ಮುಡಿಗುಂಡ ಬಳಿ ನಿಯಂತ್ರಣ ತಪ್ಪಿ ಸೇತುವೆಗೆ ಕಾರು ಡಿಕ್ಕಿ: ಇಬ್ಬರು ಬಲಿ

KannadaprabhaNewsNetwork |  
Published : Jun 20, 2026, 01:45 AM IST
ಮೂವರಿಗೆ ತೀವ್ರ ಗಾಯ | Kannada Prabha

ಸಾರಾಂಶ

ರಾತ್ರಿ ಹೊತ್ತಿನಲ್ಲಿ ಕಾರು ಚಾಲನೆ ವೇಳೆ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟು, ಮೂವರು ಗಂಭ ಈರವಾಗಿ ಗಾಯಗೊಂಡಿರುವ ಘಟನೆಯು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮುಡಿಗುಂಡ ಸೇತುವೆ ಬಳಿ ಗುರುವಾರ ರಾತ್ರಿ ನಡೆದಿದೆ.

ಮೂವರ ಸ್ಥಿತಿ ಗಂಭೀರ, ಮೈಸೂರಲ್ಲಿ ಚಿಕಿತ್ಸೆ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ರಾತ್ರಿ ಹೊತ್ತಿನಲ್ಲಿ ಕಾರು ಚಾಲನೆ ವೇಳೆ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟು, ಮೂವರು ಗಂಭ ಈರವಾಗಿ ಗಾಯಗೊಂಡಿರುವ ಘಟನೆಯು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮುಡಿಗುಂಡ ಸೇತುವೆ ಬಳಿ ಗುರುವಾರ ರಾತ್ರಿ ನಡೆದಿದೆ.

ಕೊಳ್ಳೇಗಾಲ ನ್ಯಾಯಾಲಯದ ಶಿರಸ್ತೇದಾರ್‌ ಬಾಗೇಪಲ್ಲಿ ನಂಜುಂಡಪ್ಪ (50), ಗುಮಾಸ್ತರಾದ ಯಮುನಪ್ಪ ಭಜಂತ್ರಿ (40) ಮೃತರು. ಬೆಂಚ್‌ ಕ್ಲರ್ಕ್‌ ಕೃಷ್ಣಪ್ಪ, ಪ್ರಥಮ ದರ್ಜೆ ನೌಕರ ಲೋಕೇಶ್‌, ಗುಮಾಸ್ತ ಶಂಕರಪ್ಪ ತೀವ್ರವಾಗಿ ಗಾಯಗೊಂಡಿದ್ದು, ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಐವರು ಸಂತೇಮರಹಳ್ಳಿ ಸಮೀಪದ ನಡುಕಲುಮೋಳೆ ಗ್ರಾಮದಲ್ಲಿ ತಮ್ಮ ಸ್ನೇಹಿತನ ಮಗುವಿನ ನಾಮಕರಣ ಕಾರ್ಯಕ್ರಮಕ್ಕೆ ತೆರಳು ರಾತ್ರಿ ವೇಳೆ ವಾಪಾಸಾಗುತ್ತಿದ್ದರು. ಈ ವೇಳೆ ಮುಡಿಗುಂಡ ಬಳಿ ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನ್ಯಾಯಾಧೀಶರ ಕಂಬನಿ:

ಇಬ್ಬರ ಅಗಲುವಿಕೆಗೆ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಪ್ರಭಾವತಿ, ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಟಿ.ಸಿ. ಶ್ರೀಕಾಂತ್, ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾ. ಸುನೀತಾ, ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾ. ಕಾವ್ಯ, ಅಪರ ಸಿವಿಲ್ ನ್ಯಾಯಾಧೀಶರಾದ ಎಂ. ರಂಜಿತ್ ಕುಮಾರ್‌ ಸೇರಿದಂತೆ ನ್ಯಾಯಾಲಯದ ಸಿಬ್ಬಂದಿ, ವಕೀಲರು ಕಂಬನಿ ಮಿಡಿದಿದ್ದಾರೆ.

---

19ಕೆಜಿಎಲ್10

ನಂಜುಂಡಪ್ಪ, ಭಜಂತ್ರಿ

--

19ಕೆಜಿಎಲ್ 11

ಜಖಂಗೊಂಡಿರುವ ಕಾರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜುಲೈ 15ರೊಳಗೆ ಇಲಾಖೆಗಳ ಕ್ರಿಯಾ ಯೋಜನಾ ವರದಿ ಸಲ್ಲಿಸಿ
ಹಾಡಹಗಲೇ ಮನೆಗೆ ನುಗ್ಗಿ ವೃದ್ಧೆ ಹತ್ಯೆ: ಕಿವಿ ಸಮೇತ ಓಲೆ ಕಿತ್ತು ಪರಾರಿ