ಮಹೇಂದ್ರ ಜೀಪು ಹಾಗೂ ಎದುರು ಬರುತ್ತಿದ್ದ ಎಂಜಿ ಹೆಕ್ಟೇರ್ ಕಾರು ನಡುವೆ ಸಂಭಲಿಸಿದ ಅಪಘಾತದ ರಭಸಕ್ಕೆ ಜೀಪಿನ ಮುಂಭಾಗ ಸಂಪೂರ್ಣ ಜಖಂ ಗೊಂಡು ಪಲ್ಟಿ ಹೊಡೆದು ಬಿದ್ದಿದೆ. ಎಂಜಿ ಕಾರಿನ ಎಡ ಭಾಗ ಜಖಂ ಗೊಂಡಿದೆ.
ಗುಂಡ್ಲುಪೇಟೆ: ಪಟ್ಟಣದ ನಡುವೆ ಹಾದು ಹೋಗುವ ಮೈಸೂರು-ಊಟಿ ಹೆದ್ದಾರಿ ನಿಸರ್ಗ ಲೇಔಟ್ ಮುಂದೆ ಕಾರು ಹಾಗೂ ಜೀಪು ನಡುವೆ ಡಿಕ್ಕಿ ಸಂಭವಿಸಿ ಮೂವರಿಗೆ ಸಣ್ಣ ಪುಟ್ಟ ಗಾಯಗಳಾದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಮಹೇಂದ್ರ ಜೀಪು ಹಾಗೂ ಎದುರು ಬರುತ್ತಿದ್ದ ಎಂಜಿ ಹೆಕ್ಟೇರ್ ಕಾರು ನಡುವೆ ಸಂಭಲಿಸಿದ ಅಪಘಾತದ ರಭಸಕ್ಕೆ ಜೀಪಿನ ಮುಂಭಾಗ ಸಂಪೂರ್ಣ ಜಖಂ ಗೊಂಡು ಪಲ್ಟಿ ಹೊಡೆದು ಬಿದ್ದಿದೆ. ಎಂಜಿ ಕಾರಿನ ಎಡ ಭಾಗ ಜಖಂ ಗೊಂಡಿದೆ. ಕಾರಲ್ಲಿದ್ದ ಫುವಲಿಕ ಹಾಗೂ ಗಾಯತ್ರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪೊಲೀಸರು ಗುಂಡ್ಲುಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆದಿದ್ದಾರೆ. ಮಹೀಂದ್ರ ಜೀಪ್ ಚಾಲಕನಿಗೆ ಗಾಯವಾಗಿದ್ದು, ಆತ ಘಟನಾ ಸ್ಥಳದಲ್ಲಿ ಇರಲಿಲ್ಲ. ಈ ಸಂಬಂಧ ಗುಂಡ್ಲುಪೇಟೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.