ಹೋಳಿಯಲ್ಲಿ ರಸಾಯನಿಕ ಬಣ್ಣ ಬಳಸದೇ ನೈಸರ್ಗಿಕವಾಗಿ ಹಬ್ಬ ಆಚರಿಸಿ

KannadaprabhaNewsNetwork |  
Published : Mar 02, 2026, 02:45 AM IST
ಹರಪನಹಳ್ಳಿ ತಾಲೂಕಿನ ಚಿಗಟೇರಿ ಪೋಲೀಸ್‌ ಠಾಣೆಯಲ್ಲಿ ಹೋಳಿ ಹಬ್ಬದ ಪ್ರಯುಕ್ತ ಶಾಂತಿ ಸಭೆ ನಡೆಸಲಾಯಿತು. ಸಿಪಿಐ ಮಹಾಂತೇಶ ಸಜ್ಜನ, ಪಿಎಸ್‌ ಐ ನಾಗರತ್ನ ಇತರರು ಇದ್ದರು. | Kannada Prabha

ಸಾರಾಂಶ

ಹೋಳಿಯ ಹಬ್ಬ ಕಾಮನ ಸುಡುವ ಹಬ್ಬ, ಪ್ರಕೃತಿಯ ಪರಿಸರದ ಗಿಡ ಮರಗಳು ನಾಶ ಮಾಡಬೇಡಿ.

ಹರಪನಹಳ್ಳಿ: ತಾಲೂಕಿನ ಚಿಗೇಟೇರಿ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬದ ಪ್ರಯುಕ್ತ ಶಾಂತಿಸಭೆ ನೆಡೆಸಲಾಯಿತು. ವೃತ್ತದ ನಿರೀಕ್ಷಕ ಮಹಾಂತೇಶ್ ಸಜ್ಜನ್ ಮಾತನಾಡಿ, ಹೋಳಿಯ ಹಬ್ಬ ಕಾಮನ ಸುಡುವ ಹಬ್ಬ, ಪ್ರಕೃತಿಯ ಪರಿಸರದ ಗಿಡ ಮರಗಳು ನಾಶ ಮಾಡಬೇಡಿ. ಮುಂದಿನ ಪೀಳಿಗಿಗೆ ಪರಿಸರ ಉಳಿಸಿ ಸರಳವಾಗಿ ಕಟ್ಟಿಗೆ ಬಳಸಿ ಹೋಳಿ ಆಡುವಾಗ ರಸಾಯನಿಕ ಬಣ್ಣ, ಅಪಾಯಕಾರಿ ಆಯಿಲ್ ಪೇಂಟ್ ಮೊಟ್ಟೆ ಬಳಸದೇ ಸುರಕ್ಷತೆ ಕಾಪಾಡಿಕೊಳ್ಳಿ ಮುಸ್ಲಿಮರು ರಂಜಾನ್ ಪ್ರಯುಕ್ತ ಉಪವಾಸ ಇರುವುದರಿಂದ ಯಾರಿಗೂ ತೊಂದರೆ ಮಾಡಬಾರದು ಎಂದು ಹೇಳಿದರು.ದ್ವಿಚಕ್ರ ವಾಹನ ಸಾವರಾರು, ಮಹಿಳೆಯರು ರಸ್ತೆಯಲ್ಲಿ ಸಂಚರಿಸುವವರಿಗೆ ಬಣ್ಣ ಹಾಕುವುದು ಬೇಡ. ಯಾರಿಗೂ ಒತ್ತಾಯಪಪೂರ್ವಕವಾಗಿ ಬಣ್ಣ ಹಾಕುವುದು ಬೇಡ ಎಂದು ಹೇಳಿದರು.

ಪಿಎಸ್‌ಐ ಕೆ. ನಾಗರತ್ನಮ್ಮ ಮಾತನಾಡಿ, ಹೋಳಿ ಕಾಮನ ಕೂಡಿಸುವ ಸ್ಥಳದಲ್ಲಿ ಸಿಸಿ ಕ್ಯಾಮೆರಾವನ್ನು ಅಳವಡಿಸಿ. ಇಬ್ಬರನ್ನು ಕಾಯಲು ನೇಮಿಸಬೇಕು. ಎರಡನೇ ದಿನ ಹೋಳಿ ಆಡುವಾಗ ರಸ್ತೆಯಲ್ಲಿ ನಡೆದಾಡುವರಿಗೆ ಒತ್ತಾಯವಾಗಿ ಬಲತ್ಕಾರವಾಗಿ ಬಣ್ಣ ಹಾಕಬಾರದು ಎಂದು ಸೂಚಿಸಿದರು.

ಕಾಂಗ್ರೆಸ್ ಮುಖಂಡ ಶಂಭುಲಿಂಗ ಸ್ವಾಮಿ ಮಾತನಾಡಿ ಪೊಲೀಸ್ ಇಲಾಖೆಯ ಒಬ್ಬರಿಂದ ಮಾತ್ರ ಶಾಂತಿ ಕಾಪಾಡುವುದು ಅಲ್ಲ. ಹಬ್ಬದ ದಿನಗಳು ಸಾಮೂಹಿಕ ಕಾರ್ಯಕ್ರಮಗಳು ಮಾಡುವ ಸಮಯದಲ್ಲಿ ನಾವು ನೀವೆಲ್ಲರೂ ಕೈಜೋಡಿಸಬೇಕು ಆಗ ಶಾಂತಿ ಕಾಪಾಡುವುದು ಸಾಧ್ಯ ಎಂದರು.ಈ ಸಂದರ್ಭದಲ್ಲಿ ಸಿಬ್ಬಂದಿ ಎಚ್ ಮಂಜುನಾಥ್, ರೇಖಪ್ಪ, ಮಹೇಶ್, ಎರ್ರಿಸ್ವಾಮಿ, ರೋಹಿತ್, ಸಿದ್ದಲಿಂಗಮ್ಮ, ಚಿಗಟೇರಿ ನರೇಶ್ ಗೌಡ, ಮಾರಪ್ಪ, ಚಿಗಟೇರಿ ಕ್ರಾಸ್, ಬಸವರಾಜ್, ಮಲ್ಲಿಕಾರ್ಜುನ ಬೆಣ್ಣೆಹಳ್ಳಿ ದಿನೇಶ್, ಕರಿಬಸಪ್ಪ, ತಿಪ್ಪನಾಯಕನಹಳ್ಳಿ ಎಂ. ಮಂಜುನಾಥ್, ಸಲಿಂಸಾಬ್, ಓಬಳಾಪುರ ಪ್ರಕಾಶ್, ನಾಗರಾಜ್ ಪ್ರಭು ಸೇರಿದಂತೆ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದೂಗಳು ಎಲ್ಲಿಯೂ ಯಾರ ಮೇಲೆ ದಾಳಿ ಮಾಡಿಲ್ಲ: ಸುಧೀರ ಸಿಂಹ ಘೋರ್ಪಡೆ
ಮಾನವ ಧರ್ಮದ ಉನ್ನತಿಗೆ ಶ್ರಮಿಸಿದ ರೇಣುಕಾಚಾರ್ಯರು