ಖಾಸಗಿ ಬಸ್ಸಿಗೆ ಕ್ಯಾಂಟರ್ ಡಿಕ್ಕಿ: ಚಾಲಕರಿಬ್ಬರ ಸಾವು

KannadaprabhaNewsNetwork |  
Published : Aug 19, 2026, 01:30 AM IST
ಫೋಟೋ: 18ಹೆಚ್‌ಎಸ್‌ಕೆ 5ಹೊಸಕೋಟೆ ತಾಲೂಕಿನ ದೊಡ್ಡಹುಲ್ಲೂರು ಗ್ರಾಮದ ಬಳಿಯ ಹೊಸಕೋಟೆ-ದಾಬಸ್‌ಪೇಟೆ ಉಪನಗರ ಹೊರ ವರ್ತುಲ ಹೆದ್ದಾರಿಯಲ್ಲಿ ಸಂಭವಿಸಿದ ಅಫಘಾತದಲ್ಲಿ ಕ್ಯಾಂಟರ್ ಹಾಗೂ ಬಸ್ ಜಖಂಗೊAಡಿರುವುದು. | Kannada Prabha

ಸಾರಾಂಶ

ಹೊಸಕೋಟೆ: ತಾಲೂಕಿನ ಕಸಬಾ ಹೋಬಳಿಯ ದೊಡ್ಡಹುಲ್ಲೂರು ಗ್ರಾಮದ ಪಕ್ಕದಲ್ಲಿ ಹಾದು ಹೋಗಿರುವ ದಾಬಾಸ್‌ಪೇಟೆ-ಹೊಸಕೋಟೆ ಉಪನಗರ ಹೊರವರ್ತುಲ ಹೆದ್ದಾರಿಯಲ್ಲಿ ಭೀಕರ ಅಫಘಾತ ಸಂಭವಿಸಿದ್ದು ಇಬ್ಬರೂ ಚಾಲಕರು ಮೃತಪಟಿದ್ದಾರೆ

ಹೊಸಕೋಟೆ: ತಾಲೂಕಿನ ಕಸಬಾ ಹೋಬಳಿಯ ದೊಡ್ಡಹುಲ್ಲೂರು ಗ್ರಾಮದ ಪಕ್ಕದಲ್ಲಿ ಹಾದು ಹೋಗಿರುವ ದಾಬಾಸ್‌ಪೇಟೆ-ಹೊಸಕೋಟೆ ಉಪನಗರ ಹೊರವರ್ತುಲ ಹೆದ್ದಾರಿಯಲ್ಲಿ ಭೀಕರ ಅಫಘಾತ ಸಂಭವಿಸಿದ್ದು ಇಬ್ಬರೂ ಚಾಲಕರು ಮೃತಪಟಿದ್ದಾರೆ.

ದೇವನಹಳ್ಳಿ ಕೈಗಾರಿಕಾ ಪ್ರದೇಶದ ಪಾಕ್ಸ್ ಕಾನ್ ಸಂಸ್ಥೆ ಕಾರ್ಮಿಕರನ್ನು ಹೊಸಕೋಟೆಗೆ ಬಿಡಲು ಬರುವ ಸಂದರ್ಭದಲ್ಲಿ ಕಾರ್ಮಿಕರಿದ್ದ ಬಸ್‌ ಬ್ರೇಕ್ ಸಮಸ್ಯೆ ಕಂಡು ಬಂದ ಕಾರಣ ಕೂಡಲೆ ಬಸ್ ಚಾಲಕ ಬಾಲಕೃಷ್ಣ(34) ಬಸ್ ಅನ್ನು ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಿ ಪರಿಶೀಲಿಸುವ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಸರಕು ತುಂಬಿದ ಕ್ಯಾಂಟರ್ ಡಿಕ್ಕಿ ಹೊಡೆದು ಕ್ಯಾಂಟರ್ ಚಾಲಕ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಯಮನಕುಂಟೆ ಗ್ರಾಮದ ಶ್ರೀನಾಥ್(42) ಮೃತಪಟ್ಟಿದ್ದಾರೆ.

ಈ ಸಂದರ್ಭದಲ್ಲಿ ಪಾಕ್ಸ್ ಕಾನ್ ಸಂಸ್ಥೆಯ ನೌಕರರು ಕೆಲಸ ಮುಗಿಸಿ ಹೊಸಕೋಟೆಯ ಮನೆಗಳಿಗೆ ತೆರಳುತಿದ್ದರು. ಬಸ್‌ನಲ್ಲಿದ್ದ ಕಾರ್ಮಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಕಾರ್ಮಿಕರನ್ನು ನಗರದ ಕೆಲ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೊಸಕೋಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಫೋಟೋ: 18ಹೆಚ್‌ಎಸ್‌ಕೆ 5

ಹೊಸಕೋಟೆ ತಾಲೂಕಿನ ದೊಡ್ಡಹುಲ್ಲೂರು ಬಳಿಯ ಹೊಸಕೋಟೆ-ದಾಬಸ್‌ಪೇಟೆ ಉಪನಗರ ಹೊರ ವರ್ತುಲ ಹೆದ್ದಾರಿಯಲ್ಲಿ ಸಂಭವಿಸಿದ ಅಫಘಾತದಲ್ಲಿ ಕ್ಯಾಂಟರ್ ಹಾಗೂ ಬಸ್ ಜಖಂಗೊಂಡಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿಟ್ಟನಹಳ್ಳಿ ಬಡಾವಣೆಗೆ ಸಮರ್ಪಕ ನೀರಿನ ವ್ಯವಸ್ಥೆ ಇಲ್ಲ
ಗುಟ್ಕಾ ನಿಷೇಧ: ಸಚಿವ ಯು.ಟಿ ಖಾದರ್ ಕ್ರಮ ಸ್ವಾಗತಾರ್ಹ