ಧಾರವಾಡ:
ಗಣೇಶೋತ್ಸವ ಹಬ್ಬದ ನಿಮಿತ್ತ ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮಂಗಳವಾರ ನಡೆದ ಶಾಂತಿಸಭೆಯಲ್ಲಿ ಮಾತನಾಡಿದ ಅವರು, ದಸರಾ ರೀತಿಯಲ್ಲಿ ಈ ಹಬ್ಬವನ್ನು ಅವಳಿ ನಗರದಲ್ಲಿ ಆಚರಿಸುವಂತೆ ಸಾರ್ವಜನಿಕರು ಪಣ ತೊಡಬೇಕೆಂದರು.
ಗಣೇಶೋತ್ಸವದಲ್ಲಿ ಅನಾಹುತಗಳು ನಡೆಯದಂತೆ ನಡೆಸಲು ಅನೇಕರಿಂದ ಸಲಹೆ ಪಡೆದಿದ್ದೇನೆ ಎಂದ ಅವರು, ದೊಡ್ಡ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಎಲ್ಲಿ ಮಾಡಲಾಗುತ್ತಿದೆ? ಯಾವಾಗ ವಿಸರ್ಜನೆ ಎಂಬೆಲ್ಲ ಮಾಹಿತಿ ಪಡೆದಿದ್ದು, ಶಾಂತಿಯುತವಾಗಿ ಹಬ್ಬದಾಚರಣೆಗೆ ಇಲಾಖೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದರು.ಬ್ರಿಟಿಷರ ವಿರುದ್ಧ ಭಾರತೀಯರು ಒಗ್ಗೂಡುವ ಉದ್ದೇಶದಿಂದ ಬಾಲಗಂಗಾಧರ ತಿಲಕ್ ಅವರು ಈ ಹಬ್ಬವನ್ನು ಶುರು ಮಾಡಿದ್ದು, ಇದೊಂದು ಭಕ್ತಿಯ ಹಬ್ಬ. ಆದರೆ, ಇದನ್ನು ಮೋಜಿಗಾಗಿ ಬಳಸಬಾರದು. ಜೂಜಾಟ, ಮದ್ಯ ಸೇವನೆ, ದೊಡ್ಡ ಶಬ್ದದಲ್ಲಿ ಡಿಜೆ ಹಚ್ಚುವುದು, ಅಸಹ್ಯ ರೀತಿಯ ನೃತ್ಯ ಮಾಡದೆ ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕು. ಮಂಡಳಗಳು ಪೆಂಡಾಲ್ ಹಾಗೂ ಸುತ್ತಲೂ ಸಿಸಿ ಕ್ಯಾಮೆರಾ ಅಳವಡಿಸಿ, ಪೆಂಡಾಲ್‌ನಲ್ಲಿಯೇ ಮಲಗಿಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಿ. ಕೇವಲ ಭಕ್ತಿ ಗೀತೆಯನ್ನು ಮಾತ್ರ ಹಾಕಬೇಕು ಎಂದು ಬೊರಸೆ ಹೇಳಿದರು.
ಹುಡಾ ಅಧ್ಯಕ್ಷ ರಾಬರ್ಟ್ ದದ್ದಾಪುರಿ, ಮಾಜಿ ಮೇಯರ್ ಶಿವು ಹಿರೇಮಠ, ಮುಖಂಡರಾದ ದಾನಪ್ಪ ಕಬ್ಬೇರ, ವಸಂತ ಅರ್ಕಾಚಾರ, ಶಂಕರ ಶೆಳಕೆ ಮತ್ತಿತರರು ಇದ್ದರು.