ಜಾತಿಗಣತಿ ಸಿದ್ದರಾಮಯ್ಯ ಚುನಾವಣೆಗಾಗಿ ಮಾಡುತ್ತಿರುವ ನಾಟಕ

KannadaprabhaNewsNetwork |  
Published : Apr 28, 2025, 12:52 AM ISTUpdated : Apr 28, 2025, 12:23 PM IST
ವಿಜೆಪಿ೨೭ ವಿಜಯಪುರ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಗೆಳೆಯರ ಬಳಗದಿಂದ ಆಯೋಜನೆ ಮಾಡಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಕೋನಪ್ಪರೆಡ್ಡಿ ಅವರನ್ನು ಸನ್ಮಾನಿಸಿದರು. | Kannada Prabha

ಸಾರಾಂಶ

ಜಾತಿಗಣತಿ ವರದಿಯ ವಿಚಾರದ ಕುರಿತು ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮನೆಯಲ್ಲಿ ಒಕ್ಕಲಿಗ ನಾಯಕರು, ಲಿಂಗಾಯತ ಮುಖಂಡರು ಸೇರಿ ಚರ್ಚೆ ನಡೆಸಿದ್ದೇವೆ.

ವಿಜಯಪುರ:ಜಾತಿಗಣತಿಯೆಂಬುದು ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಉದ್ದೇಶಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡುತ್ತಿರುವ ನಾಟಕವಷ್ಟೆ. ಇದರಿಂದ ಒಗ್ಗಟ್ಟಾಗಿರುವ ಸಮುದಾಯಗಳು ಚದುರಿ ಹೋಗುತ್ತವೆಯೇ ಹೊರತು, ಯಾರಿಗೂ ಅನುಕೂಲವಾಗುವುದಿಲ್ಲ ಎಂದು ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಕೋನಪ್ಪರೆಡ್ಡಿ ಹೇಳಿದರು .

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಾಡಪ್ರಭು ಕೆಂಪೇಗೌಡ ಗೆಳೆಯರ ಬಳಗದಿಂದ ಆಯೋಜನೆ ಮಾಡಿರುವ 4ನೇ ವರ್ಷದ ಕೆಂಪೇಗೌಡ ಕ್ರಿಕೆಟ್ ಪಂದ್ಯಾವಳಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜಾತಿಗಣತಿ ವರದಿಯ ವಿಚಾರದ ಕುರಿತು ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮನೆಯಲ್ಲಿ ಒಕ್ಕಲಿಗ ನಾಯಕರು, ಲಿಂಗಾಯತ ಮುಖಂಡರು ಸೇರಿ ಚರ್ಚೆ ನಡೆಸಿದ್ದೇವೆ.

 ಮುಂದೆ ಯಾವ ರೀತಿಯ ತೀರ್ಮಾನಕ್ಕೆ ಬರಬೇಕು ಎನ್ನುವ ಕುರಿತು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ. ಶೇ. 4ರಲ್ಲಿ ಒಕ್ಕಲಿಗರು ಹಳೇ ಮೈಸೂರು ಭಾಗದಲ್ಲಿ ಹೆಚ್ಚಾಗಿದ್ದಾರೆ. ಲಿಂಗಾಯತರು ಉತ್ತರ ಕರ್ನಾಟಕ ಭಾಗದಲ್ಲಿ ಇದ್ದಾರೆ. 

ಮೀಸಲಾತಿಯಲ್ಲಿ ಎರಡೂ ಕಡೆಯವರಿಗೂ ಅನ್ಯಾಯವಾಗುತ್ತಿದೆ. ಸಾಕಷ್ಟು ಮಂದಿ ಹಿಂದುಳಿದಿರುವವರಿದ್ದಾರೆ. ಈಗ ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಜಾತಿ ಜನಗಣತಿಯಲ್ಲಿ ಶೋಷಿತರು, ಶೋಷಿತರಾಗಿಯೇ ಇರಲಿದ್ದಾರೆ. ಒಂದು ಸಮುದಾಯವನ್ನು ಓಲೈಕೆ ಮಾಡುವಂತಹ ಹುನ್ನಾರಗಳು ನಡೆಯುತ್ತಿವೆ. ಒಕ್ಕಲಿಗರನ್ನು ವಿಂಗಡಣೆ ಮಾಡಲಾಗಿದೆ. ಆದರೆ, ಅಲ್ಪಸಂಖ್ಯಾತರನ್ನು ಯಾಕೆ ವಿಂಗಡಿಸಿಲ್ಲ. 

ಇದರಲ್ಲಿ ಒಡೆದು ಆಳುವ ನೀತಿಯನ್ನು ತೋರಿಸುತ್ತಿದೆ. ಸರ್ಕಾರ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜಾತಿ ಗಣತಿ ಮಾಡಲಿ ಎಂದರು.ನಿರ್ಮಾಪಕ ಉಮಾಪತಿ ಮಾತನಾಡಿ, ಯುವಕರು, ಸಂಘಟಿತರಾಗಬೇಕು. ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ದುಶ್ಚಟಗಳಿಗೆ ಬಲಿಯಾಗದೆ ತಮ್ಮ ಆರೋಗ್ಯ ಸುಧಾರಣೆಯಾಗುವುದರ ಜೊತೆಗೆ, ಮುಂದಿನ ದಿನಗಳಲ್ಲಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವುದಕ್ಕೆ ಹೆಚ್ಚು ಅನುಕೂಲವಾಗಲಿದೆ.

 ಜಾತಿಗಣತಿಯ ವಿಚಾರವಾಗಿ ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದರು.ಮುಖಂಡರಾದ ಮನೋಜ್, ಪ್ರಭಾಕರ್, ಮೋಹನ್ ಕುಮಾರ್, ರಾಜು ಗೌಡ, ವಿಶ್ವನಾಥ್, ನವೀನ್, ಸುಭ್ರಮಣಿ, ಶಶಿಕುಮಾರ್, ಕಿರಣ್, ಶಿವಕುಮಾರ್, ವೇಣು, ಅನಿಲ್, ಪ್ರಜ್ವಲ್ ಮುಂತಾದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!