ಬೆಂಗಳೂರು : ಬಿಜೆಪಿಯ ಬೆಂಗಳೂರು ನಗರದ ಮೂರು ಜಿಲ್ಲಾ ಘಟಕಗಳ ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳನ್ನು ನೇಮಿಸಿದ್ದು, ಚಿತ್ರನಟಿ ಅಮೂಲ್ಯ ಅವರ ಪತಿ ಜಗದೀಶ್ ಚಂದ್ರ ಅವರನ್ನು ಬೆಂಗಳೂರು ಕೇಂದ್ರ ಜಿಲ್ಲಾ ಘಟಕ ಯುವ ಮೋರ್ಚಾ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಬೆಂಗಳೂರು ಕೇಂದ್ರ ಜಿಲ್ಲಾ ಘಟಕ:
ನೀತಾ ಎಂ.ಎನ್.ರೆಡ್ಡಿ- ಮಹಿಳಾ ಮೋರ್ಚಾ ಅಧ್ಯಕ್ಷೆ, ಜಗದೀಶ್ ಚಂದ್ರ- ಯುವ ಮೋರ್ಚಾ ಅಧ್ಯಕ್ಷ, ಮುನಿಯಲ್ಲಪ್ಪ- ಎಸ್.ಸಿ. ಮೋರ್ಚಾ ಅಧ್ಯಕ್ಷ, ಎಚ್.ಆರ್.ಕೃಷ್ಣಪ್ಪ- ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ, ಗಿರೀಶ್ ಕುಮಾರ್ ಆರ್.ಬಿ.- ಎಸ್.ಟಿ. ಮೋರ್ಚಾ ಅಧ್ಯಕ್ಷ, ರುದ್ರಪ್ಪ ವೈ- ರೈತ ಮೋರ್ಚಾ ಅಧ್ಯಕ್ಷ.
ಬೆಂಗಳೂರು ದಕ್ಷಿಣ ಜಿಲ್ಲಾ ಘಟಕ:
ಗುರುಪ್ರಸಾದ್ ಕೆ (ಗುರುಪ್ರಸಾದ್ ಮುನಿಕೃಷ್ಣ)- ಎಸ್.ಸಿ. ಮೋರ್ಚಾ ಅಧ್ಯಕ್ಷ, ಸೌಮ್ಯ ತಿಪ್ಪೇಸ್ವಾಮಿ- ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಪಿ.ರಾಜು (ದಿನ್ನೂರ್) ಮತ್ತು ಸಿ.ಎನ್.ಚಂದ್ರಶೇಖರ್- ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳು, ವೆಂಕಟೇಶ್ ರೆಡ್ಡಿ ಹಾಗೂ ರವಿ ಕೆ- ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳು.
ಬೆಂಗಳೂರು ಉತ್ತರ ಜಿಲ್ಲಾ ಘಟಕ:
ಯುವ ಮೋರ್ಚಾ- ಯತೀನ್ ವೆಂಕಟೇಶ್ (ಅಧ್ಯಕ್ಷ), ಪ್ರವೀಣ್ ಗೌಡ, ಪ್ರಕಾಶ್ ಎಸ್.ಪಿ. (ಪ್ರಧಾನ ಕಾರ್ಯದರ್ಶಿಗಳು). ಮಹಿಳಾ ಮೋರ್ಚಾ- ಮಂಜುಳಾ ದೇವಿ (ಅಧ್ಯಕ್ಷ), ಆರ್.ವಿ.ಸುಜಾತ, ಸುನೀತಾ ಮಂಜುನಾಥ್ (ಪ್ರಧಾನ ಕಾರ್ಯದರ್ಶಿಗಳು). ಹಿಂದುಳಿದ ವರ್ಗಗಳ ಮೋರ್ಚಾ- ಬಿ.ಎಂ.ಶ್ರೀನಿವಾಸ್ (ಅಧ್ಯಕ್ಷ), ಮಂಜುನಾಥ್ ಆರ್., ಹರೀಶ್ ರಾಮಾಂಜಿನಪ್ಪ (ಪ್ರಧಾನ ಕಾರ್ಯದರ್ಶಿಗಳು). ಎಸ್.ಸಿ.ಮೋರ್ಚಾ- ಪ್ರಮೋದ್ ಬಿ.ಸಿ. (ಅಧ್ಯಕ್ಷ), ಸುರೇಶ್, ವಿಜಯಕುಮಾರ್ (ಪ್ರಧಾನ ಕಾರ್ಯದರ್ಶಿಗಳು). ಎಸ್.ಟಿ.ಮೋರ್ಚಾ- ಡಾ.ಸದಾಶಿವ ನಾಯಕ್ (ಅಧ್ಯಕ್ಷ), ಜಗನ್ನಾಥ್, ವಿನೋದ್ (ಪ್ರಧಾನ ಕಾರ್ಯದರ್ಶಿಗಳು). ರೈತ ಮೋರ್ಚಾ- ಜೆ.ಜೆ.ಮೂರ್ತಿ (ಅಧ್ಯಕ್ಷ), ಜನಾರ್ದನ್, ರಾಜು ನಾಯಕ್ (ಪ್ರಧಾನ ಕಾರ್ಯದರ್ಶಿಗಳು). ಅಲ್ಪಸಂಖ್ಯಾತರ ಮೋರ್ಚಾ- ಇಮ್ರಾನ್ (ಅಧ್ಯಕ್ಷ), ಗೌತಮ್ ಜೈನ್, ಷಾ ವಾರಿಸ್ ಹಮೀದ್ (ಪ್ರಧಾನ ಕಾರ್ಯದರ್ಶಿಗಳು).
