ವರ್ಗೀಸ್ ಕ್ಲೀಟಸ್ ದಂಪತಿಗೆ ಸೆಲ್ಕೊ ಸ್ಟಾರ್ 2024 ಪ್ರಶಸ್ತಿ

KannadaprabhaNewsNetwork |  
Published : May 29, 2024, 12:49 AM IST
ತರೀಕೆರೆ ವಿಕಸನ ಸಾಮಾಜಿಕ ಹಾಗೂ ಶೈಕ್ಷಣಿಕ ಅಬಿವೃದ್ದಿ ಸಂಸ್ಥೆ ಸಂಸ್ಥಾಪಕರಾದ                                                        ವರ್ಗೀಸ್ ಕ್ಲೀಟಸ್, ಲಿಲ್ಲಿ ವರ್ಗೀಸ್  ಅವರಿಗೆ  ರಾಜ್ಯ ಮಟ್ಟದ ಸೆಲ್ಕೊ ಸ್ಟಾರ್ 2024 ಪ್ರಶಸ್ತಿ | Kannada Prabha

ಸಾರಾಂಶ

ಬೆಂಗಳೂರು ಸೆಲ್ಕೋ ಸೇವಾ ಸಂಸ್ಥೆಯು 30ನೇಯ ವಾರ್ಷಿಕೋತ್ಸವ ಅಂಗವಾಗಿ ತರೀಕೆರೆ ವಿಕಸನ ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ದಿ ಸಂಸ್ಥೆಯ ಸಂಸ್ಥಾಪಕರಾದ ಎ.ಎಂ ವರ್ಗೀಸ್ ಕ್ಲೀಟಸ್ ಮತ್ತು ಲಿಲ್ಲಿ ವರ್ಗೀಸ್ ಅವರಿಗೆ ಸೆಲ್ಕೋ ಸ್ಟಾರ್ 2024 ಪ್ರಶಸ್ತಿ ನೀಡಿ ಗೌರವಿಸಿದೆ.

ತರೀಕೆರೆ: ಬೆಂಗಳೂರು ಸೆಲ್ಕೋ ಸೇವಾ ಸಂಸ್ಥೆಯು 30ನೇಯ ವಾರ್ಷಿಕೋತ್ಸವ ಅಂಗವಾಗಿ ಬೆಂಗಳೂರು ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ತರೀಕೆರೆ ವಿಕಸನ ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿ ಸಂಸ್ಥೆಯ ಸಂಸ್ಥಾಪಕರಾದ ಎ.ಎಂ ವರ್ಗೀಸ್ ಕ್ಲೀಟಸ್ ಮತ್ತು ಲಿಲ್ಲಿ ವರ್ಗೀಸ್ ಅವರಿಗೆ ಸೆಲ್ಕೋ ಸ್ಟಾರ್ 2024 ಪ್ರಶಸ್ತಿ ನೀಡಿ ಗೌರವಿಸಿದೆ.

ವಿಕಸನ ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿ ಸಂಸ್ಥೆಯು ಕಳೆದ 35 ವರ್ಷಗಳಿಂದ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹಿಂದುಳಿದ ಹಾಗೂ ಬಡ ಗ್ರಾಮಗಳಲ್ಲಿ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಸಂಸ್ಥೆಯ ಸಂಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ, ಲಿಲ್ಲಿ ವರ್ಗೀಸ್ ಹಾಗೂ ವರ್ಗೀಸ್ ಕ್ಲೀಟಸ್ ರವರು ವಿವಿಧ ಸಂಪನ್ಮೂಲಗಳನ್ನು ಸಂಗ್ರಹಿಸಿ ವಿದ್ಯುಚ್ಛಕ್ತಿಯಿಲ್ಲದ ಬಡ ಕುಟುಂಬಗಳನ್ನು ಗುರುತಿಸಿ 550ಕ್ಕೂ ಹೆಚ್ಚು ಗಿರಿಜನರಿಗೆ ದೀಪದ ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟಿದ್ದಾರೆ.

ಚಿಕ್ಕಮಗಳೂರಿನ ತರೀಕೆರೆ ಹಾಗೂ ಕಡೂರು ತಾಲೂಕುಗಳಲ್ಲಿ ಬಡ ಹಾಗೂ ಹಿಂದುಳಿದ ಕುಟುಂಬಗಳನ್ನು ಗುರುತಿಸಿ ವಿವಿಧ ಸಂಪನ್ಮೂಲಗಳನ್ನು ಕ್ರೋಡಿಕರಿಸಿ 850 ಕ್ಕೂ ಹೆಚ್ಚು ಸೋಲಾರ್ ವಿದ್ಯುತ್ ದೀಪದ ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟಿದ್ದಾರೆ. ಅಲ್ಲದೆ ಅನೇಕ ಮನೆಗಳಿಗೆ ವಾಟರ್ ಹೀಟರ್ ಉಪಕರಣಗಳ ಸೌಲಭ್ಯ ಒದಗಿಸಿದ್ದಾರೆ.ಸೌರಶಕ್ತಿ ಇಂಧನದ ಅರಿವು ಪರಿಸರ ಸಂರಕ್ಷಣೆ ವಿದ್ಯ್ಯುಚ್ಚಕ್ತಿಯ ಮಿತಬಳಕೆ ಮಾಡಲು ಇವರ ಸೇವೆ ಅತ್ಯಮೂಲ್ಯವಾಗಿದೆ. ಜಾಗತಿಕ ತಾಪಮಾನ ಕಡಿಮೆ ಮಾಡುವುದರಲ್ಲಿ ವರ್ಗೀಸ್ ದಂಪತಿಗಳ ಸೇವೆ ಗಣನೀಯವಾಗಿದೆ.

ಇವರ ಸೇವೆ ಗುರುತಿಸಿ ಸೆಲ್ಕೋ ಸೋಲಾರ್ ಸಂಸ್ಥೆಯು ತಮ್ಮ ಸಂಸ್ಥೆಯ 30 ನೇ ವಾರ್ಷಿಕೋತ್ಸವ ಅಂಗವಾಗಿ ರಾಜ್ಯಮಟ್ಟದ ಸೆಲ್ಕೊ ಸ್ಟಾರ್ 2024 ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಇವರ ಸೇವೆಯಿಂದ ವಿದ್ಯ್ಯುಚ್ಚಕ್ತಿಯ ಮಿತಬಳಕೆ ಕಡಿಮೆ ಹಾಗೂ ಬದಲೀ ಇಂದನದ ಮೂಲಕ ಇನ್ನಷ್ಟೂ ಜಾಗತಿಕ ತಾಪಮಾನವನ್ನು ಕಡಿಮೆ ಮಾಡಲು ಹಾಗೂ ಸೌರಶಕ್ತಿಯ ಹೆಚ್ಚು ಹೆಚ್ಚು ಬಳಕೆ ಮಾಡಲು ಈ ದಂಪತಿಗಳ ಮೂಲಕ ಪೋತ್ಸಾಹ ದೊರೆಕಿದಂತಾಗಿದೆ.

ಈ ಬಗ್ಗೆ ಪ್ರತಿಯೊಬ್ಬ ನಾಗರೀಕರು ತಮ್ಮ ಅಮೂಲ್ಯವಾದ ಸೇವೆಯನ್ನು ಪರಿಸರ ಸಂರಕ್ಷಣೆ ಹಾಗೂ ಸೌರಶಕ್ತಿಯ ಹೆಚ್ಚು ಬಳಕೆ ಮಾಡಲು ಸಂಸ್ಥೆಯ ಎ.ಎಂ.ವರ್ಗೀಸ್ ಕ್ಲೀಟಸ್ ಮತ್ತು ಲಿಲ್ಲಿ ವರ್ಗೀಸ್ ಅವರು ಮನವಿ ಮಾಡಿಕೊಂಡುದ್ದಾರೆ.

PREV

Recommended Stories

79 ವರ್ಷಗಳ ನಂತ್ರ ಅಥಣಿಗೆ ಸರ್ಕಾರಿ ಪ್ರೌಢಶಾಲೆ!
ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ