ಬಡವರ ಶಿಕ್ಷಣಕ್ಕೆ ಸೌಲಭ್ಯ ಕೇರ್‌ ಟ್ರಸ್ಟ್‌ ಆಶಯ

KannadaprabhaNewsNetwork |  
Published : Jun 18, 2025, 11:49 PM IST
ಕೇರ್ ಟ್ರಸ್ಟ್ ಕಂಪನಿಯವರು ಧುಳೆಹೊಳೆ ಶಾಲೆಗೆ ಗಣಕಯಂತ್ರ ಹಸ್ತಾತರಿಸಿದರು. | Kannada Prabha

ಸಾರಾಂಶ

ಸೌಲಭ್ಯ ವಂಚಿತ ಸರ್ಕಾರಿ ಶಾಲೆಯ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ನೆರವು ನೀಡುವುದು ನಮ್ಮ ಆಶಯವಾಗಿದೆ ಎಂದು ಕೇರ್ ಟ್ರಸ್ಟ್ ಮುಖ್ಯಸ್ಥ ಆನಂದ್ ಹೇಳಿದ್ದಾರೆ.

- ನಲಿ-ಕಲಿ ಸಾಮಗ್ರಿಗಳ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯಸ್ಥ ಆನಂದ್

- - -

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು ಸೌಲಭ್ಯ ವಂಚಿತ ಸರ್ಕಾರಿ ಶಾಲೆಯ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ನೆರವು ನೀಡುವುದು ನಮ್ಮ ಆಶಯವಾಗಿದೆ ಎಂದು ಕೇರ್ ಟ್ರಸ್ಟ್ ಮುಖ್ಯಸ್ಥ ಆನಂದ್ ಹೇಳಿದರು.

ಇಲ್ಲಿಗೆ ಸಮೀಪದ ಧುಳೆಹೊಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕ ಶರಣ್‌ಕುಮಾರ್ ಹೆಗಡೆ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಕೇರ್ ಟ್ರಸ್ಟ್ ಟೆಕ್ನಾಲಜೀಸ್‌ನಿಂದ ಶಾಲಾ ಮಕ್ಕಳಿಗೆ ಉಚಿತ ನಲಿ-ಕಲಿ ಸಾಮಗ್ರಿಗಳು ಮತ್ತು ಕಂಪ್ಯೂಟರ್ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಹಾಯ ಪಡೆದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿ, ಭಾರತ ಹಾಗೂ ತಂದೆ-ತಾಯಿಗೆ ಉತ್ತಮ ಹೆಸರು, ಕೀರ್ತಿ ತರಬೇಕು ಎಂದರು.

ಸಂಸ್ಥೆ ನಿರ್ದೇಶಕ ಗುರುರಾಜ್ ಮಾತನಾಡಿ, ಗ್ರಾಮೀಣ ಮಕ್ಕಳಿಗೆ ನೆರವು ಮಾಡುವ ಉದೇಶದಿಂದ ಹಳ್ಳಿಯವರೇ ಸೇರಿಕೊಂಡು ಸಂಸ್ಥೆ ಸ್ಥಾಪಿಸಿ ನೋಂದಾಯಿಸಿ, ರಾಜ್ಯದ ೧೬೦೦ ಮಕ್ಕಳಿಗೆ ನೆರವು ಮತ್ತು ಉದ್ಯೋಗ ಪಡೆಯಲು ಮಾರ್ಗದರ್ಶನ ಮಾಡುತ್ತಿದ್ದೇವೆ. ಶಾಲಾ ಶಿಕ್ಷಕರು ಮತ್ತು ಎಸ್‌ಡಿಎಂಸಿ ಪದಾಧಿಕಾರಿಗಳು ಈ ವಿಷಯದಲ್ಲಿ ನಿಷ್ಠೆ ತೀರಬೇಕಿದೆ ಎಂದರು.

ರಾಜ್ಯ ಪ್ರಶಸ್ತಿ ಪಡೆದ ಶಿಕ್ಷಕ ಶ್ರ್ರಿಧರ್‌ ಮಯ್ಯ ಮಾತನಾಡಿ, ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಗುತ್ತೂರು ಸರ್ಕಾರಿ ಪ್ರೌಢಶಾಲೆಗೆ ₹50 ಲಕ್ಷ ಮೊತ್ತದ ಶೌಚಾಲಯ, ನೋಟ್ ಬುಕ್, ಸುಣ್ಣಬಣ್ಣ ಸೌಲಭ್ಯವನ್ನು ಕೇರ್‌ ಟ್ರಸ್ಟ್ ಒದಗಿಸಿದೆ. ಹಾಗಾಗಿ ವಿದ್ಯಾರ್ಥಿಗಳು ಹಿರಿಯರಿಗೆ ಗೌರವ ನೀಡುತ್ತ ಸಂಸ್ಕೃತಿ ಅಳವಡಿಸಿಕೊಳ್ಳುವುದು ತುರ್ತು ಅಗತ್ಯ ಎಂದರು.

ಉಪಾಧ್ಯಾಯಿನಿ ಯಶೋಧಾ ಬಾರ್ಕಿ ಮಾತನಾಡಿ, ಶಾಲಾ ಮಕ್ಕಳನ್ನು ಮನೆಗೆ ಹೋಗಿ ಕರ್‍ಕೊಂಡು ಬರ್‍ತೀವಿ. ಆದರೆ, ಖಾಸಗಿ ಶಾಲೆಯವರು ಶುಲ್ಕ ಪಾವತಿ ಮಾಡದಿದ್ದರೆ ಮಕ್ಕಳನ್ನು ಮನೆಗೆ ಕಳುಹಿಸುತ್ತಾರೆ. ಇದು ವಿಷಾದನೀಯ ಸಂಗತಿ. ಇಂಥ ಸಂದರ್ಭದಲ್ಲಿ ಬೆಂಗಳೂರಿನ ಸಂಸ್ಥೆಯವರು ₹1 ಲಕ್ಷ ಮೌಲ್ಯದ ವಸ್ತುಗಳನ್ನು ನೀಡುತ್ತಿರುವುದು ಸಂತಸದ ಸಂಗತಿ ಎಂದರು.

ಟ್ರಸ್ಟ್‌ನ ಕಿಶೋರ್, ಗುರು, ಮುಖ್ಯ ಶಿಕ್ಷಕ ಶರಣ್‌ ಹೆಗಡೆ, ಉಪಾಧ್ಯಾಯರಾದ ರಶ್ಮಿ, ಹೇಮಾ, ಬೀಬಿ ಲೇಖಾ ಕಸಾಪ ಕಾರ್ಯದರ್ಶಿ ಸದಾನಂದ ಮತ್ತಿತರರು ಇದ್ದರು.

- - -

(ಕೋಟ್‌)

ಜಾತಿ ಕಿಚ್ಚು ಹೆಚ್ಚಾಗಿರುವ ಕಾಲದಲ್ಲಿ ಜ್ಯೋತಿ, ನೀತಿಗೆ ಬೆಲೆ ಇಲ್ಲದಾಗಿದೆ. ಈ ವೇಳೆಯಲ್ಲಿ ಬೆಂಗಳೂರಿನ ನೂರಾರು ಕಂಪನಿಗಳು ಹರಿಹರ ತಾಲೂಕಿನ ವಿದ್ಯಾರ್ಥಿಗಳಿಗೆ ಸಹಾಯಹಸ್ತ ಚಾಚುವುದಕ್ಕೆ ಶರಣ್‌ಕುಮಾರ್ ಹೆಗಡೆ ಅವರ ಪ್ರಯತ್ನ ಮೆಚ್ಚವಂಥದ್ದು.

- ಸಂತೋಷ್, ಶಿಕ್ಷಕ, ಜಿಎಂಸಿಜಿ ಪ್ರೌಢಶಾಲೆ

- - -

-ಚಿತ್ರ-೨.ಜೆಪಿಜಿ:

ಬೆಂಗಳೂರಿನ ಕೇರ್ ಟ್ರಸ್ಟ್ ಕಂಪನಿಯಿಂದ ಮಲೇಬೆನ್ನೂರು ಸಮೀಪದ ಧುಳೆಹೊಳೆ ಶಾಲೆಗೆ ಗಣಕಯಂತ್ರ ಸೌಲಭ್ಯ ಹಸ್ತಾತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ