ಕನ್ನಡಪ್ರಭ ವಾರ್ತೆ ಚಾಮರಾಜನಗರಮುಂಬರುವ ಲೋಕಸಭೆ ಚುನಾವಣೆ-2024ರ ಹಿನ್ನೆಲೆಯಲ್ಲಿ ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ವತಿಯಿಂದ ಜ. 21 ರಂದು ಬೆಳಗ್ಗೆ9 ಗಂಟೆಯಿಂದ ಕಲಾವಿದರಿಗಾಗಿ ‘ವ್ಯಂಗ್ಯಚಿತ್ರ ಪ್ರದರ್ಶನ ಮತ್ತು ಕಾರ್ಯಾಗಾರ’ವನ್ನು ವಿಧಾನಸೌಧ ಪೂರ್ವದಿಕ್ಕಿನ ಬಸವಣ್ಣನವರ ಪ್ರತಿಮೆ ಎದುರು ಏರ್ಪಡಿಸಲಾಗಿದೆ.
ವೃತ್ತಿಪರ ಮತ್ತು ಹವ್ಯಾಸಿ ವ್ಯಂಗ್ಯ ಚಿತ್ರಕಾರರು, ಹವ್ಯಾಸಿ ಕಲಾವಿದರು, ಕಲಾ ವಿದ್ಯಾರ್ಥಿಗಳು ಈ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಬಹುದಾಗಿದೆ. ಚುನಾವಣೆ, ಮತದಾನದ ಮಹತ್ವ ಸಾರುವ, ಮತದಾನ ಪ್ರಕ್ರಿಯೆಯಲ್ಲಿ ನಾಗರಿಕರು ಭಾಗವಹಿಸುವುದನ್ನು ಪ್ರೋತ್ಸಾಹಿಸುವಂತಹ ವ್ಯಂಗ್ಯಚಿತ್ರಗಳನ್ನು ರಚಿಸಬೇಕು. ಆಯ್ಕೆಯಾದ 100 ವ್ಯಂಗ್ಯ ಚಿತ್ರಗಳನ್ನು ಜ. 21ರಂದು ಪ್ರದರ್ಶನಕ್ಕೆ ಇರಿಸಲಾಗುತ್ತದೆ. ಅತ್ಯುತ್ತಮ 25 ಚಿತ್ರಗಳನ್ನು ಮತದಾನ ಜಾಗೃತಿ, ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗುತ್ತದೆ ಹಾಗೂ ಆ ವ್ಯಂಗ್ಯ ಚಿತ್ರಗಳಿಗೆ ಗೌರವಧನವನ್ನು ಸಹ ನೀಡಲಾಗುತ್ತದೆ. ಚಿತ್ರಗಳಲ್ಲಿ ಯಾವುದೇ ರಾಜಕೀಯ ಪಕ್ಷಗಳ ಪ್ರಚಾರ ಮತ್ತು ವ್ಯಂಗ್ಯ ಇರಬಾರದು. ಚಿತ್ರಗಳು ಹೊಸದಾಗಿದ್ದು, ಈ ಹಿಂದೆ ಯಾವುದೇ ಪ್ರಚಾರದಲ್ಲಿ ಬಳಸಿಕೊಂಡಿರಬಾರದು. ಚಿತ್ರಗಳು ಸ್ವಂತ ರಚನೆಯಲ್ಲಿರಬೇಕು. (ಗ್ರಾಫಿಕ್ಸ್, ಕುಂಚ, ಪೆನ್ಸಿಲ್, ಪೆನ್ ಇತ್ಯಾದಿ) ಚಿತ್ರಗಳನ್ನು 1800, 2400 ಅಳೆತೆಯ ಡಿಜಿಟಲ್ ಆವೃತ್ತಿಯಲ್ಲಿ ಸಲ್ಲಿಸಬೇಕು. ಆಯ್ಕೆಯಾದ ಚಿತ್ರಗಳ ಅಸಲಿ ಪ್ರತಿಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ಆಯ್ಕೆಯಾದ ಮೊದಲ 25 ಚಿತ್ರಗಳಿಗೆ ಗೌರವಧನ ನೀಡಲಾಗುವುದು. ಚಿತ್ರಗಳನ್ನು mediacellceokarnataka@gmail.com ವಿಳಾಸಕ್ಕೆ ಕಳುಹಿಸಬೇಕು ಹಾಗೂ ಇಮೇಲ್ ನಲ್ಲಿ ಹೆಸರು, ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ತಪ್ಪದೇ ನಮೂದಿಸಿರಬೇಕು. ಚಿತ್ರಗಳನ್ನು ಜ. 20ರ ಸಂಜೆ 5 ಗಂಟೆಯ ಒಳಗೆ ಕಳುಹಿಸಬೇಕು. ಚಿತ್ರಗಳನ್ನು ಆಯ್ಕೆ ಮಾಡುವ ಹಾಗೂ ತಿರಸ್ಕರಿಸುವ ಅಧಿಕಾರ ಮುಖ್ಯ ಚುನಾವಣಾಧಿಕಾರಿ ಕರ್ನಾಟಕ ಇವರಿಗೆ ಇರುತ್ತದೆ. ಸ್ಥಳದಲ್ಲೇ ಚಿತ್ರ ರಚನೆ ಮಾಡುವ ಕಲಾವಿದರು ಜ. 21ರಂದು ಬೆಳಗ್ಗೆ 9 ಗಂಟೆಗೆ ಹಾಜರಿರಬೇಕು. ಹೆಚ್ಚಿನ ಮಾಹಿತಿಗೆ ಮಾಧ್ಯಮ ಘಟಕ, ಮುಖ್ಯ ಚುನಾವಣಾಧಿಕಾರಿಗಳ ಕಚೇರಿ, ಶೇಷಾದ್ರಿ ರಸ್ತೆ, ಬೆಂಗಳೂರು. ಮೊ.ಸಂ 9480841211 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.