ಸಿಇಸಿ ಜ್ಞಾನೇಶ್‌ ಕುಮಾರ್‌ ರಾಜೀನಾಮೆ ನೀಡಲಿ: ಆಗ್ರಹ

KannadaprabhaNewsNetwork |  
Published : Oct 03, 2026, 01:30 AM IST
2ಕೆಆರ್ ಎಂಎನ್ 4.ಜೆಪಿಜಿರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 157ನೇ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 122ನೇ ಜಯಂತಿ ಆಚರಿಸಲಾಯಿತು. | Kannada Prabha

ಸಾರಾಂಶ

ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಂದ ರಾಜೀನಾಮೆ ಪಡೆದು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿ ಎಸ್‌ಐಆರ್‌ ವಿರೋಧಿ ಜಾತ್ಯತೀತ ಪಕ್ಷಗಳು ಹಾಗೂ ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಂದ ರಾಜೀನಾಮೆ ಪಡೆದು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿ ಎಸ್‌ಐಆರ್‌ ವಿರೋಧಿ ಜಾತ್ಯತೀತ ಪಕ್ಷಗಳು ಹಾಗೂ ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಸ್ಥಳೀಯ ಡಾ.ಬಿ.ಆರ್‌.ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಒಕ್ಕೂಟದ ಪದಾಧಿಕಾರಿಗಳು,ಸದಸ್ಯರು, ಮುಖಂಡರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಚುನಾವಣಾ ಆಯೋಗ ಏಕರೀತಿಯ ಅಭಿಪ್ರಾಯದಡಿ ದೇಶದಲ್ಲಿ ಜಾರಿಗೊಳಿಸಿರುವ ಎಸ್ಐಆರ್‌ ಪ್ರಕ್ರಿಯೆಯಿಂದ ನೈಜ ಮತದಾರರನ್ನು ಹೊರಗುಳಿಸಲಾಗುತ್ತಿದ್ದು, ಅವೈಜ್ಞಾನಿಕವಾಗಿ ನಡೆದಿರುವ ಎಸ್‌ಐಆರ್‌ ಕೂಡಲೇ ರದ್ದು ಪಡಿಸಬೇಕು ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ಏಜೆಂಟರಂತೆ ಕೆಲಸ ಮಾಡುತ್ತಿರುವ ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಗಳ ಮುಖಂಡರಾದ ಎಸ್‌.ಮಾರೆಪ್ಪ, ರವೀಂದ್ರನಾಥ ಪಟ್ಟಿ,ಮಾರೆಪ್ಪ ಹರವಿ, ಶರಣಕುಮಾರ ಮುದ್ದಂಗುಡಿ, ಜಾವ್‌ ವೆಸ್ಲಿ ಟಿ.ಕಾತರಕಿ, ಖಲೀಲ್‌ ಪಾಷಾ, ಆಂಜನೇಯ್ಯ ಕುರುಬದೊಡ್ಡಿ, ಮಾರೆಮ್ಮ, ಶ್ರೀನಿವಾಸ ಸೇರಿ ಅನೇಕರು ಇದ್ದರು.

ಸಿಂಧನೂರು: ಜಾಗೃತಿ ವೇದಿಕೆ ಪ್ರತಿಭಟನೆ:

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಎಸ್ಐಆರ್ ಜಾಗೃತಿ ವೇದಿಕೆ ವತಿಯಿಂದ ನಗರದ ಗಾಂಧಿ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.

ಎಲ್ಲ ರಾಜ್ಯಗಳಲ್ಲಿ 2025ರ ಜನವರಿಯ ಮತದಾರರ ಪಟ್ಟಿ ಮುಂದುವರಿಸಬೇಕು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಬ್ಬೊಬ್ಬ ವ್ಯಕ್ತಿ ನೂರಾರು ಫಾರಂ ನಂ.7 ನೀಡಿ ನಿರ್ದಿಷ್ಟ ಸಮುದಾಯದ ಮತದಾರರ ನೊಂದಣಿ ರದ್ದುಗೊಳಿಸಲು ಸಂಚು ನಡೆಸಿರುವುದು ಈಗಾಗಲೇ ಬಯಲಾಗಿದೆ. ಚುನಾವಣಾ ಆಯೋಗದ ಲೋಪಗಳು ಮೇಲಿಂದ ಮೇಲೆ ಒಂದೊಂದಾಗಿ ಹೊರ ಬೀಳುತ್ತಿವೆ. ಎಸ್ಐಆರ್ ಹೆಸರಿನಲ್ಲಿ ಅರ್ಹ ಮತದಾರರನ್ನು ಹೊರಗಿಟ್ಟು ಚುನಾವಣೆ ನಡೆಸುತ್ತಿರುವುದು ಆಘಾತಕಾರಿ ಬೆಳವಣಿಗೆಯಾಗಿದ್ದು, ಜನರು ಬೀದಿಗಿಳಿದು ಹೋರಾಟ ನಡೆಸುವ ದಿನಗಳು ದೂರವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್ಐಆರ್ ಹೆಸರಲ್ಲಿ ಆದಿವಾಸಿ, ದಲಿತ, ಮುಸ್ಲಿಂ ಸೇರಿದಂತೆ ಶೋಷಿತ ಸಮುದಾಯಗಳ ಜನರ ಹೆಸರನ್ನು ಮತದಾರರ ಪಟ್ಟಿಯಿಂದ ಹೊರಗಿಡಲಾಗುತ್ತಿದೆ. ಚುನಾವಣಾ ಆಯೋಗ ಬಿಜೆಪಿ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿದ್ದು, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡಲು ಹೊರಟಿದೆ ಎಂದು ಆಪಾದಿಸಿದರು.

ಮುಖಂಡರಾದ ಚಂದ್ರಶೇಖರ ಗೊರಬಾಳ, ಭಾಷುಮಿಯಾ, ಎಸ್.ದೇವೇಂದ್ರಗೌಡ, ಬಸವಂತರಾಯಗೌಡ ಕಲ್ಲೂರು, ಚಂದ್ರಶೇಖರ ಕ್ಯಾತ್ನಟ್ಟಿ, ಶಂಕರ ಗುರಿಕಾರ, ಬಸವರಾಜ ಬಾದರ್ಲಿ, ಹೆಚ್.ಎಫ್.ಮಸ್ಕಿ, ಕೃಷ್ಣಮೂರ್ತಿ ಧುಮತಿ, ಗಂಗಮ್ಮ ಗೊರಬಾಳ, ಜಗದೀಶ ಸುಕಾಲಪೇಟೆ, ಮರಿಯಪ್ಪ ಸುಕಾಲಪೇಟೆ, ಸುಲೋಚನಾ, ಯಮನಮ್ಮ, ಆದಿಲಕ್ಷ್ಮೀ, ಆರೋಗ್ಯಮ್ಮ ಜವಳಗೇರಾ, ಶಾಂತಮ್ಮ ಗೊರೇಬಾಳ, ರತ್ನಮ್ಮ ದೇವರಗುಡಿ, ಖಾಸಿಂ ಕಾರ್ಪೇಂಟರ್, ಚಿಟ್ಟಿಬಾಬು ಬೂದಿವಾಳ ಕ್ಯಾಂಪ್ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮಾಭಿವೃದ್ಧಿಯೇ ಗ್ರಾಮ ಸ್ವರಾಜ್ಯದ ಆಶಯ: ಸಚಿವ ಸಿ.ಪುಟ್ಟರಂಗಶೆಟ್ಟಿ
ಪುರಸಭೆಯಲ್ಲಿ ಎಸ್.ಶರವಣ ಸ್ವಚ್ಛತಾ ಪ್ರತಿಜ್ಞಾ ವಿಧಿ