ಕನ್ನಡಪ್ರಭ ವಾರ್ತೆ ಮಂಡ್ಯ
ಅಭಿಮಾನಿಗಳ ಅಭಿಮಾನಿ ಪುನೀತ್‌ರಾಜ್‌ಕುಮಾರ್ ಆಗಿದ್ದರು. ಅವರ ಸೇವಾಕಾರ್ಯ ಮತ್ತು ಸಮಾಜಮುಖಿ ಸಿನಿಮಾಗಳು ಅವರನ್ನು ಜೀವಂತವಾಗಿರಿಸಿವೆ. ಚಿತ್ರರಂಗ ಇರುವವರೆಗೂ ಪುನೀತ್ ಅಜರಾಮರವಾಗಿರುತ್ತಾರೆ. ಅಭಿಮಾನಿಗಳ ಮನದಲ್ಲಿ ನೆಲೆಯಾಗಿರುತ್ತಾರೆ ಎಂದು ಹೇಳಿದರು.
ಮುಖಂಡರಾದ ಶಿವನಂಜು ಮಾತನಾಡಿ, ಕರ್ನಾಟಕದ ಉತ್ಸಾಹದ ಚಿಲುಮೆ ಪುನೀತ್ ಅವರ ಆದರ್ಶ ಮತ್ತು ಸಾಧನೆ ಮಾದರಿ. ಕರ್ನಾಟಕ ಚಿತ್ರರಂಗವನ್ನು ಇಂಡಿಯಾದತ್ತ ಕೊಂಡೈದ ಹೆಗ್ಗಳಿಕೆ ಅವರಿಗಿದೆ ಎಂದು ತಿಳಿಸಿದರು.ನಗರಸಭೆ ಮಾಜಿ ಸದಸ್ಯ ಮಹೇಶ್, ಗುರುಕುಮಾರ್, ಪೆಟ್ರೋಲ್ ಬಂಕ್ ಸುರೇಶ್, ಅಭಿಜಿತ್, ನಂದನ್ , ರಘು, ಚಾಮರಾಜು, ಅಶೋಕ್, ಚಂದ್ರದಾರ್, ಚಂದ್ರು, ಪ್ರಕಾಶ್ ಇತರರಿದ್ದರು.
ಮಂಡ್ಯ: ನಗರಸಭೆ ಕಾರ್ಯಾಲಯದ ಧರಣಪ್ಪ ಸಭಾಂಗಣದಲ್ಲಿ ಮಾ.26 ರಂದು ನಗರಸಭೆ ಅಧ್ಯಕ್ಷ ನಾಗೇಶ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ (2024-25ನೇ ಸಾಲಿನ ಪರಿಷ್ಕೃತ ಹಾಗೂ 2025-26ನೇ ಸಾಲಿನ ಅಂದಾಜು ಆಯವ್ಯಯ ಮಂಡನೆ) ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಮಂಡ್ಯ: ವಿವೇಕಾನಂದ ನಗರದ ಚಿಕ್ಕಮಂಡ್ಯ ಕೆರೆ ಅಂಗಳದಲ್ಲಿ ಮಾ.23ರಂದು ಜಿಲ್ಲೆಯ ನೂತನ ಕಾರ್ಮಿಕ ಭವನ ಉದ್ಘಾಟನೆ ಉದ್ಘಾಟನೆಯಾಗಲಿದೆ.
ಕಾರ್ಮಿಕ ಸಚಿವ ಸಂತೋಷ್ ಎನ್.ಲಾಡ್ ಕಾರ್ಮಿಕ ಇಲಾಖೆಯ ವಿವಿಧ ಸೌಲಭ್ಯ ವಿತರಣೆ ಮಾಡಲಿದ್ದಾರೆ. ಶಾಸಕರಾದ ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಪಿ.ಎಂ. ನರೇಂದ್ರಸ್ವಾಮಿ ಗೌರವ ಉಪಸ್ಥಿತರಿರುವರು. ಶಾಸಕ ಪಿ.ರವಿಕುಮಾರ್ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್ ಸದಸ್ಯರಾದ ಮಧು ಜಿ. ಮಾದೇಗೌಡ, ದಿನೇಶ್ ಗೂಳಿಗೌಡ, ಕೆ.ವಿವೇಕಾನಂದ, ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ಎಚ್.ಟಿ ಮಂಜು, ಕೆ.ಎಂ ಉದಯ, ನಗರಸಭೆ ಅಧ್ಯಕ್ಷ ಎಂ.ವಿ ಪ್ರಕಾಶ್ (ನಾಗೇಶ್), ಮೈಷುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಯೀಮ್ ಆಗಮಿಸಲಿದ್ದಾರೆ.