ಪರಿಸರ ರಕ್ಷಿಸಲು ಹಣತೆ ಹಚ್ಚಿ ದೀಪಾವಳಿ ಆಚರಿಸಿ

KannadaprabhaNewsNetwork |  
Published : Nov 01, 2024, 12:09 AM IST
31ಜಿಯುಡಿ2 | Kannada Prabha

ಸಾರಾಂಶ

ದೀಪಾವಳಿ ಹಬ್ಬದಂದು ಪ್ರತಿಯೊಬ್ಬರು ಹಣತೆಯ ದೀಪವನ್ನು ಹಚ್ಚಬೇಕು. ಸದ್ದು ಮಾಡುವ ಪಟಾಕಿಯನ್ನು ಹೊಡೆಯಬಾರದು ಏಕೆಂದರೆ ಇದರಿಂದ ಶಬ್ದ ಮಾಲಿನ್ಯ ವಾಯುಮಾಲಿನ್ಯ ಉಂಟಾಗುತ್ತದೆ. ಪಟಾಕಿಗಳಿಂದ ಹೊರಬರುವಂತಹ ವಿಷಕಾರಿ ಹೊಗೆಯಿಂದಾಗಿ ಪರಿಸರ ಮಾಲಿನ್ಯವಾಗುತ್ತದೆ. ಇದರಿಂದ ಸಾರ್ವಜನಿಕರ ಆರೋಗ್ಯ ಮೇಲೆ ಪರಿಣಾಮಬೀರುತ್ತದೆ.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಪರಿಸರಕ್ಕೆ ಹಾನಿ ಉಂಟುಮಾಡುವ ಪಟಾಕಿಗಳನ್ನು ಸಿಡಿಸುವ ಬದಲು ಮಣ್ಣಿನ ಹಣತೆಗಳನ್ನು ಹಚ್ಚಿ ದೀಪಾವಳಿ ಆಚರಿಸಿ ಪರಿಸರವನ್ನು ಕಾಪಾಡಬೇಕೆಂದು ಪರಿಸರ ವೇದಿಕೆಯ ಗುಂಪು ಮರದ ಆನಂದ್ ಸಲಹೆ ನೀಡಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಪರಿಸರ ವೇದಿಕೆ, ಜೈ ಕರ್ನಾಟಕ, ಉರ್ದು ಸಾಹಿತ್ಯ ಪರಿಷತ್ಮ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜಾಗೃತಿ ಆಂದೋಲನ ಹೆಸರಿನಲ್ಲಿ ಸಾರ್ವಜನಿಕರಿಗೆ ಮಣ್ಣಿನ ಹಣತೆಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪಟಾಕಿಯಿಂದ ಪರಿಸರ ಮಾಲಿನ್ಯ

ದೀಪಾವಳಿ ಹಬ್ಬದಂದು ಪ್ರತಿಯೊಬ್ಬರು ಹಣತೆಯ ದೀಪವನ್ನು ಹಚ್ಚಬೇಕು. ಸದ್ದು ಮಾಡುವ ಪಟಾಕಿಯನ್ನು ಹೊಡೆಯಬಾರದು ಏಕೆಂದರೆ ಇದರಿಂದ ಶಬ್ದ ಮಾಲಿನ್ಯ ವಾಯುಮಾಲಿನ್ಯ ಉಂಟಾಗುತ್ತದೆ. ಪಟಾಕಿಗಳಿಂದ ಹೊರಬರುವಂತಹ ವಿಷಕಾರಿ ಹೊಗೆಯಿಂದಾಗಿ ಪರಿಸರ ಮಾಲಿನ್ಯವಾಗುತ್ತದೆ. ಇದರಿಂದ ಸಾರ್ವಜನಿಕರ ಆರೋಗ್ಯ ಮೇಲೆ ಪರಿಣಾಮಬೀರುತ್ತದೆ. ಮಣ್ಣಿನ ಹಣತೆಗಳನ್ನು ಹಚ್ಚುವುದರಿಂದ ಪರಿಸರ ಮಾಲೀನ್ಯ ತಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಪರಿಸರವನ್ನು ರಕ್ಷಣೆ ಮಾಡುವ ಕೆಲಸಕ್ಕೆ ಮುಂದಾಗಬೇಕೆಂದರು.

ಬಳಿಕ ಸಾರ್ವಜನಿಕ ಆಸ್ಪತ್ರೆಯ ಟಿ.ಹೆಚ್.ಒ ಡಾ.ನರಸಿಂಹಮೂರ್ತಿ ಮಾತನಾಡಿ, ದೀಪಾವಳಿ ಹಬ್ಬದ ಮಹತ್ವದ ಬಗ್ಗೆ ಸವಿವರವಾಗಿ ತಿಳಿಸಿದರು. ಪ್ರತಿಯೊಬ್ಬರು ಹಣತೆಯ ದೀಪವನ್ನು ಹಚ್ಚಿ ಹಬ್ಬವನ್ನು ಆಚರಿಸಬೇಕೆಂದರು.

ಈ ವೇಳೆ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ಉಮೇಶ್, ಜಯ ಕರ್ನಾಟಕ ತಾಲೂಕು ಅಧ್ಯಕ್ಷ ಬುಲೆಟ್ ಶ್ರೀನಿವಾಸ್, ಪರಿಸರ ವೇದಿಕೆಯ ಶ್ರೀನಾಥ್ , ರಾಜಶೇಖರ್, ಉರ್ದು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಹಮದ್ ನಾಸೀರ್, ಸಾರ್ವಜನಿಕ ಆಸ್ಪತ್ರೆಯ ಅಮೃತ, ಸರೋಜ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ