ವಕೀಲನಿಂದ ತಂಗಿ ಕೊಲೆ ಕೇಸ್‌: ಇಬ್ಬರ ಸೆರೆ

KannadaprabhaNewsNetwork |  
Published : Nov 27, 2026, 03:45 AM IST
ಪೋಟೊ ಶಿರ್ಷಕೆ25ಎಚ್ ಕೆ ಅರ್ 01 | Kannada Prabha

ಸಾರಾಂಶ

ಆಸ್ತಿ ವಿಚಾರಕ್ಕೆ ತಂಗಿಯನ್ನೇ ಬ್ಯಾಟ್‌ನಿಂದ ಹೊಡೆದು ಕೊಲೆ ಮಾಡಿದ್ದ ಅಣ್ಣ ಸೇರಿ ಇಬ್ಬರನ್ನು ಬೆಳ್ಳಂದೂರು ಪೊಲೀಸ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು ಆಸ್ತಿ ವಿಚಾರಕ್ಕೆ ತಂಗಿಯನ್ನೇ ಬ್ಯಾಟ್‌ನಿಂದ ಹೊಡೆದು ಕೊಲೆ ಮಾಡಿದ್ದ ಅಣ್ಣ ಸೇರಿ ಇಬ್ಬರನ್ನು ಬೆಳ್ಳಂದೂರು ಪೊಲೀಸ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೀನಾಕ್ಷಿ (39) ಕೊಲೆಯಾದವರು. ಜಯರಾಮ್‌ (42) ಬಂಧಿತ ಆರೋಪಿ. ಕೃತ್ಯಕ್ಕೆ ಸಹಕರಿಸಿದ ಆರೋಪದ ಹಿನ್ನೆಲೆಯಲ್ಲಿ ಚಾಲಕ ಕೃಷ್ಣಮೂರ್ತಿ ಎಂಬಾತನನ್ನು ಕೂಡ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜುನ್ನಸಂದ್ರದಲ್ಲಿ ಬುಧವಾರ ಬೆಳಗ್ಗೆ 11.30 ರ ಸುಮಾರಿಗೆ ಈ ಘಟನೆ ನಡೆದಿತ್ತು. ಆಸ್ತಿಯ ವಿಚಾರವಾಗಿ ತಂಗಿಯನ್ನು ಆಕೆಯ ಸ್ವಂತ ಅಣ್ಣನೇ ಕೊಲೆ ಮಾಡಿದ್ದ. ಮೀನಾಕ್ಷಿ ಮದುವೆಯಾಗಿದ್ದರೂ ಕೂಡ ತನ್ನ ತಾಯಿ ಜತೆ ಇದ್ದರು. ತಾಯಿಯ ಹೆಸರಲ್ಲಿ ಸ್ವಲ್ಪ ಆಸ್ತಿ ಇದೆ. ತಾಯಿ ಜತೆ ತಂಗಿ ಇದ್ದರೆ ಆಸ್ತಿ ಪೂರ್ತಿ ಅವಳಿಗೆ ಹೋಗುತ್ತದೆ ಅಂತ ಆರೋಪಿ ಭಾವಿಸಿದ್ದ. ಈ ಬಗ್ಗೆ ಆಗಾಗ್ಗೆ ಒಳ ಜಗಳ ನಡೆಯುತ್ತಿತ್ತು. ಬುಧವಾರ ಜಗಳ ತಾರಕಕ್ಕೆ ಹೋಗಿ ಸಹೋದರಿ ಮೀನಾಕ್ಷಿಯನ್ನು ಕ್ರಿಕೆಟ್‌ ಬ್ಯಾಟ್‌ನಿಂದ ಹೊಡೆದು ಕೊಲೆ ಮಾಡಿದ. ನಂತರ ಆರೋಪಿ ಜಯರಾಮ್ ಹಾಗೂ ಆತನ ಡ್ರೈವರ್ ಕೃಷ್ಣಮೂರ್ತಿ ಇಬ್ಬರೂ ಕೂಡ ರಾಜ್ಯ ಬಿಟ್ಟು ಪರಾರಿಯಾಗುತ್ತಿದ್ದರು. ಜಯರಾಮ್‌ ಪರಾರಿಯಾಗಲು ಕೃಷ್ಣಮೂರ್ತಿ ಸಹಾಯ ಮಾಡಿದ್ದ. ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ವಿವರ:

ಜಯರಾಮ್‌ ಮತ್ತು ಮೀನಾಕ್ಷಿ ಸ್ವಂತ ಅಣ್ಣ ತಂಗಿಯಾಗಿದ್ದು, ಇಬ್ಬರಿಗೂ ಮದುವೆಯಾಗಿದೆ, ಇಬ್ಬರು ಪ್ರತ್ಯೇಕವಾಗಿ ಜುನ್ನಸಂದ್ರದಲ್ಲಿರುವ ಎದುರು ಬದರು ಮನೆಯಲ್ಲಿ ವಾಸವಾಗಿದ್ದರು. ಮೀನಾಕ್ಷಿ ಅವರು ತಮ್ಮ ತಾಯಿ ಮಕ್ಕಳೊಂದಿಗೆ ವಾಸವಿದ್ದರು. ಜಯರಾಮ್‌ ಕೂಡ ಹೆಂಡತಿ ಮಕ್ಕಳೊಂದಿಗೆ ವಾಸವಿದ್ದ. ಆರೋಪಿ ವೃತ್ತಿಯಲ್ಲಿ ವಕೀಲನಾಗಿದ್ದ. ಆಸ್ತಿ ವಿಚಾರಕ್ಕೆ ಮೊದಲಿನಿಂದಲೂ ಅಣ್ಣ ತಂಗಿಯ ನಡುವೆ ಜಗಳ ನಡೆಯುತ್ತಿತ್ತು. ಹೀಗಾಗಿ ಆರೋಪಿ ಅಮ್ಮನ ಬಿಟ್ಟು ಹೋಗಿ ನೀನು ಬೇರೆ ಕಡೆ ಹೋಗು ಎಂದು ಹೇಳುತ್ತಿದ್ದ. ಆದರೆ, ಮೀನಾಕ್ಷಿ ಅಮ್ಮನೊಂದಿಗೆ ತಾನು ಇರುವುದಾಗಿ ಹೇಳುತ್ತಿದ್ದಳು.

ಆಸ್ತಿ ವಿಚಾರಕ್ಕೆ ಬುಧವಾರ 11.30ರ ಸುಮಾರಿಗೆ ಇಬ್ಬರ ನಡುವೆ ಮತ್ತೆ ಜಗಳವಾಗಿದ್ದು, ಜಗಳ ತಾರಕಕ್ಕೇರಿದ್ದಾಗ ಆರೋಪಿ ಕ್ರಿಕೆಟ್‌ ಬ್ಯಾಟ್‌ನಿಂದ ಆಕೆಯ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ತೀವ್ರ ರಕ್ತ ಸ್ರಾವವಾಗಿ ಮೀನಾಕ್ಷಿ ಮೃತಪಟ್ಟಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೌಡಿ ನಿಗ್ರಹ ದಳ ಕಾರ್ಯಾಚರಣೆ:ನಾಪತ್ತೆ ಆಗಿದ್ದ 9 ರೌಡಿಗಳ ಬಂಧನ
ಸಂವಿಧಾನ ಉಳಿಸುವುದು ನಮ್ಮ ಜವಾಬ್ದಾರಿ: ಡಿಕೆ