ಕನ್ನಡಪ್ರಭ ವಾರ್ತೆ ಸೊರಬ
ಪಟ್ಟಣದ ಶ್ರೀರಂಗ ಕನ್ವೆನ್ಶಲ್ ಹಾಲ್‌ನಲ್ಲಿ ಗಣೇಶ ಚತುರ್ಥಿಯ ಅಂಗವಾಗಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಗಣೇಶ ಹಬ್ಬದ ಆಚರಣೆಗೆ ಸಂಬಂಧಿಸಿದಂತೆ ಕಾನೂನಿನ ಪರಿಮಿತಿಯಲ್ಲಿ ನಾವು ಏನು ಪಾಲಿಸಬೇಕೋ ಅದನ್ನೆಲ್ಲಾ ಪಾಲಿಸುತ್ತೇವೆ. ಅದೇ ರೀತಿ ಸಾರ್ವಜನಿಕರು ಕೂಡ ಕಾನೂನಿನ ಪರಿಮಿತಿಯಲ್ಲಿ ನಡೆದುಕೊಂಡು ಶಾಂತಿಯುತವಾಗಿ ಹಬ್ಬ ಆಚರಿಸಬೇಕೆಂದು ತಿಳಿಸಿದರು.
ಅತಿಯಾದ ಶಬ್ದಮಾಲಿನ್ಯ ಮಾಡುವ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಲಾಗಿದ್ದು, ನಿಗದಿತ ಸಮಯದೊಳಗೆ ಧ್ವನಿವರ್ಧಕ ಬಳಸಬೇಕು. ರಾತ್ರಿ ೧೦ ಗಂಟೆಯ ನಂತರ ಬಳಕೆ ಮಾಡಬಾರದು. ವಿದ್ಯುತ್ ಅಲಂಕಾರ ಮಾಡುವಾಗ ಮುನ್ನೆಚ್ಚರಿಕೆ ವಹಿಸಬೇಕು. ವಿಸರ್ಜನಾ ಮೆರವಣಿಗೆ ವೇಳೆ ಶಾಂತಿ ಕಾಪಾಡಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಎಲ್ಲಾ ಗಣೇಶೋತ್ಸವ ಸಮಿತಿಯವರು ತಪ್ಪದೇ ಪುರಸಭೆ ಮತ್ತು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದು, ಸಹಕಾರ ನೀಡಬೇಕು ಎಂದರು.ವೃತ್ತ ನಿರೀಕ್ಷಕ ಮಹಾಂತೇಶ್ ನಂಬಿ ಮಾತನಾಡಿ, ಹಬ್ಬ ಆಚರಣೆ ವೇಳೆ ಇತರೆ ಧರ್ಮದವರಿಗೆ ತೊಂದರೆ ಆಗುವಂತಹ ಯಾವುದೇ ಚಟುವಟಿಕೆ ನಡೆಸಬಾರದು. ಪ್ರಚೋದನಕಾರಿ ಬ್ಯಾನರ್, ಹಾಡು, ಘೋಷಣೆಗಳಿಗೆ ಅವಕಾಶವಿಲ್ಲ ಎಂದರು. ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆ ಅಥವಾ ತೊಂದರೆ ಉಂಟಾದಲ್ಲಿ ಆಯಾ ಕಮಿಟಿಯ ಸದಸ್ಯರೇ ನೇರವಾಗಿ ಜವಾಬ್ದಾರರಾಗಿರುತ್ತಾರೆ ಎಂದು ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ನವೀನ್ ತಿಳಿಸಿದರು.
-----
ಸೊರಬ ಪಟ್ಟಣದ ಶ್ರೀರಂಗ ಕನ್ವೆನ್ಶಲ್ ಹಾಲ್‌ನಲ್ಲಿ ಗಣೇಶ ಚತುರ್ಥಿಯ ಅಂಗವಾಗಿ ನಡೆದ ಶಾಂತಿ ಸಭೆಯಲ್ಲಿ ಪೊಲೀಸ್ ಉಪ ಅಧೀಕ್ಷಕ ಕೆ.ಇ. ಕೇಶವ್ ಮಾತನಾಡಿದರು.