ನಿರಂತರ ಕನ್ನಡ ಕಾರ್ಯಕ್ರಮಕ್ಕಾಗಿ ಸಮಿತಿ ರಚಿಸಿ

KannadaprabhaNewsNetwork |  
Published : Oct 19, 2025, 01:00 AM IST
18ಕೆಜಿಎಫ್‌2 | Kannada Prabha

ಸಾರಾಂಶ

ಕೆಜಿಎಫ್ ನಗರದಲ್ಲಿ ಕನ್ನಡ ಭಾಷೆಯನ್ನು ಹೋರಾಟದ ಮೂಲಕ ಕಟ್ಟಿ ಬೆಳೆಸಿದ್ದಾರೆ. ಆದರೆ ನಗರಸಭೆ ವತಿಯಿಂದ ನಗರದ ಕುವೆಂಪು ಬಸ್ ನಿಲ್ದಾಣದಲ್ಲಿ ರಾಷ್ಟ್ರಕವಿ ಕುವೆಂಪು ರವರ ಪ್ರತಿಮೆಯನ್ನು ಸ್ವಾಗತ ಕಮಾನಿನ ಮೇಲೆ ಹಾಕಿರುವುದರಿಂದ ಅವರ ಹುಟ್ಟು ಹಬ್ಬದಂದು ಮಾಲಾರ್ಪಣೆ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರತಿಮೆಗೆ ಮಾರ್ಲಾಪಣೆ ಮಾಡಲು ವ್ಯವಸ್ಥೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಕೆಜಿಎಫ್ಕನ್ನಡದ ಕೆಲಸಗಳಿಗೆ ಯಾರು ಅಡ್ಡಿಪಡಿಸಬಾರದು, ಕನ್ನಡ ಕಟ್ಟುವಂತಹ ಕೆಲಸವನ್ನು ಹೃದಯವಂತಿಕೆಯಿಂದ ಮಾಡಬೇಕು ಎಂದು ಶಾಸಕಿ ರೂಪಕಲಾಶಶಿಧರ್ ತಿಳಿಸಿದರು.ತಾಲೂಕು ಆಡಳಿತ ಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ೭೦ನೇ ವರ್ಷದ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದರು. ಕೆಜಿಎಫ್ ನಗರದಲ್ಲಿ ನಿತ್ಯ ನಿರಂತರವಾಗಿ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಗಡಿನಾಡು ಕಾವಲು ಸಮಿತಿಯನ್ನು ರಚಿಸಿ ಕನ್ನಡವನ್ನು ಉಳಿಸುವಂತಹ ಕೆಲಸವನ್ನು ನಾವು ಮಾಡಬೇಕಿದೆ ಎಂದರು.ರಾಜ್ಯೋತ್ಸವಕ್ಕೆ ಸ್ಥಳ ಪರಿಶೀಲನೆ

ಸಭೆಯಲ್ಲಿ ಗಡಿನಾಡಿನ ಕನ್ನಡ ಭಾಷೆಯ ಉಳಿವಿಗಾಗಿ ಅನೇಕ ಹಿರಿಯ ಸಾಹಿತಿಗಳು, ಸಂಘ ಸಂಸ್ಥೆಗಳ ಮುಖಂಡರು ಎಲ್ಲರೂ ನಾಡ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಸಭೆಯಲ್ಲಿ ನಿರ್ಧಾರ ಮಾಡಿರುವುದು ಸಂತಸ ತಂದಿದೆ. ಕನ್ನಡ ಭವನದ ಕಾಮಗಾರಿ ಪ್ರಗತಿಯಲ್ಲಿದ್ದು, ಈ ವರ್ಷ ಕನ್ನಡ ರಾಜ್ಯೋತ್ಸವನ್ನು ಬೇರೆಡೆ ಆಚರಣೆ ಮಾಡಲು ಪ್ರಮುಖ ಮುಖಂಡರು ಸಭೆ ಸೇರಿ ನಿರ್ಧಾರವನ್ನು ಕೈಗೊಳ್ಳಬೇಕೆಂದು ಸಭೆಯಲ್ಲಿ ತಿಳಿಸಿದರು. ನಗರಸಭೆಯಲ್ಲಿ ಕನ್ನಡ ಬಳಸಿ

ಕನ್ನಡಪರ ಹೋರಾಟಗಾರರು ಮಾತನಾಡಿ, ಕೆಜಿಎಫ್ ನಗರದಲ್ಲಿ ಕನ್ನಡ ಭಾಷೆಯನ್ನು ಹೋರಾಟದ ಮೂಲಕ ಕಟ್ಟಿ ಬೆಳೆಸಿದ್ದಾರೆ. ಆದರೆ ನಗರಸಭೆ ವತಿಯಿಂದ ನಗರದ ಕುವೆಂಪು ಬಸ್ ನಿಲ್ದಾಣದಲ್ಲಿ ರಾಷ್ಟ್ರಕವಿ ಕುವೆಂಪು ರವರ ಪ್ರತಿಮೆಯನ್ನು ಸ್ವಾಗತ ಕಮಾನಿನ ಮೇಲೆ ಹಾಕಿರುವುದರಿಂದ ಅವರ ಹುಟ್ಟು ಹಬ್ಬದಂದು ಮಾಲಾರ್ಪಣೆ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರತಿಮೆಗೆ ಮಾರ್ಲಾಪಣೆ ಮಾಡಲು ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು. ನಗರಸಭೆ ಕಚೇರಿಯಲ್ಲಿ ಕನ್ನಡ ಭಾಷೆಯನ್ನೇ ಬಳಸಬೇಕು. ನಗರದ ಪ್ರಮುಖ ರಸ್ತೆಗಳಿಗೆ ಹಿಂದೆ ಇಡಲಾಗಿದ್ದ ಹೆಸರುಗಳನ್ನು ಉಳಿಸಿ ಬೆಳಸಬೇಕು ಎಂದು ಮನವಿ ಮಾಡಿದರು.

ಅರ್ಥಪೂರ್ಣ ಆಚರಣೆ

ಕನ್ನಡ ಸಂಘದ ಅಧ್ಯಕ್ಷ ಪ್ರಸನ್ನರೆಡ್ಡಿ ಮಾತನಾಡಿ, ಗ್ರಾಮಗಳಿಂದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಿ ಸಂಪ್ರದಾಯದಂತೆ ನವೆಂಬರ್ ಒಂದರಂದೇ ರಾಜ್ಯೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಿಳಿಸಿದರು.ನಗರಸಭೆ ಪೌರಾಯುಕ್ತ ಅಂಜಿನೇಯಲು, ವೃತ್ತ ನೀರಿಕ್ಷಕ ಮಾರ್ಕಂಡಯ್ಯ, ತಹಶೀಲ್ದಾರ್ ಎಚ್.ಜೆ.ಭರತ್, ಇಒ ವೆಂಕಟೇಶಪ್ಪ ಕನ್ನಡ ಸಂಘದ ಉಪಾಧ್ಯಕ್ಷ ತ್ಯಾಗರಾಜ್, ಲೋನಿ, ಶೇಖರಪ್ಪ, ಮದಿರಪ್ಪ, ವೀರವೆಂಕಟಪ್ಪ, ಸಂಪಂತ್, ರವಿ, ಆಶ್ವಥ್, ರಾಧಪ್ರಕಾಶ್, ಕೆಡಿಎ ಆಯುಕ್ತ ಧರ್ಮೇಂದ್ರ, ಸಮಾಜ ಕಲ್ಯಾಣ ಅಧಿಕಾರಿ ಅಂಜಲಿ, ಸಿಡಿಪಿಒ ರಾಜೇಶ್, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ