ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ
ಗೋಣಿಕೊಪ್ಪದ ಖಾಸಗಿ ಸಭಾಂಗಣದಲ್ಲಿ ವಿರಾಜಪೇಟೆ ಬಿಜೆಪಿ ಮಂಡಲ ಆಯೋಜಿಸಿದ ಮೋದಿ ಸರ್ಕಾರದ 11 ವರ್ಷದ ಜನಪರ ಆಡಳಿತದ ವಿಚಾರ ವಿನಿಮಯ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.
ಪ್ರತಿಯೊಬ್ಬ ಭಾರತೀಯ ಪ್ರಜೆಗೂ ದೇಶ ಕಟ್ಟುವ ಮಹತ್ವದ ಜವಾಬ್ದಾರಿ ಇದೆ. ಅದನ್ನು ಸಮರ್ಪಕವಾಗಿ ನಿಭಾಯಿಸಲು, ಆ ಗುರಿಯತ್ತ ಸಾಗಲು ಒಬ್ಬ ನಾಯಕನ ಅಗತ್ಯ ಇದೆ. ಅಂತಹ ನಾಯಕ ಇಂದು ನಮಗೆ ಮೋದಿಯಾಗಿ ದೊರಕಿರುವುದು ಬಹುಜನ್ಮದ ಪುಣ್ಯ ಎಂದು ಶ್ಲಾಘಿಸಿದರು.ದೇಶ ಇಂದು ಆರ್ಥಿಕವಾಗಿ 4ನೇ ಸ್ಥಾನವನ್ನು ತಲುಪಿದೆ. ಈ ಪ್ರಗತಿ ನಮ್ಮ ಸುತ್ತಮುತ್ತಲಿನ ದೇಶಗಳಿಗೆ ಜೀರ್ಣಿಸಿಕೊಳ್ಳಲಾಗದ ವಿಚಾರವಾಗಿದ್ದರೂ, ಮೋದಿ ಸರ್ಕಾರ ಈ ದೇಶವನ್ನು ಮತ್ತಷ್ಟು ಪ್ರಗತಿಯ ಕಡೆಗೆ ಕೊಂಡೊಯ್ಯಲು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಕೃಷಿ ಕ್ಷೇತ್ರ, ಶೈಕ್ಷಣಿಕ, ವಿಜ್ಞಾನಗಳಲ್ಲಿ ಪ್ರಗತಿಯನ್ನು ಕಂಡುಕೊಳ್ಳುತ್ತಿದೆ. ದೇಶದ ಸೈನಿಕರ ಶಕ್ತಿಯನ್ನು ಹೆಚ್ಚಿಸಲಾಗಿದೆ. ಮಹಿಳಾ ಸಬಲೀಕರಣಕ್ಕೆ, ಅಲ್ಪಸಂಖ್ಯಾತರ ಮೇಲ್ಮಟ್ಟದ ಜೀವನಕ್ಕೆ ಆಧಾರಿತವಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇಂತಹ ಪ್ರಗತಿಪರ ಕಾರ್ಯಗಳ ಬಗ್ಗೆ ಸಾಮಾನ್ಯ ಜನರಡೆಗೆ ತಿಳಿಸುವ ಕಾರ್ಯ ನಡೆಯಬೇಕಾಗಿದೆ. ಈ ವಿಚಾರವಾಗಿ ಆಲಸ್ಯ ಹೊಂದಿದರೆ ಅದರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಂತರ ಪ್ರತಿಯೊಬ್ಬರಿಗೂ ದೇಶ ಕಟ್ಟಲು ಕಟ್ಟಿಬದ್ಧರಾಗುತ್ತೇವೆ ಎಂಬ ತತ್ವಗಳ ಸಂಕಲ್ಪವನ್ನು ಬೋಧಿಸಲಾಯಿತು.
ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಕಾರ್ಯಕರ್ತರು ಸಂಕಷ್ಟಗಳಿಗೆ ಸ್ಪಂದಿಸುವ ಮನಸ್ಥಿತಿಯನ್ನು ಹೊಂದಿರಬೇಕು. ಬಿಜೆಪಿ ಪಕ್ಷ ದೇಶ ಕಟ್ಟಲು ಸದಾ ಕ್ರಿಯಾಶೀಲವಾಗಿರುತ್ತದೆ ಎಂದು ಹೇಳಿದರು.
ಮೋದಿ ಸರ್ಕಾರದ ಅಗತ್ಯತೆ ಹೆಚ್ಚಿದೆ:
ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಾಗಾರದಲ್ಲಿ, ವಿಧಾನ ಪರಿಷತ್ ಸದಸ್ಯ ಮಂಡೆಪಂಡ ಸುಜಾಕುಶಲಪ್ಪ, ರಾಜ್ಯ ಬಿಜೆಪಿ ಶಿಸ್ತು ಸಮಿತಿ ಸದಸ್ಯೆ ಪಟ್ಟಡ ರೀನಾ ಪ್ರಕಾಶ್, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಕುಟ್ಟಂಡ ಅಜಿತ್ ಕರಂಬಯ್ಯ, ಮುದ್ದಿಯಡ ಮಂಜು ಗಣಪತಿ, ಮತ್ರಂಡ ಕಬೀರ್ ದಾಸ್, ಮಾಪಂಗಡ ಯಮುನಾ ಚಂಗಪ್ಪ, ಮಾಚಿಮಾಡ ಎಂ ರವೀಂದ್ರ ಸೇರಿದಂತೆ ಬೂತ್ ಅಧ್ಯಕ್ಷರು, ಶಕ್ತಿ ಕೇಂದ್ರ ಪ್ರಮುಖರು, ಸದಸ್ಯರು ಇದ್ದರು.