ಕಾರು ಡಿಕ್ಕಿ: ಮೂರು ವರ್ಷದ ಮಗು ಬಲಿ

KannadaprabhaNewsNetwork |  
Published : Jul 18, 2026, 12:15 AM IST
೧೭ಶಿರಾ೨: ಸೈಯದ್ ಹುಜೆಪ್ (೩) | Kannada Prabha

ಸಾರಾಂಶ

ಶಿರಾ: ಮನೆ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಪುಟ್ಟ ಮಗುವಿನ ಮೇಲೆ ಕಾರು ಹರಿದು ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿರಾ ತಾಲೂಕು ಬುಕ್ಕಾಪಟ್ಟಣ ಗ್ರಾಮದ ಸಂತೆ ದಿಬ್ಬ ಬಡಾವಣೆಯಲ್ಲಿ ಗುರುವಾರ ಸಂಜೆ ನಡೆದಿದೆ.

ಶಿರಾ: ಮನೆ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಪುಟ್ಟ ಮಗುವಿನ ಮೇಲೆ ಕಾರು ಹರಿದು ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿರಾ ತಾಲೂಕು ಬುಕ್ಕಾಪಟ್ಟಣ ಗ್ರಾಮದ ಸಂತೆ ದಿಬ್ಬ ಬಡಾವಣೆಯಲ್ಲಿ ಗುರುವಾರ ಸಂಜೆ ನಡೆದಿದೆ. ಝಕಿಯ ಬಾನು ಸೈಯದ್ ಹುಮರ್ ದಂಪತಿಯ ಮೂರು ವರ್ಷದ ಬಾಲಕ ಸೈಯ್ಯದ್ ಹುಜೆಪ್ ಸಾವಿಗೀಡಾದ ದುರ್ದೈವಿಯಾಗಿದ್ದಾನೆ, ಗುರುವಾರ ಸಂಜೆ ಮನೆಯ ಮುಂದೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಪುರ ಗ್ರಾಮದಿಂದ ವೇಗವಾಗಿ ಬಂದ ಕಾರೊಂದು ಮಗುವಿನ ಮೇಲೆ ಹರಿದ ಪರಿಣಾಮ ಮಗು ಸ್ಥಳದಲ್ಲಿ ಸಾವನ್ನಪ್ಪಿದೆ. ಬುಕ್ಕಾಪಟ್ಟಣ ಗ್ರಾಮದ ಅಬ್ಬಾಸ್ ರವರ ಮಗಳಾದ ಝಕೀಯ ಬಾನು ರವರನ್ನು ಮಧುಗಿರಿ ತಾಲೂಕಿನ ಹೊಸಕೆರೆಗೆ ಕೊಟ್ಟು ಮದುವೆ ಮಾಡಲಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದರು ಮೊಮ್ಮಗ ಸೈಯ್ಯದ್ ಹುಜೆಪ್ ನನ್ನು ಅಜ್ಜಿ ಮನೆಯಲ್ಲಿ ಬಿಟ್ಟು ಹೋಗಿದ್ದ ದಂಪತಿಗೆ ಮಗುವಿನ ಸಾವು ಕಂಗಾಲಾಗುವಂತೆ ಮಾಡಿದೆ. ಕಾರಿನ ಚಾಲಕ ಕಾರು ನಿಲ್ಲಿಸದೆ ಕಾರನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ. ಶಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಳ್ವಾಸ್‌ನ 21 ವಿದ್ಯಾರ್ಥಿಗಳಿಗೆ 99 ಪರ್ಸಂಟೈಲ್‌ಗಿಂತ ಅಧಿಕ ಅಂಕ
ನೀಟ್ ಮರುಪರೀಕ್ಷೆ ರಿಸಲ್ಟ್‌ ಬಗ್ಗೆ ವಿದ್ಯಾರ್ಥಿಗಳ ಅತೃಪ್ತಿ