ಕಾರು ಅಪಘಾತ: ಬಿಟಿಡಿಎ ಎಇಇ ನೋಟಗಾರ ಪತ್ನಿ ಸಾವು

KannadaprabhaNewsNetwork |  
Published : Feb 23, 2026, 03:00 AM IST
ಕಾರು ಅಪಘಾತ : ಬಿಟಿಡಿಎ ಎಇಇ ನೋಟಗಾರ ಪತ್ನಿ ಸಾವು | Kannada Prabha

ಸಾರಾಂಶ

ನವನಗರದ ತೊಟಗಾರಿಕೆ ವಿವಿ ಮುಂಭಾಗದ ಸಿಮಿಕೇರಿ ಬೈಪಾಸ್‌ಗೆ ಹೋಗುವ ರಸ್ತೆಯಲ್ಲಿ ಕಾರು ಪಲ್ಟಿಯಾಗಿ, ಬಿಟಿಡಿಎ ಸಹಾಯಕ ಕಾರ್ಯನಿರ್ವಾಹಕ ಅಭಿಂತರ ಸೋಮಲಿಂಗ ನೋಟಗಾರ ಅವರ ಪತ್ನಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಭಾನುವಾರ ಸಂಜೆ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನವನಗರದ ತೊಟಗಾರಿಕೆ ವಿವಿ ಮುಂಭಾಗದ ಸಿಮಿಕೇರಿ ಬೈಪಾಸ್‌ಗೆ ಹೋಗುವ ರಸ್ತೆಯಲ್ಲಿ ಕಾರು ಪಲ್ಟಿಯಾಗಿ, ಬಿಟಿಡಿಎ ಸಹಾಯಕ ಕಾರ್ಯನಿರ್ವಾಹಕ ಅಭಿಂತರ ಸೋಮಲಿಂಗ ನೋಟಗಾರ ಅವರ ಪತ್ನಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಭಾನುವಾರ ಸಂಜೆ ಸಂಭವಿಸಿದೆ.

ದೀಪಿಕಾ ಸೋಮಲಿಂಗ ತೋಟಗಾರ (38) ಮೃತರು. ದೀಪಿಕಾ ಅವರು ಪುತ್ರ, ಸಹೋದರನೊಂದಿಗೆ ಗದ್ದನಕೇರಿ ಕ್ರಾಸ್‌ಗೆ ತರಕಾರಿ ತರಲು ಕಾರಿನಲ್ಲಿ ಹೊರಟಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ವಿಭಜಕ್ಕೆ ಕಾರು ಡಿಕ್ಕಿ ಹೊಡೆದಿದ್ದು, ಇದರಿಂದ ಕಾರು ಎರಡು ಪಲ್ಟಿಯಾಗಿದೆ.

ತಲೆಗೆ ತೀವ್ರ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ದೀಪಿಕಾ ಅವರು, ಸ್ಥಳದಲ್ಲಿಯೇ ಮೃತಪಟ್ಟಿದ್ದು, ಘಟನೆಯಲ್ಲಿ ಪುತ್ರ ಹಾಗೂ ಸಹೋದರ ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಇಇ ಸೋಮಲಿಂಗ ನೋಟಗಾರ ಅವರ ಪತ್ನಿ ದೀಪಿಕಾ ಅವರ ನಿಧನಕ್ಕೆ ಬಿಟಿಡಿಎ ಮುಖ್ಯ ಅಭಿಯಂತರರು, ಕಾರ್ಯನಿರ್ವಾಹಕ ಅಭಿನಂತರರು, ಸಹಾಯಕರ ಕಾರ್ಯ ನಿರ್ವಾಹಕ ಅಭಿಯಂತರರು, ಮುಖ್ಯ ಲೆಕ್ಕಾಧಿಕಾರಿಗಳು ಹಾಗೂ ಇತರ ಎಲ್ಲ ಅಧಿಕಾರಿ-ಸಿಬ್ಬಂದಿಗಳು ಸಂತಾಪ ಸೂಚಿಸಿದ್ದಾರೆ.

ಮೃತರ ಅಂತ್ಯಕ್ರಿಯೆ, ಸ್ವಗ್ರಾಮ ಬಾದಾಮಿ ತಾಲೂಕಿನ ಮುತ್ತಲಗೇರಿಯಲ್ಲಿ ಸೋಮವಾರ ಬೆಳಗ್ಗೆ 9 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಂಪಿಗಳ ಜತೆ ಸಿಎಂ ಸರ್ವಪಕ್ಷ ಸಭೆಗೆ ವಿಪಕ್ಷಗಳಿಂದ ಮೆಚ್ಚುಗೆ
ಕಾವೇರಿ ವಿವಾದ : ತ.ನಾಡು ಸಿಎಂ ಸಭೆ ಬಗ್ಗೆ ಕುತೂಹಲ