ಕಳ್ಳರನ್ನು ಹಿಡಿಯಿರಿ, ಇಲ್ಲ ಬೇರೆಡೆ ವರ್ಗವಾಗಿ

KannadaprabhaNewsNetwork |  
Published : Dec 08, 2025, 03:00 AM IST
ಎಚಚರಿಕೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ನಿಪ್ಪಾಣಿ ನಿಪ್ಪಾಣಿ ನಗರ ಮತ್ತು ಅದರ ಸುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಹಿಂದೆಂದೂ ಕಾಣದ ಅಪರಾಧ ಘಟನೆಗಳು ಈಗ ನಡೆಯುತ್ತಿರುವುದು ವಿಷಾದನೀಯ ಸಂಗತಿ. ಇತ್ತೀಚೆಗೆ ಕಳ್ಳತನ ಘಟನೆಗಳು ವ್ಯಾಪಕವಾಗಿದ್ದು, ಹಗಲಿನಲ್ಲೇ ಕಳ್ಳತನ ನಡೆಯುತ್ತಿರುವುದು ಜನರಲ್ಲಿ ಭಯ ಹುಟ್ಟಿಸಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ಕನ್ನಡಪ್ರಭ ವಾರ್ತೆ ನಿಪ್ಪಾಣಿ

ನಿಪ್ಪಾಣಿ ನಗರ ಮತ್ತು ಅದರ ಸುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಹಿಂದೆಂದೂ ಕಾಣದ ಅಪರಾಧ ಘಟನೆಗಳು ಈಗ ನಡೆಯುತ್ತಿರುವುದು ವಿಷಾದನೀಯ ಸಂಗತಿ. ಇತ್ತೀಚೆಗೆ ಕಳ್ಳತನ ಘಟನೆಗಳು ವ್ಯಾಪಕವಾಗಿದ್ದು, ಹಗಲಿನಲ್ಲೇ ಕಳ್ಳತನ ನಡೆಯುತ್ತಿರುವುದು ಜನರಲ್ಲಿ ಭಯ ಹುಟ್ಟಿಸಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ನಡೆದ ಪೊಲೀಸ್‌ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ನಾಗರಿಕ ಸುರಕ್ಷತೆಯ ವಿಷಯವು ಮುನ್ನೆಲೆಗೆ ಬರಲು ಪ್ರಾರಂಭಿಸಿದೆ. ನಮಗೆ ಅನೇಕ ದೂರುಗಳು ಬರುತ್ತಿವೆ. ಕಾಲಕಾಲಕ್ಕೆ ತಿಳಿಸಲಾಗಿದ್ದರೂ, ಇದರ ಬಗ್ಗೆ ವಿಶೇಷ ಗಮನ ಹರಿಸುತ್ತಿಲ್ಲ. ದೈನಂದಿನ ಘಟನೆಗಳು ನಿಪ್ಪಾಣಿ ನಗರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಪೊಲೀಸ್ ಆಡಳಿತ ಏನು ಮಾಡುತ್ತಿದೆ? ಕಳ್ಳತನ ಘಟನೆಗಳ ತನಿಖೆ ಇನ್ನೂ ಗಂಭೀರವಾಗಿ ನಡೆಯಬೇಕು. ಅಪರಾಧ ಮತ್ತು ಕಳ್ಳತನಗಳಿಗೆ ಕಡಿವಾಣ ಹಾಕಿ. ಅದು ನಿಮ್ಮಿಂದ ಸಾಧ್ಯವಾಗದೆ ಹೋದರೆ, ವರ್ಗಾವಣೆ ಪಡೆದು ಬೇರೆಡೆಗೆ ಹೋಗಿ ಎಂದು ಪೊಲೀಸರಿಗೆ ಖಡಕ್ ಸೂಚನೆ ನೀಡಿದರು.

ನಗರದಲ್ಲಿ ಹಗಲು ಹೊತ್ತು ಕಳ್ಳತನ ಪ್ರಕರಣಗಳು ನಡೆದಿದ್ದು, ಹಲವಾರು ಪ್ರಶ್ನೆಗಳಿಗೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸಮರ್ಪಕ ಉತ್ತರ ನೀಡಲು ಸಾಧ್ಯವಾಗಲಿಲ್ಲ. ಅಲ್ಲದೇ, ನಿಪ್ಪಾಣಿಯಲ್ಲಿ ಇತ್ತೀಚಿನ ದಿನಗಳಲ್ಲಿ ಮಟ್ಕಾ ಹಾಗೂ ಗಾಂಜಾ ವ್ಯಾಪಾರ ಹೆಚ್ಚಾಗಿದ್ದು, ಯಾರ ಗಮನಕ್ಕೂ ಇಲ್ಲದಂತಾಗಿದೆ.

ನಗರದ ಹಲವಡೆ ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ, ವೈನ್ ಶಾಪ್ ಗಳಲ್ಲಿ ಮಟ್ಕಾ ಏಜೆಂಟ್ ಗಳು ಕೆಲಸ ಮಾಡುತ್ತಿದ್ದು, ಪೊಲೀಸರ ಗಮನಕ್ಕೆ ಬಂದಿದೆಯೇ? ನಗರದಲ್ಲಿ ಯುವ ಪೀಳಿಗೆ ಅಪರಾಧದ ಮಾರ್ಗದತ್ತ ನಡೆಯುತ್ತಿರುವುದು ಕಾಣುತ್ತಿದೆಯೇ ಎಂದು ಪ್ರಶ್ನಿಸಿದರು.

ಸಿಸಿಟಿವಿ ಸರಿ ಮಾಡಲು ಸೂಚನೆ

ನಗರದ ಪ್ರಮುಖ ಭಾಗಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಿಸಿಟಿವಿಗಳನ್ನು ಅಳವಡಿಸಿದ್ದು, ಪೊಲೀಸ್ ಇಲಾಖೆ ಹಾಗೂ ನಗರ ಪಾಲಿಕೆ ಸಂಬಂಧಪಟ್ಟ ಇಲಾಖೆಗಳ ನಿರ್ವಹಣೆಯಿಲ್ಲದೇ ಹಾಳಾಗಿವೆ. ಪರಸ್ಪರ ತಿಳುವಳಿಕೆ ಹಾಗೂ ಈ ಬಗ್ಗೆ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕಿ ಶಶಿಕಲಾ ಜೊಲ್ಲೆ ಸೂಚನೆ ನೀಡಿದರು.

ಇನ್ನು ಕಳ್ಳತನ ಘಟನೆಗಳನ್ನು ಮುಚ್ಚಿ ಹಾಕಲು ಯಾರ ಮೇಲೂ ಆಪಾಧನೆ ಮಾಡದೇ ಸೂಕ್ತ ಕ್ರಮಗಳನ್ನು ಕೈಗೊಂಡು ಕಳ್ಳರನ್ನು ಸೆರೆ ಹಿಡುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಸಿಪಿಐ ಬಿ.ಎಸ್.ತಳವಾರ, ಶಹರ್ ಪೊಲೀಸ್ ಠಾಣೆಯ ಉಪನಿರೀಕ್ಷಕ ಶಿವಾನಂದ ಕಾರಜೋಳ, ಗ್ರಾಮೀಣ ಪೊಲೀಸ್ ಠಾಣೆಯ ಉಪನಿರೀಕ್ಷಕ ಶಿವಾನಂದ ನಾಯಿಕವಾಡಿ, ಬಸವೇಶ್ವರ್ ಚೌಕ್‌ ಪೊಲೀಸ್ ಠಾಣೆ ಉಪನಿರೀಕ್ಷಕ ರಮೇಶ್ ಪವಾರ್, ಹಾಲಶುಗರ ನಿರ್ದೇಶಕ ಜಯವಂತ ಭಾಟಲೆ, ಮಹಾಲಿಂಗ ಕೋಠಿವಾಲೆ, ರಾಜು ಗುಂಡೆಷಾ ಹಾಗೂ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಮುಂದಿನ ಸಿಎಂ ಯಾರು?’ ಎನ್ನುವ ಬಗ್ಗೆಯೂ ರಾಜ್ಯದಲ್ಲಿ ಬೆಟ್ಟಿಂಗ್‌ - ನಿಯಂತ್ರಿಸಿ'
ಕ್ರೈಂ ಹೆಚ್ಚಳಕ್ಕೆ ಸಿಬ್ಬಂದಿ ಕೊರತೆ ಕಾರಣ : ಡಾ.ಜಿ.ಪರಮೇಶ್ವರ್‌