ಕಾವೇರಿ ಪದವಿ ಕಾಲೇಜು ವಾರ್ಷಿಕೋತ್ಸವ ಸಮಾರಂಭ

KannadaprabhaNewsNetwork |  
Published : May 28, 2025, 12:22 AM IST
ಚಿತ್ರ : 26ಎಂಡಿಕೆ2 : ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.  | Kannada Prabha

ಸಾರಾಂಶ

ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು, ವಿದ್ಯಾರ್ಥಿ ಜೀವನದಲ್ಲಿ ಕಲಿಯುವ ಅನೇಕ ಅವಕಾಶಗಳು ದೊರೆಯುತ್ತದೆ. ಅದನ್ನು ಆಶಾವಾದಿಗಳಂತೆ ಸದುಪಯೋಗಪಡಿಸಿಕೊಳ್ಳುವ ಗುಣ ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ನಿವೃತ್ತ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ತಿಳಿಸಿದರು.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು, ವಿದ್ಯಾರ್ಥಿ ಜೀವನದಲ್ಲಿ ಕಲಿಯುವ ಅನೇಕ ಅವಕಾಶಗಳು ದೊರಕುತ್ತದೆ. ಅದನ್ನು ಆಶಾವಾದಿಗಳಂತೆ ಸದುಪಯೋಗಪಡಿಸಿಕೊಳ್ಳುವ ಗುಣ ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ನಿವೃತ್ತ ಪ್ರಾಂಶುಪಾಲರಾದ ಪ್ರೊ.ಪಟ್ಟಡ ಪೂವಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ವಿರಾಜಪೇಟೆ ಕಾವೇರಿ ಪದವಿ ಕಾಲೇಜಿನ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭ ಕಾಲೇಜಿನ ಕೌಸ್ತುಭ ಸಭಾಂಗಣ ದಲ್ಲಿ ಶನಿವಾರ ನಡೆಯಿತು.

ಕಾರ್ಯಕ್ರಮ ಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಸೃಷ್ಟಿಕರ್ತನು ಎಲ್ಲಾ ವ್ಯಕ್ತಿಗಳಿಗೂ ಅಗೋಚರ ಶಕ್ತಿ ನೀಡಿರುತ್ತಾನೆ. ಅದನ್ನು ಕಂಡುಕೊಳ್ಳುವ ಪ್ರಯತ್ನ ಮಾಡಬೇಕು. ಇದರೊಂದಿಗೆ ಜೀವನದಲ್ಲಿ ಋಣಾತ್ಮಕ ವಿಚಾರಗಳನ್ನು ತೆಗೆದು ಹಾಕಿದಾಗ ಮೇಲೇರಲು ಸಾಧ್ಯ. ಸಿಕ್ಕ ಅಸಾಧ್ಯವಾದ ಅವಕಾಶವನ್ನು ಸಾಧ್ಯ ಪಡಿಸಿಕೊಳ್ಳುವ ಕೆಲಸ ವಿದ್ಯಾರ್ಥಿ ಜೀವನದಲ್ಲಿ ಮಾಡಬೇಕೆಂದರು.

ನಾನು ಅರ್ಧ ವೃತ್ತಿ ಜೀವನ ಇದೇ ಕಾಲೇಜಿನಲ್ಲಿ ಕಳೆದಿದ್ದೇನೆ. ಕಾಲೇಜು ಎಲ್ಲಾವನ್ನು ನೀಡಿದೆ. ಎಂದು ಜೀವನ ಚರಿತ್ರೆಯ ಮೆಲುಕು ಹಾಕಿದರು. ಜೀವನದ ಮೌಲ್ಯಗಳೊಂದಿಗೆ ಮುಂದಿನ ಭವಿಷ್ಯ ನಿರ್ಧಾರದ ಗುರಿಹೊಂದಲು ವಿಧ್ಯಾರ್ಥಿಗಳು ಮುಂದಾಗಬೇಕು ಎಂದು ಹೇಳಿದರು.

ಜ್ಞಾನಗಳಿಕೆಗೆ ಹೆಚ್ಚಿನ ಒತ್ತನ್ನು ನೀಡಿ:

ಕಾರ್ಯಕ್ರಮದ ಮತ್ತೋರ್ವ ಅತಿಥಿ ಬಾನಂಗಡ ಅರುಣ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಮಾತನಾಡಿ ವಿದ್ಯಾರ್ಥಿ ಜೀವನ ದಿಂದಲೇ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಯುವಜನರು ಮುಂದಾಗ ಬೇಕು. ಮದ್ಯಪಾನ , ಮಾದಕ ದ್ರವ್ಯಗಳಿಗೆ ದಾಸರಾಗದೆ ನಮ್ಮ ಸುತ್ತಮುತ್ತಲಿರುವ ಅಂತಹ ವ್ಯಕ್ತಿಗಳನ್ನು ವ್ಯಸನ ಮುಕ್ತರನ್ನಾಗಿಸುವ ಪ್ರಯತ್ತ ಮಾಡಬೇಕು. ವಿದ್ಯಾರ್ಥಿ ಜೀವನದಲ್ಲಿ ಮೊಬೈಲ್ ಗೀಳಿಗೆ ಬೀಳದೆ ಜ್ಞಾನಗಳಿಕೆಗೆ ಹೆಚ್ಚಿನ ಒತ್ತನ್ನು ನೀಡಿ ಉತ್ತಮ ವ್ಯಕ್ತಿತ್ವ ದೊಂದಿಗೆ ಕುಟುಂಬದ ಆಧಾರ ಸ್ತಂಭವಾಗಿ ಸಮಾಜದಲ್ಲಿ ಧೀಮಂತ ವ್ಯಕ್ತಿಗಳಾಗಿ ಬಾಳಿ ಎಂದರು.

ಉನ್ನತ ಮಟ್ಟದ ಸಾಧನೆ ಮಾಡಬೇಕು:

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾವೇರಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಮಂಡೇಪಂಡ ಸುಗುಣ ಮುತ್ತಣ್ಣ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಆಡಳಿತ ಮಂಡಳಿಯು ಶ್ರಮಿಸುತ್ತಿದೆ. ವಿಧ್ಯಾರ್ಥಿಗಳು ತಮ್ಮ ಕಲಿಕೆಯಲ್ಲಿ ಉನ್ನತ ಮಟ್ಟದ ಸಾಧನೆ ಮಾಡಬೇಕು.

ಅಬ್ದುಲ್ ಕಲಾಂ , ನಾರಾಯಣ್ , ಕೆ. ಶಿವನ್ , ನರೇಂದ್ರ ಮೋದಿ ಗಳಂತಹ ಧೀಮಂತ ವ್ಯಕ್ತಿಗಳನ್ನು ಜೀವನಕ್ಕೆ ಸ್ಪೂರ್ತಿಯಾಗಿ ತೆಗೆದುಕೊಳ್ಳ ಬೇಕೆಂದರು.

ಕಾರ್ಯಕ್ರಮದ ಮೊದಲಿಗೆ ಕಾಲೇಜಿನ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್ ಸಲ್ಡಾನ 2024 -25 ನೇ ಸಾಲಿನಲ್ಲಿ ವಿವಿಧ ಕ್ರೀಡೆ, ಸಾಂಸ್ಕೃತಿಕ, ಶೈಕ್ಷಣಿಕ, ಎನ್.ಎಸ್.ಎಸ್. ಮತ್ತು ಎನ್.ಸಿ.ಸಿ. ವಾರ್ಷಿಕ ವರದಿಯನ್ನು ವಾಚಿಸಿದರು. ನಂತರ 2024 -25 ನೇ ಸಾಲಿನಲ್ಲಿ ವಿವಿಧ ಕ್ರೀಡೆ, ಸಾಂಸ್ಕೃತಿಕ, ಶೈಕ್ಷಣಿಕ, ಎನ್.ಎಸ್.ಎಸ್. ಮತ್ತು ಎನ್.ಸಿ.ಸಿ. ಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ನಂತರ ವಿವಿಧ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆ ಮೇಲೆ ಐಕ್ಯೂಎಸಿ ಸಂಚಾಲಕಿ ಪ್ರಿಯ ಮುದ್ದಪ್ಪ, ವಿದ್ಯಾರ್ಥಿ ಕ್ಷೇಮಪಾಲನ ಸಮಿತಿ ಮುಖ್ಯಸ್ಥರಾದ ಹೆಚ್.ವಿ.ನಾಗರಾಜು , ವಿದ್ಯಾರ್ಥಿ ನಾಯಕರು ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಕಾವೇರಿ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಸಿ.ಡಿ. ಮಾದಪ್ಪ, ಎನ್.ಕೆ.ಮೊಣ್ಣಪ್ಪ, ವಾಣಿ, ಸುಭಾಸ್, ಅಚ್ಚಯ್ಯ, ಉಪಸ್ಯಾಸಕರಾದ ಡಾ. ವೀಣಾ, ಅಂಬಿಕಾ , ರಾಘವೇಂದ್ರ, ಸೋಮಣ್ಣ, ನಿರ್ಮಿತ, ಬೋಜಮ್ಮ , ಕಾವೇರಮ್ಮ ಗಾಯಿತ್ರಿ, ಅನುಪಮ , ಆಡಳಿತಾತ್ಮಕ ಸಿಬ್ಬಂದಿ, ವಿದ್ಯಾರ್ಥಿಗಳು ಪೋಷಕರೂ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!