ಭೀಮಾ ಕೋರೆಗಾಂವ್‌ ವಿಜಯೋತ್ಸವ ಸಂಭ್ರಮದಿಂದ ಆಚರಿಸಿ

KannadaprabhaNewsNetwork |  
Published : Jan 05, 2025, 01:30 AM IST
ಚಿತ್ರ 1 | Kannada Prabha

ಸಾರಾಂಶ

ಹಿರಿಯೂರು ತಾಲೂಕಿನ ಕೂನಿಕೆರೆ ಗ್ರಾಮದಲ್ಲಿ ಕೋರೆಗಾಂವ್‌ ವಿಜಯೋತ್ಸವದ ಪ್ರಯುಕ್ತ ವಿಶ್ವರತ್ನ ಭೀಮಾ ಎಂಬ ನಾಟಕವನ್ನು ಅಭಿನಯಿಸಲಾಯಿತು.

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ಕೂನಿಕೆರೆ ಗ್ರಾಮದಲ್ಲಿ ಕಾರಂಜಿ ಕಲ್ಚರಲ್ ಟ್ರಸ್ಟ್, ಮಾರುತೇಶ್ವರ ನಾಟ್ಯ ಸಾಂಸ್ಕೃತಿಕ ಕಲಾ ಸಂಘ ಹಾಗೂ ಭೀಮಾ ಬಳಗದ ವತಿಯಿಂದ ಭೀಮಾ ಾ ಕೋರೆಗಾಂವ್‌ ವಿಜಯೋತ್ಸವದ ಪ್ರಯುಕ್ತ ವಿಶ್ವರತ್ನ ಭೀಮಾ ಎಂಬ ನಾಟಕ ಅಭಿನಯಿಸಲಾಯಿತು.

ಕಾರ್ಯಕ್ರಮವನ್ನು ಕಾಂಗ್ರೆಸ್ ಎಸ್‌ಸಿಸೆಲ್ ಅಧ್ಯಕ್ಷ ಜಿ.ಎಲ್.ಮೂರ್ತಿ ಉದ್ಘಾಟಿಸಿ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಅಡಿಯಲ್ಲಿ ನಾವೆಲ್ಲರೂ ಕೂಡ ಬದುಕನ್ನು ಕಟ್ಟಿಕೊಳ್ಳುತ್ತಿದ್ದೇವೆ. ಭೀಮಾ ಕೋರೆಗಾಂವ್‌ ವಿಜಯೋತ್ಸವವನ್ನು ನಾವೆಲ್ಲರೂ ಕೂಡ ಸಂಭ್ರಮದಿಂದ ಆಚರಿಸಬೇಕು. ಭೀಮಾ ಕೋರೆಗಾಂವ್‌ ವಿಜಯೋತ್ಸವ ಶಿಕ್ಷಣಕ್ಕೋಸ್ಕರ ಒಂದು ಬಹುದೊಡ್ಡ ಚಾರಿತ್ರಿಕ ಯುದ್ಧದ ನೆನಪಾಗಿ ಉಳಿದಿದೆ ಎಂದರು.

ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಜಿಲ್ಲಾ ಸಂಯೋಜಕ ಕೆಪಿ ಶ್ರೀನಿವಾಸ್ ಮಾತನಾಡಿ, ನಾವು ಮೌಢ್ಯಗಳಿಂದ ದೂರ ಇರಬೇಕು. ಹೊಸ ವರ್ಷ ಆಚರಣೆಯಲ್ಲಿ ಕೇಕ್‌ ಕತ್ತರಿಸಿ ಮೋಜು ಮಸ್ತಿ ಮಾಡುವ ಪದ್ಧತಿಗಳನ್ನು ಬಿಟ್ಟು ಭೀಮಾ ಾ ಕೋರೆಗಾಂವ್‌ ವಿಜಯೋತ್ಸವಕ್ಕೆ ನಾವೆಲ್ಲರೂ ಗೌರವವನ್ನು ನೀಡಬೇಕು. ಅಂದು 500 ಜನ ಮಹನೀಯರು ಹೋರಾಟದ ಯುದ್ಧ ಮಾಡದೇ ಇದ್ದಿದ್ದರೆ ಇಂದು ನಮ್ಮ ಸ್ಥಿತಿ ಬಹಳ ಕೆಟ್ಟದಾಗಿರುತ್ತಿತ್ತು, ಆದ್ದರಿಂದ ನಮ್ಮ ಸಮಾಜ ಸದಾ ಎಚ್ಚರದಿಂದಿರಬೇಕು. ಮೊದಲು ಪ್ರಜ್ಞಾವಂತರಾಗಿ ವಿದ್ಯಾವಂತರಾಗಿ ಸಮಾಜವನ್ನು ಪ್ರೀತಿಸುವಂತಹ ಮನಸುಳ್ಳವರಾಗಬೇಕು ಎಂದು ಹೇಳಿದರು.

ಬ್ಯಾಡರಹಳ್ಳಿ ಗ್ರಾಪಂ ಸದಸ್ಯ ಹನುಮಂತರಾಯಪ್ಪ ಮಾತನಾಡಿ, ಭೀಮಾ ಕೋರೆಗಾಂವ್‌ ವಿಜಯೋತ್ಸವವು ನಮ್ಮ ಸಮಾಜದ ಶಿಕ್ಷಣದ ಒಳತಿಗಾಗಿ ನಡೆದಂತಹ ಯುದ್ಧ. ಕೇವಲ 500 ಜನರು 28 ಸಾವಿರ ಜನರನ್ನು ಮಣಿಸಿದಂತಹ ಚಾರಿತ್ರಿಕ ಯುದ್ಧ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳಲ್ಲಿ ಅವರ ಮಾರ್ಗದರ್ಶನದಲ್ಲಿ ನಾವೆಲ್ಲಾ ಸದಾ ಮುಂದುವರೆಯಬೇಕು ಎಂದರು.

ಈ ಸಂದರ್ಭದಲ್ಲಿ ಕೂನಿಕೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸೀತಾರಾಮ್, ಕಾರ್ಯಕ್ರಮದ ಆಯೋಜಕರಾದ ಹೆಚ್ ಎಸ್ ಮಾರುತೇಶ್, ರಾಘವೇಂದ್ರ, ನರಸಿಂಹ ಮೂರ್ತಿ, ಕುಮಾರ್,ಮಾರುತಿ, ಸ್ವಾಮಿಲಿಂಗಪ್ಪ, ಪುಟ್ಟಪ್ಪ, ಮೂರ್ತಿ, ಕೆ ಹನುಮಂತ ರಾಯ, ಗೋವಿಂದಪ್ಪ, ಕಲಾವಿದರಾದ ಆಶಾ, ಚನ್ನಬಸಪ್ಪ, ಯಲ್ಲಪ್ಪ, ಐಹೊಳೆ ಶ್ರೀನಿವಾಸ್, ಹನುಮಂತಪ್ಪ ಪೂಜಾರ್, ನನ್ನಿವಾಳ ಕುಮಾರ್, ನಿಬಗೂರು ನಾಗವೇಣಿ ಮುಂತಾದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!