ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿ: ಡಿವೈಎಸ್ಪಿ

KannadaprabhaNewsNetwork |  
Published : Jun 13, 2024, 12:51 AM IST
12ಕೆಜಿಎಲ್5ಕೊಳ್ಳೇಗಾಲ ಪಟ್ಟಣದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಬುಧವಾರ ಕರೆಯಲಾಗಿದ್ದ  ಸಭೆಯಲ್ಲಿ  ಡಿವೈಎಸ್ಪಿ ಧಮೇಂದ್ರ  ಮಾತನಾಡಿದರು. ಸಿಪಿಐ ಕೖಷ್ಣಪ್ಪ ಇನ್ನಿತರಿದ್ದರು. | Kannada Prabha

ಸಾರಾಂಶ

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಡಾ.ರಾಜ್ ಕುಮಾರ್ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಿದೆ. ಅಡ್ಡಾದಿಡ್ಡಿ ನಿಲ್ಲಿಸುವ ವಾಹನಗಳಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ, ಈ ಘಟನೆಗೆ ವತ೯ಕರು ತಮ್ಮ ತಳ್ಳು ಗಾಡಿಗಳನ್ನು ರಸ್ತೆ ಬದಿಯಲ್ಲಿಯೇ ನಿಲ್ಲಿಸಿ ವ್ಯಾಪಾರ ಮಾಡಬೇಕು,

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಬಕ್ರೀದ್ ಹಬ್ಬವನ್ನು ಮುಸಲ್ಮಾನ ಬಂಧುಗಳು ಶಾಂತಿ ಹಾಗೂ ಸೌಹಾರ್ದಯುತವಾಗಿ ಆಚರಣೆ ಮಾಡಬೇಕು, ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡಬಾರದು, ಈ ನಿಟ್ಟಿನಲ್ಲಿ ಇಲಾಖೆ ಜೊತೆ ಸಹಕರಿಸಬೇಕು ಎಂದು ಡಿವೈಎಸ್ಪಿ ಎಂ. ಧರ್ಮೇಂದ್ರ ಹೇಳಿದರು.

ಅವರು ಪಟ್ಟಣ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಬುಧವಾರ ಬಕ್ರೀದ್ ಹಬ್ಬದ ಪ್ರಯುಕ್ತ ಕರೆಯಲಾಗಿದ್ದ ಸರ್ವಧರ್ಮದ ಮುಖಂಡರನ್ನೊಳಗೊಂಡ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಕ್ರೀದ್ ಹಬ್ಬದಲ್ಲಿ ಮುಸಲ್ಮಾನ ಬಂಧುಗಳು ಸಾಮೂಹಿಕವಾಗಿ ಮೆರವಣಿಗೆ ಮೂಲಕ ಸಾಗಿ ಪ್ರಾರ್ಥನೆ ಮಾಡುವ ಪದ್ಧತಿ ಇದ್ದು, ಈ ವೇಳೆ ಮುಸ್ಲಿಂ ಸಮುದಾಯ ಮುಖಂಡರು ಸ್ವಯಂ ಪ್ರೇರಿತವಾಗಿ ನಾಯಕತ್ವ ವಹಿಸಿಕೊಂಡು ಯಾವುದೇ ಅಹಿತಕರ ಘಟನೆ ನಡೆಯದಂತೆ ಜಾಗೃತಿ ವಹಿಸಬೇಕು, ಈ ನಿಟ್ಟಿನಲ್ಲಿ ಪೋಲಿಸ್ ಇಲಾಖೆ ನಿಮಗೆ ಹೆಚ್ಚಿನ ಸಹಕಾರ ನೀಡಲಿದೆ, ಕೊಳ್ಳೇಗಾಲದಲ್ಲಿ ಎಲ್ಲ ಜನಾಂಗವುಪರಸ್ಪರ ಶಾಂತಿ, ನೆಮ್ಮದಿ, ಸಹಬಾಳ್ವೆಯಿಂದ ಜೀವನ ನಡೆಸುತ್ತಿರುವುದು ಸಂತೋಷದ ವಿಚಾರ, ಇನ್ನು ಹಬ್ಬದ ವೇಳೆ ಬೈಕ್‍ನಲ್ಲಿ ತ್ರಿಬಲ್ ರೈಡಿಂಗ್ ಮಾಡಬಾರದು, ಪಟ್ಟಣದಲ್ಲಿ ಈಗಾಗಲೇ ತ್ರಿಬಲ್ ರೈಡಿಂಗ್ ಹಾಗೂ ಮೈನರ್ ಡ್ರೈವಿಂಗ್ ನಿರತರ ಮೇಲೆ ಇಲಾಖೆ ನಿಗಾ ಇಟ್ಟಿದ್ದು, ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳಬೇಕಾಗುತ್ತದೆ ಎಂದರು. ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಡಾ.ರಾಜ್ ಕುಮಾರ್ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಿದೆ. ಅಡ್ಡಾದಿಡ್ಡಿ ನಿಲ್ಲಿಸುವ ವಾಹನಗಳಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ, ಈ ಘಟನೆಗೆ ವತ೯ಕರು ತಮ್ಮ ತಳ್ಳು ಗಾಡಿಗಳನ್ನು ರಸ್ತೆ ಬದಿಯಲ್ಲಿಯೇ ನಿಲ್ಲಿಸಿ ವ್ಯಾಪಾರ ಮಾಡಬೇಕು, ಹಾಗಾಗಿ ಶೀಘ್ರದಲ್ಲೆ ವತ೯ಕರ ಸಭೆ ಕರೆದು ಸುಗಮ ಸಂಚಾರಕ್ಕೆ ಕ್ರಮವಹಿಸಲಾಗುವುದು ಎಂದರು. ಬಸ್ತಿಪುರ ಹಬ್ಬದ ವೇಳೆಯೂ ಶಾಂತಿ ಕಾಪಾಡಿ ಪಟ್ಟಣದ ಬಸ್ತೀಪುರ ಬಡಾವಣೆಯಲ್ಲಿ ಜೂ.13, 14 ಎರಡು ದಿನಗಳ ಕಾಲ ನಡೆಯಲಿರುವ ಶ್ರೀ ಸಿದ್ದಪ್ಪಾಜಿ ಕೊಂಡೋತ್ಸವ ಕಾರ್ಯಕ್ರಮದಲ್ಲಿ ಬಡಾವಣೆಯ ವಿವಿಧ ಕೋಮಿನ ಮುಖಂಡರು ಕಾನೂನು ಸುವ್ಯವಸ್ಥೆಗೆ ಅಡಚಣೆ ಆಗದಂತೆ ಶಾಂತಿ-ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು, ಯಾವುದೆ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಹಬ್ಬ ಆಚರಿಸಬೇಕು, ಈ ವೇಳೆ ಶಾಂತಿ ಸುವ್ಯವಸ್ಥೆ ಧಕ್ಕೆ ತಂದ ವಿಚಾರ ಗಮನಕ್ಕೆ ಬಂದರೆ ಕ್ರಮ ಅನಿವಾರ್ಯವಾಗಲಿದೆ ಎಂದರು.ವ್ಹೀಲಿಂಗ್ ಮಾಡುವವರ ಸಿಕ್ಕರೆ ಕಠಿಣ ಕ್ರಮ- ಸಿಪಿಐ

ವೃತ್ತ ನಿರೀಕ್ಷಕ ಕೃಷ್ಣಪ್ಪ ಸಭೆಯಲ್ಲಿ ಮಾತನಾಡಿ, ಪಟ್ಟಣದಲ್ಲಿ ಬೈಕ್‍ಗಳಲ್ಲಿ ವ್ಹೀಲಿಂಗ್‌ ಮಾಡುವವರ ಬಗ್ಗೆ ಇಲಾಖೆ ನಿಗಾ ಇಟ್ಟಿದೆಯ ಅದೇ ರೀತಿಯಲ್ಲಿ ಇತ್ತೀಚೆಗೆ ವ್ಹೀಲಿಂಗ್ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಈ ಹಿನ್ನೆಲೆ ವ್ಹೀಲಿಂಗ್ ಮಾಡುವರು ಸಿಕ್ಕರೆ ಮುಲಾಜಿಲ್ಲದೆ ಕ್ರಮ ವಹಿಸುತ್ತೆವೆ. ಈಬಗ್ಗೆ ಹಲವರ ವಿರುದ್ದ ಈಗಾಗಲೇ ಕ್ರಮಸಹಾ ಕೈಗೊಳ್ಳಲಾಗಿದ್ದು ಮುಂದಿನ ದಿನಗಳಲ್ಲಿ ವೀಲಿಂಗ್ ಪ್ರಕರಣ ಮುಂದುವರೆದರೆ ಕ್ರಮ ಅನಿವಾರ್ಯ ಎಂದರು.

ಸಭೆಯಲ್ಲಿ ಮುಸ್ಲಿಂ ಮುಖಂಡರುಗಳಾದ ಅಕ್ಮಲ್ ಪಾಷ, ರಫತ್ ಉಲ್ಲಾ ಖಾನ್, ಅಮಿದ್ ಉಲ್ಲಾ, ಸೈಯದ್ ಖಲೀಲ್, ಆಸೀಫ್ ಉಲ್ಲಾ,ದಲಿತ ಮುಖಂಡರಾದ ನಟರಾಜು ಮಾಳಿಗೆ, ಶಾಂತರಾಜು, ಹುಚ್ಚಪ್ಪ, ಪಾಪಣ್ಣ, ಬಿ.ಮಹದೇವ, ನಾಗರಾಜು, ಬಿ.ಬಸವಣ್ಣ, ಬಾಲರಾಜು, ಸೋಮಣ್ಣ, ನಾಯಕ ಜನಾಂಗದ ಶಂಕರ್, ಸುಂದರನಾಯಕ, ನರಸಿಂಹನ್, ಬಸವರಾಜಪ್ಪ ಇನ್ನಿತರಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ