ಕಥೊಲಿಕ್ ಸಭಾ ಉಡುಪಿ ಅಧ್ಯಕ್ಷ ಮೆಲ್ವಿನ್ ಆರಾನ್ಹಾ ಶಿರ್ವ

KannadaprabhaNewsNetwork |  
Published : Mar 09, 2026, 02:45 AM IST
08ಮೆಲ್ವಿನ್ | Kannada Prabha

ಸಾರಾಂಶ

ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ 2026-27 ನೇ ಸಾಲಿನ ನೂತನ ಅಧ್ಯಕ್ಷರಾಗಿ ಮೆಲ್ವಿನ್ ಆರಾನ್ಹಾ ಶಿರ್ವಾ ಅವರು ಆಯ್ಕೆಯಾಗಿದ್ದಾರೆ.

ಉಡುಪಿ: ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ 2026-27 ನೇ ಸಾಲಿನ ನೂತನ ಅಧ್ಯಕ್ಷರಾಗಿ ಮೆಲ್ವಿನ್ ಆರಾನ್ಹಾ ಶಿರ್ವಾ ಅವರು ಆಯ್ಕೆಯಾಗಿದ್ದಾರೆ.

ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಕೇಂದ್ರದ ನಿಕಟಪೂರ್ವ ಅಧ್ಯಕ್ಷರಾದ ಆಲ್ವಿನ್ ಕ್ವಾಡ್ರಸ್ ಚುನಾವಣಾಧಿಕಾರಿಯಾಗಿದ್ದು, ವಲೇರಿಯನ್ ಫೆರ್ನಾಂಡಿಸ್ ಚುನಾವಣಾ ವೀಕ್ಷಕರಾಗಿದ್ದರು.

ನೂತನ ಪದಾಧಿಕಾರಿಗಳು ಹೀಗಿದ್ದಾರೆ, ಆಧ್ಯಾತ್ಮಿಕ ನಿರ್ದೇಶಕರು : ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್, ನಿಕಟಪೂರ್ವ ಅಧ್ಯಕ್ಷರು : ರೊನಾಲ್ಡ್ ಆಲ್ಮೇಡಾ ಉದ್ಯಾವರ, ನಿಯೋಜಿತ ಅಧ್ಯಕ್ಷರು : ಲೂವಿಸ್ ಡಿಸೋಜಾ ಸಾಸ್ತಾನ, ಉಪಾಧ್ಯಕ್ಷರು : ವಿಲ್ಸನ್ ಮಸ್ಕರೇನ್ಹಸ್ ಕಾರ್ಕಳ, ಪ್ರಧಾನ ಕಾರ್ಯದರ್ಶಿ : ಜುಲಿಯೆಟ್ ಡಿಸೋಜಾ ಪಾಂಗಾಳ, ಸಹಕಾರ್ಯದರ್ಶಿ : ಸೋನು ಸಿಕ್ವೇರಾ ಕಾರ್ಕಳ, ಕೋಶಾಧಿಕಾರಿ : ಗ್ಯಾರಿಫಿಲ್ಡ್ ಉರ್ಬಾನ್ ಲೂವಿಸ್ ಬ್ರಹ್ಮಾವರ, ಸಹ ಕೋಶಾಧಿಕಾರಿ : ಪ್ರತಿಮಾ ಡಿಸೋಜಾ ಕಾರ್ಕಳ.

ಉಡುಪಿ ಧರ್ಮಪ್ರಾಂತ್ಯದಲ್ಲಿ ಕಥೊಲಿಕ್ ಸಭಾ ಅತ್ಯಂತ ಪ್ರಭಾವಶಾಲಿ ಸಂಘಟನೆಯಾಗಿದ್ದು ರಾಜಕೀಯ ಜಾಗೃತಿ ಯೊಂದಿಗೆ ಹಲವಾರು ಸಾಮಾಜಿಕ ಚಟುವಟಿಕೆಗಳನ್ನು ನೆರವೇರಿಸಿಕೊಂಡು ಬರುತ್ತಿದ್ದು ಧರ್ಮಪ್ರಾಂತ್ಯ ವ್ಯಾಪ್ತಿಯ 50 ಚರ್ಚುಗಳಲ್ಲಿ ಸಂಘಟನೆ ತನ್ನ ಘಟಕಗಳನ್ನು ಹೊಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

120 ಅಡಿ ರಾಜಕಾಲುವೆಗೆ 15, 18 ಅಡಿಗಳ ಚರಂಡಿ: ವಿರೋಧ
ಸಂಜೀವಿನಿ ವಿದ್ಯಾಸಂಸ್ಥೆಯಲ್ಲಿ ಮಾತಾ ಪಿತೃ ವಂದನೆ; ಶಾರದಾ ಪೂಜೆ