗಿದ್ದು, ಇದು ರಾಷ್ಟ್ರಸೇವೆಯ ಕೆಲಸ ಎಂದು ಅಭಿಪ್ರಾಯಪಟ್ಟರು.ಪ್ರಶಾಂತ್ ಜೋಯಿಶಿ ವಿದ್ಯಾರ್ಥಿಗಳು ಕಾಲೇಜಿಗೆ ನೀಡಿದ ಕೊಡುಗೆಯ ಸದುಪಯೋಗ ಪಡಿಸಿಕೊಂಡು ಭವಿಷ್ಯದಲ್ಲಿ ತಾವು ಕೂಡ ಉನ್ನತ ಮಟ್ಟಕ್ಕೆ ಏರಬೇಕು ಮತ್ತು ವಿದ್ಯಾರ್ಜನೆ ಪಡೆದ ಕಾಲೇಜಿಗೆ ಕೊಡುಗೆ ನೀಡುವಂತಾಗಬೇಕೆಂದು ಕರೆ ನೀಡಿದರು.ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪ್ರವೀಣ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷೆ ಅನಿತಾ ಆರ್.ಕೆ., ಪ್ರತಿಮಾ ಜೋಯಿಶಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲೆ ಸುಜಾತ ಎಂ ಪ್ರಸ್ತಾವಿಕ ಮಾತುಗಳನ್ನಾಡಿದರು, ಉಪಪ್ರಾಂಶುಪಾಲೆ ಶಶಿಕಲಾ ನಾಯಕ್ ಹಾಜರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕರ ಗಣೇಶ್ ಎಂ. ನಿರೂಪಿಸಿದರು, ಉಪನ್ಯಾಸಕಿ ಶ್ರ ಲಕ್ಷ್ಮಿ ಕೆ.ಎಸ್. ಸ್ವಾಗತಿಸಿದರು, ಉಪನ್ಯಾಸಕ ಜೀವನ್ ಕುಮಾರ್ ಶೆಟ್ಟಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ