ಜಾತಿನಿಂದನೆ: ಹೊಸ ಕಾಯ್ದೆಗೆ ಸರ್ಕಾರಕ್ಕೆ ಮನವಿ

KannadaprabhaNewsNetwork |  
Published : Nov 26, 2025, 01:15 AM IST
777 | Kannada Prabha

ಸಾರಾಂಶ

ಸವಿತಾ ಸಮುದಾಯವನ್ನು ಕೆಟ್ಟ ಪದಗಳಿಂದ ನಿಂದಿಸುವ ವ್ಯಕ್ತಿಗಳ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಲು ಹೊಸ ಕಾಯ್ದೆ ತರಬೇಕೆಂದು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಕರ್ನಾಟಕ ಸವಿತಾ ಸಮಾಜ ಅಭಿವೃದ್ದಿ ನಿಗಮದ ಅಧ್ಯಕ್ಷ ಎಂ.ಎಸ್.ಮುತ್ತುರಾಜ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಸವಿತಾ ಸಮುದಾಯವನ್ನು ಕೆಟ್ಟ ಪದಗಳಿಂದ ನಿಂದಿಸುವ ವ್ಯಕ್ತಿಗಳ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಲು ಹೊಸ ಕಾಯ್ದೆ ತರಬೇಕೆಂದು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಕರ್ನಾಟಕ ಸವಿತಾ ಸಮಾಜ ಅಭಿವೃದ್ದಿ ನಿಗಮದ ಅಧ್ಯಕ್ಷ ಎಂ.ಎಸ್.ಮುತ್ತುರಾಜ್ ತಿಳಿಸಿದ್ದಾರೆ.

ಸವಿತಾ ಸಮಾಜದ ಜಿಲ್ಲಾ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕ್ಷೌರಿಕ ವೃತ್ತಿಯನ್ನು ಕೀಳಾಗಿ ಕಂಡಿರುವ ಪ್ರಕರಣಗಳು ಹೆಚ್ಚಾಗಿದ್ದು, ಬಹುತೇಕವೂ ಕೊನೆಗೆ ರಾಜೀ ಪಂಚಾಯಿತಿಯಲ್ಲಿ ಮುಗಿಯುತ್ತವೆ. ಇದರಿಂದಗಿ ಜಾತಿ ನಿಂದನೆಗೆ ನಿಷೇಧಿತ ಪದವನ್ನು ಬಳಕೆ ಮಾಡುವ ವ್ಯಕ್ತಿಗಳ ವಿರುದ್ದ ಜಾತಿ ನಿಂದನೆ ಕೇಸು ದಾಖಲಿಸಲು ಹೊಸ ಕಾಯ್ದೆ ತರಬೇಕೆಂಬ ಬೇಡಿಕೆಯನ್ನು ಮಂಡಿಸಲಾಗುವುದು ಎಂದರು.

ರಾಜ್ಯದಲ್ಲಿ ಸುಮಾರು 18 ಲಕ್ಷ ಜನಸಂಖ್ಯೆ ಹೊಂದಿರುವ ಸವಿತಾ ಸಮಾಜದ ಅಭಿವೃದ್ಧಿಗಾಗಿ ಸರ್ಕಾರ ಸವಿತಾ ಸಮಾಜದ ಅಭಿವೃದ್ದಿ ನಿಗಮಕ್ಕೆ ನೀಡಿರುವ ಅನುದಾನ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಎಂಬಂತಾಗಿದೆ. ಹಾಗಾಗಿ ಚಳಿಗಾಲದ ಅಧಿವೇಶದಲ್ಲಿ ಕನಿಷ್ಠ 100 ಕೋಟಿ ರು. ಅನುದಾನದ ಜೊತೆಗೆ ರಾಜ್ಯ ಸರ್ಕಾರದಿಂದ ಸವಿತಾ ಸಮಾಜಕ್ಕೆದೊರೆಯುವ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ವಿಶೇಷ ಕಾರ್ಯಕ್ರಮ ರೂಪಿಸಬೇಕು. ಒಂದು ಜಿಲ್ಲೆಯಲ್ಲಿ ಕನಿಷ್ಠ ೨೦ ಜನರಿಗೆ ನಿಗಮದ ಪ್ರಯೋಜನ ಸಿಗುವಂತೆ ಆಗಬೇಕು ಎಂದರು.

ಸದ್ಯದ ಸರ್ಕಾರ ಸವಿತಾ ಸಮಾಜ ಅಭಿವೃದ್ದಿ ನಿಗಮಕ್ಕೆ ೧೮ ಕೋಟಿ ರು. ಗಳ ಅನುದಾನ ನೀಡಿದೆ. ನಮ್ಮ ಬಹುತೇಕ ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಶಾಸಕರಿಗೆ ನೀಡಿರುವ ಕಾರಣ, ಇದುವರೆಗೂ ಪ್ರವಾಸ ಮಾಡಿದ ಎಲ್ಲಾ ಜಿಲ್ಲೆಗಳಲ್ಲಿಯೂ ವಿಧಾನಸಭಾ ಕ್ಷೇತ್ರದ ಶಾಸಕರನ್ನು ಭೇಟಿ ಮಾಡಿ, ಸವಿತಾ ಸಮಾಜದ ಅರ್ಜಿಗಳನ್ನು ಹೆಚ್ಚಿನ ರೀತಿ ಪರಿಗಣಿಸುವಂತೆ ಮನವಿ ಮಾಡಿದ್ದೇನೆ. ಸಾಮಾಜಿಕವಾಗಿ,ಶೈಕ್ಷಣಿಕವಾಗಿ, ಆರ್ಥಿಕ ವಾಗಿ, ರಾಜಕೀಯವಾಗಿ ಹಿಂದುಳಿದಿರುವ ಸವಿತಾ ಸಮಾಜಕ್ಕೆ ನಿಗಮದಿಂದ ದೊರೆಯುವ ಸೌಲಭ್ಯಗಳ ಅರಿವು ಮೂಡಿಸಲು ನಾನೇ ಕ್ಷೌರಿಕರ ಮನೆ ಬಾಗಿಲಿಗೆ ಹೋಗಿ, ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದೇನೆ. ಬಹುತೇಕ ಸೇವೆಗಳು ಆನ್‌ಲೈನ್ ನಲ್ಲಿ ಇರುವ ಕಾರಣ, ನಮ್ಮಜನಾಂಗದಲ್ಲಿ ಅರಿವಿನ ಕೊರತೆ ಇದೆ.ಇದನ್ನು ನೀಗಿಸುವ ಕೆಲಸವನ್ನು ಸಮುದಾಯದ ಯುವಕರೊಂದಿಗೆ ಸೇರಿ ಮಾಡಲಾಗುವುದು ಎಂದು ನುಡಿದರು.

ಬಾಬಾ ಸಾಹೇಬರ, ಮಹಾತ್ಮಗಾಂಧಿ ಅವರದಾರಿಯಲ್ಲಿ ಸಾಗುವ ಕೆಲಸಕ್ಕೆ ಕೈ ಹಾಕಿದೆ. ನನ್ನ ಕೆಲಸ ಗುರುತಿಸಿ ಸರ್ಕಾರ ಸವಿತಾ ಸಮಾಜ ಅಭಿವೃದ್ದಿ ನಿಗಮದ ಅಧ್ಯಕ್ಷರನ್ನಾಗಿಮಾಡಿದೆ. ಅವಕಾಶವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರಕಾರ ಸವಲತ್ತು ಒದಗಿಸಲು ಹಗಲಿರುಳು ದುಡಿಯಲು ತೀರ್ಮಾನಿಸಿದ್ದೇನೆ ಎಂದರು.

ಸವಿತಾ ಸಮಾಜದಜಿಲ್ಲಾ ಮುಖಂಡರಾದ ಕಟ್‌ ವೆಲ್‌ ರಂಗನಾಥ್ ಮಾತನಾಡಿ, ಸಮುದಾಯದ ಯುವಜನರಿಗೆ ಆಧುನಿಕ ರೀತಿಯಲ್ಲಿ ಕ್ಷೌರ ಮಾಡುವ ಬಗ್ಗೆ ಸರ್ಕಾರವೇ ಉಚಿತವಾಗಿ ತರಬೇತಿ ನೀಡಿ, ಪೈಪೋಟಿಯುತ ಸಮುದಾಯದಲ್ಲಿ ಬದುಕಲು ಅಗತ್ಯವಿರುವ ಕೌಶಲ್ಯ ಹೊಂದಲು ಸಹಕಾರ ನೀಡಬೇಕು ಎಂದು ನಿಗಮದ ಅಧ್ಯಕ್ಷರಿಗೆ ಮನವಿ ಮಾಡಿದರು. ಈ ವೇಳೆ ಸವಿತಾ ಸಮಾಜದ ಮುಖಂಡರಾದ ಓ.ಕೆ.ರಾಜು, ಕೌಶಿಕ್, ಎ.ಸುರೇಶ್, ಚಂದ್ರಶೇಖರ್, ಸಿ.ರವಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುವೆಂಪು ಸದ್ಭಾವನಾ ಪ್ರಶಸ್ತಿಗೆ ಭಾಜನರಾದ ಶ್ರೀ ಶ್ಯಾಮ್ ಸುಂದರ್ ಹೆಗ್ಡೆ
ಕಿಡ್ನಾಪ್‌ ಆದ 1094 ಮಕ್ಕಳು ಇನ್ನೂ ಪತ್ತೆಯಾಗಿಲ್ಲ!