ಉಚಿತ ಪಡಿತರ ಅಕ್ಕಿ ಮಾರಾಟ ಮಾಡಿದರೆ ಕಾರ್ಡ್ ರದ್ದು: ಚಂದ್ರಮ್ಮ

KannadaprabhaNewsNetwork | Published : Mar 22, 2025 2:00 AM

ಸಾರಾಂಶ

ಬಾಳೆಹೊನ್ನೂರು, ಸರ್ಕಾರದಿಂದ ಬಿಪಿಎಲ್ ಸೇರಿದಂತೆ ಇತರೆ ಕಾರ್ಡುದಾರರಿಗೆ ನೀಡುತ್ತಿರುವ ಉಚಿತ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಅಂತಹವರ ಕಾರ್ಡುಗಳನ್ನು ಕೂಡಲೇ ರದ್ದು ಮಾಡಲಾಗುವುದು ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ ಹೇಳಿದರು.

ಪಟ್ಟಣದ ಬಿ.ಕಣಬೂರು ಗ್ರಾಪಂ ಪಡಿತರ ವಿತರಣಾ ಕೇಂದ್ರಗಳಿಗೆ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಭೇಟಿ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಸರ್ಕಾರದಿಂದ ಬಿಪಿಎಲ್ ಸೇರಿದಂತೆ ಇತರೆ ಕಾರ್ಡುದಾರರಿಗೆ ನೀಡುತ್ತಿರುವ ಉಚಿತ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಅಂತಹವರ ಕಾರ್ಡುಗಳನ್ನು ಕೂಡಲೇ ರದ್ದು ಮಾಡಲಾಗುವುದು ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ ಹೇಳಿದರು.ಪಟ್ಟಣದ ಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ವಿವಿಧ ಪಡಿತರ ವಿತರಣಾ ಕೇಂದ್ರಗಳಿಗೆ ಶುಕ್ರವಾರ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರು ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ ಮಾತನಾಡಿದರು. ಜಿಲ್ಲಾಧಿಕಾರಿಗಳ ಆದೇಶ ದನ್ವಯ ಗ್ಯಾರಂಟಿ ಯೋಜನೆಗಳ ಸಮಿತಿಯ ಸದಸ್ಯರು ತಾಲೂಕಿನ 29 ಕಡೆಗಳಲ್ಲಿ ಇರುವ ಪಡಿತರ ವಿತರಣಾ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಕುಂದು ಕೊರತೆ, ಪಡಿತರ ವಿತರಣೆಯಲ್ಲಿ ಲೋಪದೋಷವಾಗುತ್ತಿದೆಯೋ ಎಂಬುದನ್ನು ಪರಿಶೀಲಿಸ ಲಾಗುತ್ತಿದೆ.

ಪಡಿತರ ಚೀಟಿದಾರರಿಗೆ ಸರಿಯಾಗಿ ಪಡಿತರ ವಿತರಣೆ ಮಾಡುತ್ತಿದ್ದಾರೋ, ಸರ್ಕಾರದಿಂದ ದೊರೆಯುವ ಸೌಲಭ್ಯದಿಂದ ಯಾರಾದರೂ ವಂಚಿತರಾಗಿದ್ದಾರೋ ಎಂದು ತಿಳಿದುಕೊಳ್ಳಲಾಗುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಪ್ರತೀ ಸದಸ್ಯರಿಗೆ 10 ಕೆಜಿ ಅಕ್ಕಿ ನೀಡುವ ಭರವಸೆ ನೀಡಿದ್ದು, ಈ ಹಿಂದೆ 5 ಕೆಜಿ ಅಕ್ಕಿ ಹಾಗೂ 5ಕೆಜಿ ಅಕ್ಕಿ ಹಣವನ್ನು ಖಾತೆಗೆ ವರ್ಗಾಯಿಸಲಾಗುತ್ತಿತ್ತು ಎಂದರು.ಪ್ರಸ್ತುತ ತಿಂಗಳಲ್ಲಿ ಫೆಬ್ರವರಿ ತಿಂಗಳಿನ ಅಕ್ಕಿ ಸೇರಿಸಿ ಚೀಟಿದಾರರಿಗೆ ನೀಡಲಾಗುತ್ತಿದೆ. ವಿತರಣಾ ಕೇಂದ್ರಗಳ ಮುಂಭಾಗ ದಲ್ಲಿ ಕಾರ್ಡುದಾರರಿಗೆ ಎಷ್ಟು ಅಕ್ಕಿ ವಿತರಣೆ ಮಾಡಲಾಗುತ್ತದೆ ಎಂಬ ಮಾಹಿತಿ ಫಲಕ ಸಹ ಅಳವಡಿಸಲಾಗಿದೆ. ಏಪ್ರಿಲ್ ತಿಂಗಳಿನಿಂದ ಪ್ರತೀ ಸದಸ್ಯರಿಗೆ 10 ಕೆಜಿ ಅಕ್ಕಿ ನೀಡಲಾಗುತ್ತದೆ ಎಂದು ತಿಳಿಸಿದರು.ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ಕೆ.ಕೆ.ಗೌತಮ್, ಅರುಣ್‌ ಕುಮಾರ್, ಹೂವಮ್ಮ, ಟಿ.ಟಿ.ಇಸ್ಮಾಯಿಲ್, ಕಾಂಗ್ರೆಸ್ ಮುಖಂಡ ಹಿರಿಯಣ್ಣ ಮತ್ತಿತರರು ಹಾಜರಿದ್ದರು.೨೧ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ಹಲಸೂರು ರಸ್ತೆಯ ಟಿಎಪಿಸಿಎಂಎಸ್ ಪಡಿತರ ವಿತರಣಾ ಕೇಂದ್ರಕ್ಕೆ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರು ಭೇಟಿ ನೀಡಿ ಪಡಿತರ ವಿತರಣೆ ಕುರಿತು ಪರಿಶೀಲಿಸಿದರು. ಚಂದ್ರಮ್ಮ, ರವಿಚಂದ್ರ, ಗೌತಮ್, ಅರುಣ್‌ಕುಮಾರ್, ಹೂವಮ್ಮ, ಇಸ್ಮಾಯಿಲ್, ಹಿರಿಯಣ್ಣ ಇದ್ದರು.

Share this article