ಶಿಗ್ಗಾಂವಿ ಬಂದ್‌ಗೆ ಕಾರು-ಟ್ಯಾಕ್ಸಿ ಸಂಘದ ಬೆಂಬಲ ಇಲ್ಲ

KannadaprabhaNewsNetwork |  
Published : Aug 25, 2026, 02:30 AM IST
ಶಿಗ್ಗಾಂವಿ ಬಂದ್‌ಗೆ ಕಾರು ಮತ್ತು ಟ್ಯಾಕ್ಸಿ ಸಂಘ ಸಮ್ಮತಿ ಇಲ್ಲ ಎಂದು ಸಂಘದ ಅಧ್ಯಕ್ಷ ಸಿದ್ದಪ್ಪ ಕಾಳೆ ಹಾಗೂ ಸರ್ವ ಸದಸ್ಯರು ಶಿಗ್ಗಾಂವಿ ಪೊಲೀಸ್ ಠಾಣೆಯ ಸಿಪಿಐ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಪಟ್ಟಣದ ವೀರಾಂಜನೇಯ ದೇವಸ್ಥಾನದಲ್ಲಿ ನಡೆದ ಮೂತ್ರ ವಿಸರ್ಜನೆ ಘಟನೆಗೆ ಸಂಬಂಧಿಸಿದಂತೆ ಕೆಲ ಮುಖಂಡರು ಕರೆ ನೀಡಿರುವ ಬಂದ್‌ಗೆ ಕಾರು ಮತ್ತು ಟ್ಯಾಕ್ಸಿ ಸಂಘದ ಸಮ್ಮತಿ ಇಲ್ಲ ಎಂದು ಸಂಘದ ಅಧ್ಯಕ್ಷ ಸಿದ್ದಪ್ಪ ಕಾಳೆ ಹಾಗೂ ಸರ್ವ ಸದಸ್ಯರು ತಿಳಿಸಿದ್ದಾರೆ.

ಶಿಗ್ಗಾಂವಿ: ಪಟ್ಟಣದ ವೀರಾಂಜನೇಯ ದೇವಸ್ಥಾನದಲ್ಲಿ ನಡೆದ ಮೂತ್ರ ವಿಸರ್ಜನೆ ಘಟನೆಗೆ ಸಂಬಂಧಿಸಿದಂತೆ ಕೆಲ ಮುಖಂಡರು ಕರೆ ನೀಡಿರುವ ಬಂದ್‌ಗೆ ಕಾರು ಮತ್ತು ಟ್ಯಾಕ್ಸಿ ಸಂಘದ ಸಮ್ಮತಿ ಇಲ್ಲ ಎಂದು ಸಂಘದ ಅಧ್ಯಕ್ಷ ಸಿದ್ದಪ್ಪ ಕಾಳೆ ಹಾಗೂ ಸರ್ವ ಸದಸ್ಯರು ತಿಳಿಸಿದ್ದಾರೆ.

ಈ ಕುರಿತು ಶಿಗ್ಗಾಂವಿ ಪೊಲೀಸ್ ಠಾಣೆಯ ಸಿಪಿಐಗೆ ಮನವಿ ಸಲ್ಲಿಸಿರುವ ಅವರು, ದೇವಸ್ಥಾನದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಜಾಫರ್ ಎಂಬ ವ್ಯಕ್ತಿಯ ವಿರುದ್ಧ ತಾವು ಈಗಾಗಲೇ ದೂರು ದಾಖಲಿಸಿದ್ದೇವೆ. ಘಟನೆ ಖಂಡನೀಯವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಆದರೆ ನಗರದ ಹಿತದೃಷ್ಟಿಯಿಂದ ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಅಗತ್ಯವಾಗಿದೆ. ಹೀಗಾಗಿ ಕೆಲ ಮುಖಂಡರು ನೀಡಿರುವ ಬಂದ್ ಕರೆಗೆ ಕಾರು ಮತ್ತು ಟ್ಯಾಕ್ಸಿ ಸಂಘದ ಸಮ್ಮತಿ ಇರುವುದಿಲ್ಲ. ಯಾರಾದರೂ ಸ್ವಯಂಪ್ರೇರಿತವಾಗಿ ಬಂದ್ ನಡೆಸಿದರೆ ಅದಕ್ಕೂ ಸಂಘಕ್ಕೂ ಯಾವುದೇ ಸಂಬಂಧವಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಸಂಘದ ಅಧ್ಯಕ್ಷ ಸಿದ್ದಪ್ಪ ಕಾಳೆ ಹಾಗೂ ಸರ್ವ ಸದಸ್ಯರಾದ ರವಿ ಕೆ. ಚವ್ಹಾಣ, ರವೀಂದ್ರ ವೈ. ಬಳಿಗೇರ, ವಿನಾಯಕ ಸಿ.ಕುಂದಗೋಳ, ರಮೇಶ ವನಹಳ್ಳಿ, ಗಂಗಾಧರ ರಾಮಣ್ಣಾ ನೆಲ್ಲೂರ, ಮಲ್ಲಿಕಾರ್ಜುನ ನವಲಗುಂದ, ಸಂಜೀವ ಬಾರಿಗಿಡದ, ಗುರುರಾಜ ಹೊಣ್ಣನವರ, ಸಹಿ ಮಾಡಿದ ಮನವಿಯನ್ನು ಶಿಗ್ಗಾಂವಿ ಸಿಪಿಐ ಅವರಿಗೆ ಸಲ್ಲಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ ಪ್ರಾರಂಭಿಸಲು ಆಗ್ರಹಿಸಿ ಪ್ರತಿಭಟನೆ
ಹಗಲು ೭ ತಾಸು ತ್ರಿಫೇಸ್ ವಿದ್ಯುತ್‌ಗೆ ಆಗ್ರಹಿಸಿ ಪ್ರತಿಭಟನೆ