ಕಾರು-ಲಾರಿ ಮಧ್ಯೆ ಅಪಘಾತ: ನಾಲ್ವರ ಸಾವು

KannadaprabhaNewsNetwork |  
Published : Apr 14, 2024, 01:55 AM IST
ಅಪಘಾತ | Kannada Prabha

ಸಾರಾಂಶ

ಕಾರು ಹಾಗೂ ಸಿಮೆಂಟ್ ಸಾಗಿಸುತ್ತಿದ್ದ ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಬಾಲಕ ಸೇರಿ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿ ಮೂವರು ಗಾಯಗೊಂಡ ಘಟನೆ ಬಬಲೇಶ್ವರ ತಾಲೂಕಿನ ಅರ್ಜುಣಗಿ ಬಳಿ ಶನಿವಾರ ಬೆಳಗ್ಗೆ ನಡೆದಿದೆ.

ಕನ್ನಡಪ್ರಭ ವಾರ್ತೆ ವಿಜಯಪುರಕಾರು ಹಾಗೂ ಸಿಮೆಂಟ್ ಸಾಗಿಸುತ್ತಿದ್ದ ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಬಾಲಕ ಸೇರಿ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿ ಮೂವರು ಗಾಯಗೊಂಡ ಘಟನೆ ಬಬಲೇಶ್ವರ ತಾಲೂಕಿನ ಅರ್ಜುಣಗಿ ಬಳಿ ಶನಿವಾರ ಬೆಳಗ್ಗೆ ನಡೆದಿದೆ.

ಬಾಗಲಕೋಟೆ ಜಿಲ್ಲೆ ಮುಧೋಳ ಪಟ್ಟಣದ ನಿವಾಸಿಗಳಾದ ರವಿನಾಥ ಪತ್ತಾರ (52), ಪತ್ನಿ ಪುಷ್ಟಾ ರವಿನಾಥ ಪತ್ತಾರ (40), ತಿಕೋಟಾ ತಾಲೂಕಿನ ಬರಟಗಿ ತಾಂಡಾ ನಿವಾಸಿ ಅರ್ಜುನ ರಜಪೂತ (32), ವಿಜಯಪುರ ನಗರದ ನಿವಾಸಿ ಮೇಘರಾಜ ರಜಪೂತ (12) ಮೃತರು. ಕಾರಿನಲ್ಲಿದ್ದ ಜಯಶ್ರೀ ರಜಪೂತ, ನಯಾರಾ ರಜಪೂತ, ಪ್ರೇಮಸಿಂಗ್ ರಜಪೂತ ಇವರು ಗಾಯಗೊಂಡಿದ್ದು, ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಏಳು ಜನರು ವಿಜಯಪುರದಿಂದ ಜಮಖಂಡಿಯ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದಾಗ ಜಮಖಂಡಿ ಕಡೆಯಿಂದ ವಿಜಯಪುರದತ್ತ ಬರುತ್ತಿದ್ದ ಸಿಮೆಂಟ್ ಲೋಡ್ ಮಾಡಿದ್ದ ಲಾರಿ ಮುಖಾಮುಖಿ ಡಿಕ್ಕಿಯಾಗಿ ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಎಸ್.ಪಿ ಋಷಿಕೇಶ ಸೋನಾವಣೆ, ಹೆಚ್ಚುವರಿ ಎಸ್.ಪಿ ಶಂಕರ ಮಾರಿಹಾಳ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ