ವಿದ್ಯಾವಂತ, ಆರೋಗ್ಯವಂತ ಸಮಾಜ ನಿರ್ಮಾಣದತ್ತ ಹೆಜ್ಜೆ ಇಡೋಣ: ಬೋಳ ಪ್ರಶಾಂತ ಕಾಮತ್

KannadaprabhaNewsNetwork |  
Published : Oct 03, 2026, 03:00 AM IST
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ, ಆರ್ಥಿಕ ದುರ್ಬಲರಿಗೆ, ಅನಾರೋಗ್ಯಪೀಡಿತರಿಗೆ 6.50  ಲಕ್ಷ ರೂಪಾಯಿ ನೆರವು ವಿತರಣೆ ಕಾರ್ಯಕ್ರಮ | Kannada Prabha

ಸಾರಾಂಶ

ಸಾಕಷ್ಟು ಸಂಖ್ಯೆಯಲ್ಲಿ ಬಡವರು ಮತ್ತು ಪ್ರತಿಭಾವಂತ ಮಕ್ಕಳಿಗೆ ಉನ್ನತ ಶಿಕ್ಷಣ ಮರೀಚಿಕೆಯಾಗಿಯೇ ಉಳಿದಿದೆ. ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಈ ಪ್ರಮಾಣ ಇನ್ನಷ್ಟು ಹೆಚ್ಚು ಇದೆ. ಈ ದಿಸೆಯಲ್ಲಿ ಇಂತಹ ಮಕ್ಕಳನ್ನು ತಲುಪುವ ಕೆಲಸ ಆಗಬೇಕು. ಜಿಎಸ್ ಬಿ ಸಮುದಾಯ ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿ ನಿಂತು ಪ್ರೋತ್ಸಾಹ ನೀಡಬೇಕು. ವಿದ್ಯಾವಂತ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣ ನಮ್ಮ ಹಿರಿಯರ ಕನಸು ಕೂಡ ಆಗಿತ್ತು ಎಂದು ಗೋಡಂಬಿ ಉದ್ಯಮಿ, ಕಾರ್ಕಳ ಟೈಗರ್ಸ್ ಸಂಸ್ಥಾಪಕ ಬೋಳ ಪ್ರಶಾಂತ ಕಾಮತ್ ಹೇಳಿದರು.

ಕಾರ್ಕಳ: ಸಾಕಷ್ಟು ಸಂಖ್ಯೆಯಲ್ಲಿ ಬಡವರು ಮತ್ತು ಪ್ರತಿಭಾವಂತ ಮಕ್ಕಳಿಗೆ ಉನ್ನತ ಶಿಕ್ಷಣ ಮರೀಚಿಕೆಯಾಗಿಯೇ ಉಳಿದಿದೆ. ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಈ ಪ್ರಮಾಣ ಇನ್ನಷ್ಟು ಹೆಚ್ಚು ಇದೆ. ಈ ದಿಸೆಯಲ್ಲಿ ಇಂತಹ ಮಕ್ಕಳನ್ನು ತಲುಪುವ ಕೆಲಸ ಆಗಬೇಕು. ಜಿಎಸ್ ಬಿ ಸಮುದಾಯ ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿ ನಿಂತು ಪ್ರೋತ್ಸಾಹ ನೀಡಬೇಕು. ವಿದ್ಯಾವಂತ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣ ನಮ್ಮ ಹಿರಿಯರ ಕನಸು ಕೂಡ ಆಗಿತ್ತು ಎಂದು ಗೋಡಂಬಿ ಉದ್ಯಮಿ, ಕಾರ್ಕಳ ಟೈಗರ್ಸ್ ಸಂಸ್ಥಾಪಕ ಬೋಳ ಪ್ರಶಾಂತ ಕಾಮತ್ ಹೇಳಿದರು.

ಅವರು ಕಾರ್ಕಳ ಕಾಶೀ ಮಠ ಸಭಾಭವನದಲ್ಲಿ ಹೊಸಸಂಜೆ ಬಳಗದ ವತಿಯಿಂದ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ, ಆರ್ಥಿಕ ದುರ್ಬಲರಿಗೆ, ಅನಾರೋಗ್ಯಪೀಡಿತರಿಗೆ 6.50 ಲಕ್ಷ ರೂಪಾಯಿ ನೆರವು ವಿತರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.ಉದ್ಯಮಿಗಳಾದ ಗಣೇಶ ಕಾಮತ್, ಜಗದೀಶ ಮಲ್ಯ, ಕಮಲಾಕ್ಷ ನಾಯಕ್ ಜಾರ್ಕಳ , ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದ ಅರ್ಚಕ ತಂತ್ರಿ ಗುರುದತ್ ಭಟ್ , ಖ್ಯಾತ ವೈದ್ಯ ಡಾ .ಕಾರ್ತಿಕ್ ರಾವ್ , ಜಿ ಎಸ್ ಬಿ ಸಭಾ ಅಧ್ಯಕ್ಷ ನಾರಾಯಣ ನಾಯಕ್, ಸುಬ್ರಾಯ ಕಾಮತ್ ಬಂಟ್ವಾಳ, ಸಮಾಜಸೇವಕ ವಿಶ್ವನಾಥ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭ ಹಾರೈಸಿದರು. ವಿಶ್ರಾಂತ ಲೆಕ್ಕ ಪರಿಶೋಧಕ ಕಾರ್ಕಳ ಕಮಲಾಕ್ಷ ಕಾಮತ್ ಅಧ್ಯಕ್ಷತೆ ವಹಿಸಿದ್ದರು.

ದೇವಿಪ್ರಸಾದ್ ಶೆಣೈ ಸ್ವಾಗತಿಸಿದರು. ಹೊಸಸಂಜೆ ಬಳಗದ ಅಧ್ಯಕ್ಷ ಆರ್. ದೇವರಾಯ ಪ್ರಭು ಪ್ರಾಸ್ತಾವಿಕ ಮಾತನಾಡಿದರು. ವಿಘ್ನೇಶ್ ಪೈ ಕಾರ್ಯಕ್ರಮ ನಿರ್ವಹಿಸಿದರು. ಸೌಭಾಗ್ಯ ಎಸ್. ಕಿಣಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತಪಟ್ಟಿಯಿಂದ ಹೆಸರು ತೆಗೆಯಲು ಪತ್ರ ನೀಡಿಲ್ಲ
ಯುವ ಪೀಳಿಗೆ ಬಾಪೂಜಿ ತತ್ವ ಅಳವಡಿಸಿಕೊಳ್ಳಿ