ಯುವತಿ ಮೇಲೆ ಹಲ್ಲೆ: ಐಐಎಂಪಿಅಧ್ಯಾಪಕರ ಪತ್ನಿ ವಿರುದ್ಧ ಕೇಸ್‌

KannadaprabhaNewsNetwork |  
Published : May 10, 2026, 01:45 AM IST
ತರಕಾರಿ  | Kannada Prabha

ಸಾರಾಂಶ

ಮನೆಗೆಲಸ ಮಾಡಿಕೊಂಡಿದ್ದ ಯುವತಿ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಐಐಎಂಬಿ ಅಧ್ಯಾಪಕರ ಪತ್ನಿ ವಿರುದ್ಧ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮನೆಗೆಲಸ ಮಾಡಿಕೊಂಡಿದ್ದ ಯುವತಿ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಐಐಎಂಬಿ ಅಧ್ಯಾಪಕರ ಪತ್ನಿ ವಿರುದ್ಧ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಣಿಪುರ ಮೂಲದ ನಿಯಾನ್ ಫೌನುವಾನ್ (23) ಎಂಬಾಕೆ ನೀಡಿದ ದೂರಿನ ಮೇರೆಗೆ ಐಐಎಂಬಿ ಅಧ್ಯಾಪಕ ಅಮರ್ ಅವರ ಪತ್ನಿ ಅಂಶು ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಳೇಕನಹಳ್ಳಿಯಲ್ಲಿರುವ ಐಐಎಂಬಿ ಕ್ಯಾಂಪಸ್‌ನಲ್ಲಿರುವ ಅಧ್ಯಾಪಕ ಅಮರ್ ಮನೆಯಲ್ಲಿ 2021ರಿಂದ ದಂಪತಿ ಮಕ್ಕಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದೇನೆ. ತಾನು ಕೆಲಸಕ್ಕೆ ಸೇರಿದ ದಿನದಿಂದಲೂ ಸರಿಯಾಗಿ ಊಟ ನೀಡುತ್ತಿರಲಿಲ್ಲ. ಅನಾರೋಗ್ಯ ವೇಳೆ ದೈಹಿಕವಾಗಿ ಹಲ್ಲೆ ಮಾಡಿ ಮೊಬೈಲ್ ಕಸಿದುಕೊಂಡಿದ್ದರು. ಕಳೆದ ಏ.15ರಂದು ದೈಹಿಕವಾಗಿ ಅಂಶು ಅವರು ತನ್ನ ಮೇಲೆ ಹಲ್ಲೆ ಮಾಡಿ, ಹೊರಗೆ ಹೋಗದಂತೆ ಕೂಡಿಹಾಕಿದ್ದರು ಎಂದು ದೂರಿನಲ್ಲಿ ಯುವತಿ ಆರೋಪಿಸಿದ್ದಾರೆ.

ನೆರೆ ಹೊರೆಯವರು ಊಟ ನೀಡಿದರು:

ಮೇ 4ರಂದು ಬೆಳಗ್ಗೆಯಿಂದ ಊಟ ನೀಡದ ಕಾರಣ ನೆರೆ-ಹೊರೆಯವರು ಊಟ ನೀಡಿದ್ದು, ನಗರದಲ್ಲಿ ವಾಸಿಸುತ್ತಿರುವ ತಮ್ಮ ಸಂಬಂಧಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದೇನೆ. ನಂತರ ತಮ್ಮ ಕುಕಿ ಸಮುದಾಯ ವಿದ್ಯಾರ್ಥಿ ನಾಯಕನಿಗೆ ವಿಷಯ ತಿಳಿಸಿದ್ದೇನೆ ಎಂದು ದೂರಿನಲ್ಲಿ ಯುವತಿ ಆರೋಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಆರೋಪಿತರಿಗೆ ನೋಟಿಸ್‌ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟಿ.ಬೇಕುಪ್ಪೆ ಡೇರಿಯಲ್ಲಿ ಅವ್ಯವಹಾರದ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ
ಹೊಗೇನಕಲ್ನಲ್ಲಿ ಆಡಲು ಹೋದ ಹೊಸಕೋಟೆ ಯುವಕ ನೀರುಪಾಲು