ಮೂರು ಹಂತದಲ್ಲಿ ಜಾತಿಗಣತಿ ಸಮೀಕ್ಷೆ: ತಹಸೀಲ್ದಾರ್ ಪರಶುರಾಮ್

KannadaprabhaNewsNetwork |  
Published : May 06, 2025, 12:22 AM IST
5ಕೆಎಂಎನ್ ಡಿ20 | Kannada Prabha

ಸಾರಾಂಶ

ಮೊದಲ ಹಂತ ಮನೆ ಮನೆಗಳಿಗೆ ನಮ್ಮ ಕಾರ್ಯಕರ್ತರು ಭೇಟಿ ನೀಡಿ ಮಾಹಿತಿಗಳ ಪಡೆದುಕೊಳ್ಳುತ್ತಾರೆ. ನಂತರ ಈ ಸಮೀಕ್ಷೆಯಲ್ಲಿ ಬಿಟ್ಟು ಹೋಗಿರುವ ಹೆಸರನ್ನು ಆ ಭಾಗದ ಮತಗಟ್ಟೆಯಲ್ಲಿ ಒಳ ಜಾತಿಗೆ ಸೇರಿಸಲು ಹೆಸರನ್ನು ನೋಂದಾಯಿಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಹಿಂದುಳಿದ ವರ್ಗಗಳ ಒಳಜಾತಿ ಸಮೀಕ್ಷೆಯನ್ನು ಮೂರು ಹಂತದಲ್ಲಿ ನಡೆಸಲಾಗುತ್ತದೆ ಎಂದು ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ ಹೇಳಿದರು.

ಪಟ್ಟಣ ಪುರಸಭೆ ವ್ಯಾಪ್ತಿಯ ಗಂಜಾಂನ ಅಂಬೇಡ್ಕರ್ ಬೀದಿಯ ಭವನದಲ್ಲಿ ಸಮೀಕ್ಷೆಗೆ ಚಾಲನೆ ನೀಡಿ ಮಾತನಾಡಿ, ಸರ್ಕಾರ ಹಿಂದುಳಿದ ವರ್ಗಗಳ ಒಳಜಾತಿ ಸಮೀಕ್ಷೆ ನಡೆಸುವುದಾಗಿ ಈಗಾಗಲೇ ಮಾಹಿತಿ ನೀಡಲಾಯಿತು. ಅದರಂತೆ ಒಳ ಜಾತಿ ಸಮೀಕ್ಷೆಯನ್ನು ಮೂರು ಹಂತಗಳಲ್ಲಿ ಮಾಡಲಾಗುತ್ತದೆ ಎಂದರು.

ಮೊದಲ ಹಂತ ಮನೆ ಮನೆಗಳಿಗೆ ನಮ್ಮ ಕಾರ್ಯಕರ್ತರು ಭೇಟಿ ನೀಡಿ ಮಾಹಿತಿಗಳ ಪಡೆದುಕೊಳ್ಳುತ್ತಾರೆ. ನಂತರ ಈ ಸಮೀಕ್ಷೆಯಲ್ಲಿ ಬಿಟ್ಟು ಹೋಗಿರುವ ಹೆಸರನ್ನು ಆ ಭಾಗದ ಮತಗಟ್ಟೆಯಲ್ಲಿ ಒಳ ಜಾತಿಗೆ ಸೇರಿಸಲು ಹೆಸರನ್ನು ನೋಂದಾಯಿಸಲಾಗುತ್ತದೆ ಎಂದರು.

ಆನಂತರದಲ್ಲೂ ಒಂದು ವೇಳೆ ಹೆಸರು ಬಿಟ್ಟು ಹೋಗಿದ್ದರೆ ಆನ್ ಲೈನ್ ಮೂಲಕ ಅರ್ಜಿಗಳ ನೋಂದಾಯಿಸಿಕೊಳ್ಳಬಹುದು. ಈಗೆ ಮೂರು ಹಂತದಲ್ಲಿ ಸಂಪೂರ್ಣ ಮಾಹಿತಿಯೊಂದಿಗೆ ಒಳ ಮೀಸಲಾತಿಗೆ ಸೇರಿಸುವ ಕಾರ್ಯ ನಡೆಯುತ್ತಿದೆ ಎಂದರು.

ಈ ವೇಳೆ ಬಿಇಒ ಆರ್.ಪಿ.ಮಹೇಶ್, ಸಮಾಜ ಕಲ್ಯಾಣ ಅಧಿಕಾರಿ ಮೇಘನಾ, ದಲಿತ ಸಂಘರ್ಷ ಮುಖಂಡ ಗಂಜಾಂ ರವಿಚಂದ್ರ, ರೈತ ಸಂಘದ ಪಾಚಿಡು, ದಲಿತ ಮುಖಂಡರಾದಂತಹ ಹೊನ್ನಪ್ಪ, ಮಹೇಶ್ ಸೇರಿದಂತೆ ಇತರರು ಇದ್ದರು.

ಮೇ 19 ರಂದು ಪ್ರಗತಿ ಪರಿಶೀಲನಾ ಸಭೆ

ಮಂಡ್ಯ: ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್‌ ಅಧ್ಯಕ್ಷತೆಯಲ್ಲಿ 2024-25ನೇ ಸಾಲಿನ ಮಾರ್ಚ್‌ ಅಂತ್ಯದವರೆಗಿನ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಮೇ 19ರಂದು ಜಿಪಂ ಕಾವೇರಿ ಸಭಾಂಗಣದಲ್ಲಿ ನಡೆಯಲಿದೆ. ಸಭೆಗೆ ಅಧಿಕಾರಿಗಳು ಬೇರೆ ಸಿಬ್ಬಂದಿಯನ್ನು ನಿಯೋಜಿಸದೆ ಖುದ್ದು ಅಗತ್ಯ ಮಾಹಿತಿಗಳೊಂದಿಗೆ ಹಾಜರಾಗಲು ತಿಳಿಸಲಾಗಿದೆ. ಸದರಿ ಸಭೆಗೆ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಪಟ್ಟ 20 ಅಂಶಗಳ ಕಾರ್ಯಕ್ರಮಗಳ ವರದಿಯೊಂದಿಗೆ ಇತರ ಪ್ರಗತಿ ವರದಿಯ 30 ಧೃಢೀಕೃತ ಪ್ರತಿಗಳನ್ನು ಮೇ 12ರ ಸಂಜೆಯೊಳಗಾಗಿ ಮುದ್ದಾಂ ಹಾಗೂ ಸ್ಟಾಂಪ್ ಕಾಫಿಯನ್ನು ತಾಪಂ ಕಾರ್ಯಾಲಯ ಕಚೇರಿಯ ಇ-ಮೇಲ್ ವಿಳಾಸವಾದ eotpmandya@gmail.com ಕಳುಹಿಸಲು ತಿಳಿಸಿದ್ದಾರೆ.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ