ಕನ್ನಡಪ್ರಭ ವಾರ್ತೆ ಕೋಲಾರಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಸುಸ್ಥಿತಿಯಲ್ಲಿರಲಿ ಮತ್ತು ಕೊಠಡಿಗಳಲ್ಲಿ ಸೂಕ್ತ ಗಾಳಿ, ಬೆಳಕಿನ ವ್ಯವಸ್ಥೆ ಸರಿಯಾಗಿರುವಂತೆ ಗಮನಹರಿಸಿ, ವಿದ್ಯಾರ್ಥಿ ಸ್ನೇಹಿಯಾಗಿ ಪರೀಕ್ಷೆ ನಡೆಸಲು ಎಲ್ಲಾ ಅಗತ್ಯ ಕ್ರಮಕೈಗೊಳ್ಳಿ ಎಂದು ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು, ಉಪಮುಖ್ಯ ಅಧೀಕ್ಷಕರು ಹಾಗೂ ಪ್ರಶ್ನೆಪತ್ರಿಕಾ ಪಾಲಕರಿಗೆ ಬಿಇಒ ಮಧುಮಾಲತಿ ಪಡುವಣೆ ಸೂಚನೆ ನೀಡಿದರು.ತಾಲೂಕಿನ ನರಸಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿ, ಕೇಂದ್ರದಲ್ಲಿನ ಕೊಠಡಿಗಳಿಗೆ ಭೇಟಿ ನೀಡಿ, ಸಿಸಿ ಕ್ಯಾಮರಾ ಸೌಲಭ್ಯ, ಡೆಸ್ಕ್ ಅಳವಡಿಕೆ, ಗಾಳಿ, ಬೆಳಕಿನ ವ್ಯವಸ್ಥೆ ಕುರಿತು ಗಮನಹರಿಸಿ, ಪ್ರವೇಶದ್ವಾರ, ಕೇಂದ್ರದ ಕಾರಿಡಾರ್, ಬಂಡಲ್ ಕಟ್ಟುವ ಕಚೇರಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಿರುವ ಕುರಿತು ಖಾತ್ರಿಪಡಿಸಿಕೊಳ್ಳಿ ಎಂದು ಸೂಚಿಸಿದರು.ಪರೀಕ್ಷೆಗೆ ತೊಂದರೆ ಆಗದಿರಲಿ
ಮಕ್ಕಳಿಗೆ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಯಾವುದೇ ಅಡ್ಡಿ ಎದುರಾಗಬಾರದು, ಪರೀಕ್ಷೆ ಹಬ್ಬದಂತಿರಲಿ, ಯಾವುದೇ ಅವ್ಯವಹಾರಗಳಿಗೆ ಅವಕಾಶ ನೀಡಬೇಡಿ, ಮಕ್ಕಳನ್ನು ಕೇಂದ್ರಕ್ಕೆ ಸಂತಸದಿಂದ ಸ್ವಾಗತಿಸಿ ಆತ್ಮಸ್ಥೈರ್ಯ ತುಂಬಿ ಪರೀಕ್ಷಾ ಭಯ ಹೋಗಲಾಡಿಸಿ ಎಂದು ಸಲಹೆ ನೀಡಿದರು.200 ಮೀ. ವ್ಯಾಪ್ತಿ ನಿಷೇಧಾಜ್ಞೆಪರೀಕ್ಷಾ ಕೇಂದ್ರಗಳ ಸುತ್ತ ಜಿಲ್ಲಾಧಿಕಾರಿ ಸೂಚನೆಯಂತೆ ೨೦೦ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಮುಖ್ಯ ಅಧೀಕ್ಷಕರು ಸ್ಥಳೀಯ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು, ಆರೋಗ್ಯ ರಕ್ಷಣೆಗೂ ಒತ್ತು ನೀಡಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಓರ್ವ ಆರೋಗ್ಯ ಸಹಾಯಕರು ಕೇಂದ್ರದಲ್ಲಿ ಪರೀಕ್ಷೆ ಸಂದರ್ಭದಲ್ಲಿ ಹಾಜರಿರಲು ಕ್ರಮವಹಿಸಿ ಎಂದರು.
ಕೇಂದ್ರದ ಮುಖ್ಯ ಅಧೀಕ್ಷಕಿ ತಾಹೇರಾ ನುಸ್ರತ್, ಪ್ರಶ್ನೆಪತ್ರಿಕೆ ಪಾಲಕ ಸುಬ್ರಹ್ಮಣ್ಯಾಚಾರಿ, ಇಸಿಒ ಮುನಿರತ್ಯಯ್ಯಶೆಟ್ಟಿ, ಮುಖ್ಯ ಶಿಕ್ಷಕ ಗೋಪಿನಾಥ್, ಶಿಕ್ಷಕರಾದ ಶಿವಪ್ರಸಾದ್, ರವಿಕುಮಾರ್, ಶಿವಶಂಕರರೆಡ್ಡಿ, ಚಂದ್ರ, ರೇಣುಕಾ, ಮಂಜುಳಾ, ಜಯಂತಿ, ಸಿಬ್ಬಂದಿ ಡಿ.ಚಂದ್ರಶೇಕರ್, ನಾಗಭೂಷಣ್ ಇದ್ದರು.