ಮೊಹರಂನ್ನು ಶಾಂತಿಯುತ ಆಚರಿಸಿ

KannadaprabhaNewsNetwork |  
Published : Jun 30, 2025, 12:34 AM IST
೨೯ ವೈಎಲ್‌ಬಿ ೦೨ಯಲಬುರ್ಗಾದ ಪೊಲೀಸ್ ಠಾಣೆಯಲ್ಲಿ ಮೊಹರಮ್ ನಿಮಿತ್ತ ನಡೆದ ಶಾಂತಿ ಸಭೆಯಲ್ಲಿ ಸಿಪಿಐ ಮೌನೇಶ್ವರ ಮಾಲಿಪಾಟೀಲ್ ಮಾತನಾಡಿದರು. | Kannada Prabha

ಸಾರಾಂಶ

ಪ್ರತಿಯೊಬ್ಬರೂ ಪೊಲೀಸ್ ಇಲಾಖೆಗೆ ಸಹಕರಿಸಬೇಕು. ಕಾನೂನು ಸುವ್ಯವಸ್ಥೆ ಹದಗೆಡಿಸಿದವರ ವಿರುದ್ಧ ಕ್ರಮ ಜರುಗಿಸಲಾಗುವುದು

ಯಲಬುರ್ಗಾ: ಹಿಂದು-ಮುಸ್ಲಿಂ ಭಾವೈಕ್ಯತೆ ಸಾರುವ ಹಬ್ಬವಾಗಿರುವ ಮೊಹರಂನ್ನು ಶಾಂತಿಯುತವಾಗಿ ಆಚರಿಸಬೇಕು ಎಂದು ಸಿಪಿಐ ಮೌನೇಶ್ವರ ಮಾಲಿಪಾಟೀಲ್ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಮೊಹರಂ ನಿಮಿತ್ತ ಆಯೋಜಿಸಲಾಗಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯಲಬುರ್ಗಾ ಪಟ್ಟಣವು ಸೌಹಾರ್ಧತೆಗೆ ಹೆಸರಾಗಿದೆ.ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯಿಂದ ಮೊಹರಂ ಆಚರಿಸಬೇಕು. ಪ್ರತಿಯೊಬ್ಬರೂ ಪೊಲೀಸ್ ಇಲಾಖೆಗೆ ಸಹಕರಿಸಬೇಕು. ಕಾನೂನು ಸುವ್ಯವಸ್ಥೆ ಹದಗೆಡಿಸಿದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.

ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಹಿರಿಯ ಮುಖಂಡ ಅಂದಾನಗೌಡ ಉಳ್ಳಾಗಡ್ಡಿ, ಅಖ್ತರ್‌ಸಾಬ್ ಖಾಜಿ ಮಾತನಾಡಿ, ಯಲಬುರ್ಗಾದಲ್ಲಿ ಯಾವುದೇ ಹಬ್ಬ ಹರಿದಿನಗಳಲ್ಲಿ ಹಿಂದು ಮುಸ್ಲಿಂರು ಸಹೋದರತ್ವದಿಂದ ಆಚರಣೆ ಮಾಡುತ್ತಾ ಬಂದಿದ್ದೇವೆ. ಇದುವರೆಗೂ ಯಾವುದೆ ಅಹಿತಕರ ಘಟನೆ ನಡೆದಿಲ್ಲ. ಅದಕ್ಕೆ ಆಸ್ಪದ ನೀಡುವುದಿಲ್ಲ. ಎಲ್ಲ ಸಮಾಜದವರು ಸೇರಿ ಹಬ್ಬ ಆಚರಣೆ ಮಾಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಪಿಎಸ್ಐಗಳಾದ ವಿಜಯಪ್ರತಾಪ, ಗುಲಾಮ್‌ಅಹ್ಮದ್ ಖಾಜಿ, ಪಪಂ ಸದಸ್ಯರಾದ ಅಮರೇಶ ಹುಬ್ಬಳ್ಳಿ, ರೇವಣಪ್ಪ ಹಿರೇಕುರುಬರ, ಅಶೋಕ ಅರಕೇರಿ, ಹನುಮಂತ ಭಜಂತ್ರಿ, ಎಂ.ಎಫ್. ನದಾಫ್, ಮೈಬೂಬ್‌ಸಾಬ್ ಮಕಾಂದಾರ, ಯಲ್ಲಪ್ಪ ನಾಯ್ಕ, ಶಿವಾನಂದ ಬಣಕಾರ, ಬಾಬುಸಾಬ್,ಸುರೇಶ ನಡುಲಮನಿ, ಖಾಜಾವಲಿ ಗಡಾದ ಸೇರಿದಂತೆ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ