ಕನ್ನಪ್ರಭ ವಾರ್ತೆ ಕಲಬುರಗಿ
ಇಲ್ಲಿನ ಪ್ರತಿಷ್ಠಿತ ಅಪ್ಪಾ ಪಬ್ಲಿಕ್ ಶಾಲೆಯ ಮಕ್ಕಳು ಸಿಬಿಎಸ್‌ಇ ಎಸ್ಸೆಸ್ಸೆಲ್ಸಿ ಹಾಗೂ ಕ್ಲಾಸ್ 12ರ ಪರೀಕ್ಷೆಯಲ್ಲಿ ಎಲ್ಲರು ನೋಡುವಂತಹ ಅತ್ಯುತ್ತಮ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.ಇಲ್ಲಿನ ಸಿಬಿಎಸ್‌ಇ ಎಸ್ಸೆಸ್ಸೆಲ್ಸಿ ಶಾಲೆಯ ಒಟ್ಟಾರೆ ಫಲಿತಾಂಶ ಶೇ.92.3ರಷ್ಟು ದಾಖಲಾಗಿದೆ. ಅಂದರೆ ಶಾಲೆಯಲ್ಲಿ ಪರೀಕ್ಷೆ ಬರೆದ 307 ಮಕ್ಕಳಲ್ಲಿ 302 ಮಕ್ಕಳು ತೇಗ್ರಡೆಯಾಗಿದ್ದಾರೆ.ಶ್ರಾವಣಿ ಪಾಟೀಲ್ ಇವಳು 500ಕ್ಕೆ 486 ಅಂಕಗಳನ್ನು ಡೆದು ಶೇ.97.6ರಷ್ಟು ಸಾಧನೆ ಮಾಡಿ ಶಾಲೆಗೇ ಟಾಪ್ಪರ್ ಆಗಿ ಹೊರಹೊಮ್ಮಿದ್ದಾಳೆ. ಇದೇ ಶಾಲೆಯ ಮಾಸ್ಟರ್ ವೀರ ರಟಕಲ್ ಹಾಗೂ ಸ್ಪೂರ್ತಿ ರೆಡ್ಡಿ ಕ್ರಮವಾಗಿ ಶೇ.95.2 ಹಾಗೂ ಶೇ.94.1ರಷ್ಟು ಸಾಧನೆ ಮಾಡಿದ್ದಾರೆ.
ಸ್ಪೂರ್ತಿ ರೆಡ್ಡಿ ಇವಳು ಸಮಾಜ ಶಾಸ್ತ್ರ ಅಧ್ಯಯನ ವಿಷಯದಲ್ಲಿ ನೂರಕ್ಕೆ ನೂರು ಅಂಕ ಗಳಿಸವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ.ಶೇ.85ರಿಂದ ಶೇ.100 ರೊಳಗೆ ಶಾಲೆಯ 36 ಮಕ್ಕಳು ಸಾಧನೆಮಾಡಿ ಅಂಕಗಳ ಗುಣಾಗ್ರಣಿಗಳಾಗಿ ಹೊರಹೊಮ್ಮಿದ್ದಾರೆ. ಇನ್ನು 23 ಮಕ್ಕಳು ಪ್ರಥಮರಾಗಿ, ಶೇ.60ರಿಂದ ಶೇ. 9 ಅಂಕ ಗಳಿಸುವ ಮೂಲಕ 126 ಮಕ್ಕಳು ಸಾಧನೆಮೆರಿದ್ದಾರೆ. ದವಿತೀಯ ದರ್ಜೆಯಲ್ಲಿ 42 ಮಕ್ಕಳು ಪಾಸಾಗಿದ್ದರೆ, 40 ಮಕ್ಕಳು ಪಾಸಾಗಿದ್ದಾರೆ.
ಸಿಬಿಎಸ್‌ಇ 12ನೇ ತರಗತಿಯಲ್ಲಿ ನೂರಕ್ಕೆ ನೂರು ಫಲಿತಾಂಶ: ಅಪ್ಪಾ ಪಬ್ಲುಕ್ ಶಾಲೆಯ 12ನೇ ತರಗತಿ ಫಲಿತಾಂಶ ನೂರಕ್ಕೆ ನೂರು ಸಾಧನೆ ಮಾಡಿ ಗಮನ ಸೆಳೆದಿದೆ. ಎಲ್ಲಾ 19 ಮಕ್ಕಳು ಪಾಸಾಗಿದ್ದಾರೆ. ಈ ಪೈಕಿ ಓಂಕಾರ ನಕುಲ ಡಿಗ್ಗಿ ಶೇ.84.6, ಹೋಗಿರಲಾ ಅಭಿಜಿತ್ ಚಂದ್ರ ನೀಲಾ ಶೇ.81.6, ಮಾಸ್ಟರ್ ಮಧುಸೂಧನ ಶೇ.78. 8 ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.ಇಬ್ಬರು ಶೇ.80ಕ್ಕಿಂತ ಅಧಿಕ, ಉಳಿದಂತೆ 15 ಮಕ್ಕಳು ಪ್ರಥಮ ದರ್ಜೆ, ಇಬ್ಬರು 2ನೇ ದರ್ಜೆಯಲ್ಲಿ ಪಾಸಾಗಿದ್ದಾರೆ. ಶಾಲೆಯ ಈ ಸಾಧನೆಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅದ್ಯಕ್ಷರಾದ ಡಾ. ಶರಣಬಸವಪ್ಪ ಅಪ್ಪಾ, ಮಾತೋಶ್ರೀ ದಾಕ್ಷಾಯಿಣಿ ಅವ್ವಾಜಿ, ಮಕ್ಕಳನ್ನು, ಬೋಧಕರನ್ನು ಅಭಿನಂದಿಸಿದ್ದಾರೆ. ಶಾಲೆಯ ಮಾರ್ಗದರ್ಶಕರಾದ ಎನ್ ಎಸ್ ದೇವರಕಲ್ ಅವರು ಅಪ್ಪಾ ಶಾಲೆಯ ಸಿಬಿಎಸ್‌ಇ ಫಲಿತಾಂಶದಲ್ಲಿ ನಿರಂತರ ಏರಿಕೆ ಕಂಡು ಬರುತ್ತಿರೋದನ್ನ ಗುರುತಿಸಿ ಸಂತಸ ಪಟ್ಟಿದ್ದಾರಲ್ಲದೆ ಸಾಧಕ ಮಕ್ಕಳಿಗೆ, ಅಲ್ಲಿನ ಬೋಧಕ ಸೇರಿದಂತೆ ಎಲ್ಲಾ ಸಿಬ್ಬಂದಿಗೆ ಅಭಿನಂದಿಸಿದ್ದಾರೆ.