ಪಟಾಕಿಗಳ ಸಿಡಿಸದೇ ದೀಪಾವಳಿ ಆಚರಿಸಿ: ರಾಜಶೇಖರ್‌

KannadaprabhaNewsNetwork |  
Published : Oct 19, 2025, 01:00 AM IST
ಕ್ಯಾಪ್ಷನ18ಕೆಡಿವಿಜಿ31, 32 ದಾವಣಗೆರೆಯ ಸೆಂಟ್ ಜಾನ್ಸ್ ಶಾಲೆಯಲ್ಲಿಂದು  ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಸಂರಕ್ಷಣಾ ವೇದಿಕೆಯಿಂದ ಸುರಕ್ಷಾ ದೀಪಾವಳಿ ಪ್ರಮಾಣವಚನ ಬೋಧಿಸಲಾಯಿತು. | Kannada Prabha

ಸಾರಾಂಶ

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ. ಪಟಾಕಿಯಿಂದ ಹಲವಾರು ರೀತಿಯ ದುಷ್ಪರಿಣಾಮಗಳು ಉಂಟಾಗುತ್ತಿವೆ. ವಾಯು ಗುಣಮಟ್ಟವು ಕುಸಿಯುತ್ತಿದೆ. ಪಟಾಕಿ ಸಿಡಿಸುವುದರಿಂದ ಮಕ್ಕಳಿಗೆ ಕಣ್ಣು, ಕಿವಿ ಹಾಗೂ ದೇಹಕ್ಕೆ ಬೆಂಕಿ ಸ್ಪರ್ಶವಾಗಿ ಅನಾಹುತಗಳಾಗುತ್ತಿವೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ್ ಹೇಳಿದ್ದಾರೆ.

- ಸುರಕ್ಷಾ ದೀಪಾವಳಿ ಕಾರ್ಯಕ್ರಮ । ವಿದ್ಯಾರ್ಥಿಗಳಿಗೆ ಜಾಗೃತಿ, ಪ್ರಮಾಣ ವಚನ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ. ಪಟಾಕಿಯಿಂದ ಹಲವಾರು ರೀತಿಯ ದುಷ್ಪರಿಣಾಮಗಳು ಉಂಟಾಗುತ್ತಿವೆ. ವಾಯು ಗುಣಮಟ್ಟವು ಕುಸಿಯುತ್ತಿದೆ. ಪಟಾಕಿ ಸಿಡಿಸುವುದರಿಂದ ಮಕ್ಕಳಿಗೆ ಕಣ್ಣು, ಕಿವಿ ಹಾಗೂ ದೇಹಕ್ಕೆ ಬೆಂಕಿ ಸ್ಪರ್ಶವಾಗಿ ಅನಾಹುತಗಳಾಗುತ್ತಿವೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ್ ಹೇಳಿದರು.

ನಗರದ ಸೇಂಟ್ ಜಾನ್ಸ್ ಪ್ರೌಢಶಾಲೆಯಲ್ಲಿ ಶನಿವಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಸಂರಕ್ಷಣಾ ವೇದಿಕೆ, ದಾವಣಗೆರೆ ಸೈನ್ಸ್ ಫೌಂಡೇಶನ್ ಹಾಗೂ ಅಮೃತ್ ಯುವಕರ ಸಂಘ ಆಶ್ರಯದಲ್ಲಿ ಆಯೋಜಿಸಿದ ಸುರಕ್ಷಾ ದೀಪಾವಳಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪಟಾಕಿ ಅನಾಹುತಗಳ ಅರಿತು ಸರ್ಕಾರವು ಹಸಿರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಿದೆ. ಮಕ್ಕಳು ಪಟಾಕಿಗಳ ಸಿಡಿಸದಿರುವುದೇ ಉತ್ತಮ. ಈ ಬಗ್ಗೆ ತಂದೆ, ತಾಯಂದಿರು ಮಕ್ಕಳಲ್ಲಿ ಸೂಕ್ತ ರೀತಿಯಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಮಂಡಳಿಯ ಉಪ ವೈಜ್ಞಾನಿಕ ಅಧಿಕಾರಿ ಡಾ. ಎಲ್.ಮಂಜುನಾಥ ಮಾತನಾಡಿ, ಪಟಾಕಿಗಳು ಪ್ರಾಣಿ, ಪಕ್ಷಿ ಹಾಗೂ ಮನುಷ್ಯರಿಗೆ ತುಂಬಾ ಹಾನಿಕರವಾಗಿವೆ. ಪಟಾಕಿ ಬಳಕೆ ನಿಯಂತ್ರಿಸಲು ಸರ್ಕಾರ ಹಾಗೂ ನಮ್ಮ ಇಲಾಖೆ ಪ್ರಯತ್ನಿಸುತ್ತಿದೆ. ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ. ಪಟಾಕಿ ಹೊಗೆಯಿಂದ ಶ್ವಾಸಕೋಶ ತೊಂದರೆಗಳಾಗುತ್ತವೆ. ಆದ್ದರಿಂದ ಮಕ್ಕಳು ಪಟಾಕಿಗಳಿಂದ ದೂರವಿದ್ದು, ದೀಪಗಳಿಂದ ದೀಪ ಹಚ್ಚುವ ಮೂಲಕ ದೀಪಾವಳಿ ಆಚರಿಸಬೇಕು ಎಂದರು.

ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ್ ಎಸ್. ದೇವರಮನಿ ಮಾತನಾಡಿ, ಮಕ್ಕಳು ದೀಪಾವಳಿಯನ್ನು ಸಂತೋಷವಾಗಿ, ಸಂಭ್ರಮದಿಂದ ಆಚರಿಸಬೇಕು. ಪರಿಸರಕ್ಕೆ ಹಾಗೂ ಮಕ್ಕಳ ಮತ್ತು ಸಾರ್ವಜನಿಕರಿಗೆ ಕಣ್ಣು, ಕಿವಿ ಇನ್ನಿತರ ಹಾನಿಗಳಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.

ದಾವಣಗೆರೆ ಸೈನ್ಸ್ ಫೌಂಡೇಷನ್ ಎಂ.ಗುರುಸಿದ್ದ ಸ್ವಾಮಿ ಮಕ್ಕಳಿಗೆ ಸುರಕ್ಷಾ ದೀಪಾವಳಿ ಪ್ರಮಾಣ ವಚನ ಬೋಧಿಸಿದರು. ಸೇಂಟ್ ಜಾನ್ಸ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಟಿ.ಎಂ.ಉಮಾಪತಯ್ಯ ಅಧ್ಯಕ್ಷತೆ ವಹಿಸಿದ್ದರು. ಶಾಲೆ ಪ್ರಾಚಾರ್ಯ ಆರ್.ಸೈಯದ್ ಆರಿಫ್, ಅಮೃತ ಯುವಕ ಸಂಘದ ಅಧ್ಯಕ್ಷ ಆರ್.ಬಿ.ಹನುಮಂತಪ್ಪ, ಪಾಲಿಕೆ ಆರೋಗ್ಯ ನಿರೀಕ್ಷಕ ಮಾಲತೇಶ, ಶಿಲ್ಪಾ, ಶಾಲೆ ಬೋಧಕ ಬೋಧಕೇತರರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

- - --18ಕೆಡಿವಿಜಿ31, 32.ಜೆಪಿಜಿ:

ದಾವಣಗೆರೆಯ ಸೇಂಟ್ ಜಾನ್ಸ್ ಶಾಲೆಯಲ್ಲಿ ಶನಿವಾರ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಸಂರಕ್ಷಣಾ ವೇದಿಕೆಯಿಂದ ವಿದ್ಯಾರ್ಥಿಗಳಿಗೆ ಸುರಕ್ಷಾ ದೀಪಾವಳಿ ಪ್ರಮಾಣವಚನ ಬೋಧಿಸಲಾಯಿತು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ