ರಾಮನ ಪ್ರಾಣ ಪ್ರತಿಷ್ಠಾಪನೆಗೆ ಮನಪೂರ್ವಕ ಸಂಭ್ರಮಿಸಿ

KannadaprabhaNewsNetwork |  
Published : Jan 22, 2024, 02:17 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ  | Kannada Prabha

ಸಾರಾಂಶ

5 ಶತಮಾನಗಳಿಂದ ತಿಕ್ಕಾಟ, ಕೋರ್ಟ್ ವ್ಯಾಜ್ಯದ ನಂತರ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯಾಗುತ್ತಿರುವುದಕ್ಕೆ ಎಲ್ಲರೂ ಸಂಭ್ರಮಿಸಬೇಕಿದೆ ಎಂದು ಭೀಮಸೇತು ಮುನಿವೃಂದ ಮಠ ಭೀಮನಕಟ್ಟೆ ರಘುವರೇಂದ್ರ ತೀರ್ಥ ಶ್ರೀಪಾದಂಗಳವರು ಹೇಳಿದರು.

ಚಿತ್ರದುರ್ಗ: 5 ಶತಮಾನಗಳಿಂದ ತಿಕ್ಕಾಟ, ಕೋರ್ಟ್ ವ್ಯಾಜ್ಯದ ನಂತರ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯಾಗುತ್ತಿರುವುದಕ್ಕೆ ಎಲ್ಲರೂ ಸಂಭ್ರಮಿಸಬೇಕಿದೆ ಎಂದು ಭೀಮಸೇತು ಮುನಿವೃಂದ ಮಠ ಭೀಮನಕಟ್ಟೆ ರಘುವರೇಂದ್ರ ತೀರ್ಥ ಶ್ರೀಪಾದಂಗಳವರು ಹೇಳಿದರು.

ಹರಿವಾಯು ಗುರು ಸೇವಾ ಟ್ರಸ್ಟ್‌ವತಿಯಿಂದ ಹರಿವಾಯುಸ್ತುತಿ ಪಾರಾಯಣದ 23ನೇ ವಾರ್ಷಿಕೋತ್ಸವ ನಿಮಿತ್ತ ವಾಸವಿ ವಿದ್ಯಾಸಂಸ್ಥೆ ಆವರಣದಲ್ಲಿ ಆರಂಭಗೊಂಡಿರುವ ಹರಿದಾಸ ಹಬ್ಬ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು ಅಧಿಕಾರ, ಸಂಪತ್ತಿನ ಯಾವ ಮದವು ಮರ್ಯಾದಾ ಪುರುಷ ರಾಮನಲ್ಲಿರಲಿಲ್ಲ. ಅಂತಹ ಯಾವುದಾದರೂ ಒಂದು ಗುಣವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಹರಿದಾಸ ಹಬ್ಬ ಆಚರಣೆಗೆ ನಿಜವಾದ ಅರ್ಥ ಸಿಗುತ್ತದೆ ಎಂದರು.

ಮಹರ್ಷಿ ವಾಲ್ಮೀಕಿ ರಾಮಾಯಣದಲ್ಲಿ ರಾಮನ ಗುಣಗಳ ಪಟ್ಟಿ ಕೊಟ್ಟಿದ್ದಾರೆ. ಸ್ಥಿತಪೂರ್ವ ಭಾಷಿ ರಾಮನ ಗುಣ. ರಾಮರಾಜ್ಯ, ರಾಮನ ಪ್ರಾಣ ಪ್ರತಿಷ್ಠೆ ನಮ್ಮಲ್ಲಾಗಬೇಕು. ರಾಮ ಮತ್ತು ಕೃಷ್ಣ ಮನುಷ್ಯರಂತೆ ಬಾಳಿ ತೋರಿದ ಅವತಾರ ಪುರುಷರು. ಮನುಷ್ಯ ಹೇಗೆ ಬದುಕಬೇಕೆಂಬುದನ್ನು ರಾಮ ಹೇಳಿಕೊಟ್ಟಿದ್ದಾನೆ. ಚಂದ್ರನನ್ನು ಕಂಡರೆ ಮನಸ್ಸಿಗೆ ನೆಮ್ಮದಿಯಾಗುತ್ತದೆ. ಚಂದ್ರನಿಗೆ ಹುಟ್ಟುಂಟು. ಭಗವಂತನಿಗೆ ಹುಟ್ಟಿಲ್ಲ. ಕೃಷ್ಣನನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ ವಿಠ್ಠಲ ನಾಮ ತುಪ್ಪವ ಬೆರೆಸಿ ಎನ್ನುವ ವಾಕ್ಯವುಂಟು. ರಾಮ ತನ್ನಲ್ಲಿನ ಸಾಮರ್ಥ್ಯದಿಂದ ಬೆಳೆದವನು. ದೇವರು ಅನುಗ್ರಹ ಮಾಡುವುದು ಭಕ್ತರಿಗೆ ಮಾತ್ರ. ಚಂದ್ರನಿಗಿಂತ ವಿಶಿಷ್ಟವಾದ ಗುಣ ರಾಮನಲ್ಲಿತ್ತು ಎಂದು ತಿಳಿಸಿದರು.

ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ್ ಮಾತನಾಡಿ, ಹರಿದಾಸ ಹಬ್ಬದ ಮೂಲಕ ಜ್ಞಾನ ವಿಕಾಸವಾಗಬೇಕು. ಜೀವನದಲ್ಲಿ ಏನು ಬದಲಾವಣೆ ತಂದುಕೊಂಡಿದ್ದೇವೆನ್ನುವುದು ಮುಖ್ಯ. ಮನುಷ್ಯ ಜೀವನ ಅತ್ಯಂತ ಶ್ರೇಷ್ಠ. ಧರ್ಮ, ಅಧರ್ಮ, ಹಿಂಸೆ ಇವೆಲ್ಲವು ರಾಜ-ಮಹಾರಾಜರ ಕಾಲದಿಂದಲೂ ಇದೆ. ಆಸೆ-ದುರಾಸೆ ಇರುತ್ತದೆ. ಅತಿಯಾದರೆ ಒಂದಲ್ಲ ಒಂದು ರೀತಿಯ ಅನಾಹುತಗಳಾಗುತ್ತವೆ. ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ರಾಮ ಮಂದಿರ ನಿರ್ಮಾಣ ಅಲ್ಪ ಕಾಲದಲ್ಲಿಯೇ ಆಗುತ್ತಿರುವುದನ್ನು ಎಲ್ಲರೂ ಮೆಚ್ಚಲೇಬೇಕು. ಮನುಷ್ಯ ಧರ್ಮದಿಂದ ನಡೆದಾಗ ಮಾತ್ರ ಒಳಿತಾಗಲಿದೆ ಎಂದು ಹೇಳಿದರು.

ಪೂರ್ಣಪ್ರಜ್ಞ ವಿದ್ಯಾಪೀಠದ ವಿದ್ವಾನ್ ಕೃಷ್ಣರಾಜ ಕುತ್ಪಾಡಿ, ರಾಘವೇಂದ್ರಸ್ವಾಮಿ ಮಠದ ವ್ಯವಸ್ಥಾಪಕ ಪ್ರಾಣೇಶಾಚಾರ್ಯ ಕೊಪ್ರ, ಉತ್ತರಾದಿಮಠದ ವ್ಯವಸ್ಥಾಪಕ ಉಪಾಧ್ಯ ಪ್ರಭಂಜನಾಚಾರ್ಯ ಕೊಸನೂರು, ನಗರಸಭೆ ಸದಸ್ಯ ಜಿ.ಹರೀಶ್, ಗುರುರಾಜ ಸೇವಾ ಸಂಘದ ಅಧ್ಯಕ್ಷ ವೇದವ್ಯಾಸಾಚಾರ್ಯ, ಬಡಗನಾಡು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎ.ಶೇಷಗಿರಿರಾವ್, ವೈಷ್ಣವಸಭಾ ಅಧ್ಯಕ್ಷ ಜಗದೀಶ್ ಜೆ.ಅಯ್ಯಂಗಾರ್, ಸದ್ಗುರು ಬ್ರಹ್ಮಚೈತನ್ಯ ಭಕ್ತ ಮಂಡಳಿ ಅಧ್ಯಕ್ಷ ಕಟೀಲ್ ದಿವಾಕರ್, ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಎ.ಸತ್ಯನಾರಾಯಣ ಶೆಟ್ಟಿ, ಆರ್ಯವೈಶ್ಯ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಮೋಹನ್‍ ಕುಮಾರ್ ಗುಪ್ತ, ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ.ಅನಂತರಾಮ್ ಗೌತಮ್, ಆರ್ಯವೈಶ್ಯ ಸಂಘದ ಅಧ್ಯಕ್ಷ ಎಲ್.ಇ.ಶ್ರೀನಿವಾಸಬಾಬು ವೇದಿಕೆಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಜೆಟಲ್ಲಿ ಹೇಳಿದಂತೆ 15 ಸಾವಿರ ಶಿಕ್ಷಕರ ಹುದ್ದೆ ಭರ್ತಿ ಶೀಘ್ರ: ಮಧು
ಬೆಂಗಳೂರಿನ ಕೊಳಚೆ ನೀರಿಂದ ತರಕಾರಿಯೂ ವಿಷ : ಸಂಸತ್ತಲ್ಲಿ ಗೌಡ