ಶಾಂತಿ, ಸುವ್ಯವಸ್ಥೆಯಿಂದ ಹಬ್ಬ ಆಚರಿಸಿ

KannadaprabhaNewsNetwork | Published : Aug 28, 2024 12:59 AM

ಸಾರಾಂಶ

ನ.7 ರಿಂದ ಆರಂಭವಾಗಲಿರುವ ಗಣೇಶ ಹಬ್ಬವನ್ನು ಎಲ್ಲರೂ ಪಟ್ಟಣದಲ್ಲಿ ಶಾಂತಿ, ಸುವ್ಯವಸ್ಥೆಯಿಂದ ಆಚರಿಸಬೇಕು. ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮಂಡಳಿಯವರು ಪಿಒಪಿಯಿಂದ ತಯಾರಿಸಿದ ಮೂರ್ತಿಯ ಬದಲು ಕಡ್ಡಾಯವಾಗಿ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶನನ್ನು ಪ್ರತಿಷ್ಠಾಪಿಸಬೇಕೆಂದು ಬಾಗಲಕೋಟೆಯ ಡಿವೈಎಸ್ಪಿ ವಿಶ್ವನಾಥರಾವ್ ಕುಲಕರ್ಣಿ ಹೇಳಿದರು

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ನ.7 ರಿಂದ ಆರಂಭವಾಗಲಿರುವ ಗಣೇಶ ಹಬ್ಬವನ್ನು ಎಲ್ಲರೂ ಪಟ್ಟಣದಲ್ಲಿ ಶಾಂತಿ, ಸುವ್ಯವಸ್ಥೆಯಿಂದ ಆಚರಿಸಬೇಕು. ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮಂಡಳಿಯವರು ಪಿಒಪಿಯಿಂದ ತಯಾರಿಸಿದ ಮೂರ್ತಿಯ ಬದಲು ಕಡ್ಡಾಯವಾಗಿ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶನನ್ನು ಪ್ರತಿಷ್ಠಾಪಿಸಬೇಕೆಂದು ಬಾಗಲಕೋಟೆಯ ಡಿವೈಎಸ್ಪಿ ವಿಶ್ವನಾಥರಾವ್ ಕುಲಕರ್ಣಿ ಹೇಳಿದರು.

ಅವರು ಭಾನುವಾರ ಸಂಜೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗಣೇಶ ಚತುರ್ಥಿ ಹಬ್ಬದ ನಿಮಿತ್ತ ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿ, ಗಣೇಶ ಮಂಡಳಿಯವರು ಪುರಸಭೆ, ಪಟ್ಟಣ ಪಂಚಾಯತಿ, ಗ್ರಾಮ ಪಂಚಾಯತಿ ಮುಂತಾದ ತಮ್ಮ ವ್ಯಾಪ್ತಿಯ ಸಂಬಂಧಪಟ್ಟ ಕಚೇರಿಯಿಂದ ಪರವಾಣಿಗೆ ಪಡೆಯುವುದು ಕಡ್ಡಾಯವಾಗಿದೆ. ಮೂರ್ತಿ ಪ್ರತಿಷ್ಠಾಪಿಸಿದ ಮೇಲೆ ಕಾವಲು ಕಾಯುವ ಜವಾಬ್ದಾರಿ ಮಂಡಳಿಯದ್ದು. ಅಲ್ಲಿ ಯಾವುದೇ ರೀತಿಯ ಕೋಮು ಸೌಹಾರ್ದತೆ ಕದಡುವ ಕೆಲಸ ಮಾಡಬಾರದು. ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮಾಡಿದರೆ ಪೊಲೀಸ್ ಇಲಾಖೆ ಗಮನಕ್ಕೆ ತರಬೇಕು. ಸಿಡಿಮದ್ದು ಹಾರಿಸುವಾಗ ಯಾರಿಗೂ ತೊಂದರೆಯಾಗದಂತೆ ಕ್ರಮವಹಿಸಬೇಕು ಮತ್ತು ವಿಸರ್ಜನೆ ಕಾಲಕ್ಕೆ ಡಿಜೆ ಮತ್ತು ಧ್ವನಿವರ್ಧಕ ಬಳಸಲು ಅನುಮತಿ ಪಡೆಯಬೇಕೆಂದು ಹೇಳಿದರು.

ಸಿಪಿಐ ಕರಿಯಪ್ಪ ಬನ್ನೆ ಮಾತನಾಡಿ, ಗಣೇಶನನ್ನು ಪ್ರತಿಷಾಪಿಸುವ ಮಂಡಳಿಯವರು ಪೊಲೀಸ್ ಇಲಾಖೆಯ ನಿಯಮಗಳನ್ನು ಪಾಲಿಸಿ ಶಾಂತಿ ಸೌಹಾರ್ದತೆಯಿಂದ ಗಣೇಶೋತ್ಸವ ಆಚರಿಸಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮಂಡಳಿಯವರು ಜವಾಬ್ದಾರಿ ವಹಿಸಿಕೊಳ್ಳಬೇಕು ಹಾಗೂ ಎಲ್ಲ ಜಾತಿ, ಧರ್ಮದ ಸಮನ್ವಯತೆಯಿಂದ ಹಬ್ಬ ಆಚರಿಸಬೇಕೆಂದು ಹೇಳಿದರು.

ಪಿಎಸ್ಐ ಸಿದ್ದು ಯಡಹಳ್ಳಿ ಮಾತನಾಡಿ, ನಿಮಗೆ ಯಾವುದೆ ಸಮಸ್ಸೆ ಬಂದರೂ ನಮಗೆ ಮಾಹಿತಿ ನೀಡಿ ನಿಮ್ಮ ಸಮಸ್ಸೆ ಪರಿಹಾರಕ್ಕೆ ನಾವಿದ್ದೇವೆ. ಜವಾಬ್ದಾರಿ ಮತ್ತು ಶಾಂತಿಯುತ ಗಣೇಶೋತ್ಸವ ಆಚರಿಸಬೇಕೆಂದು ಹೇಳಿದರು.

ಕಂದಾಯ ನಿರೀಕ್ಷಕ ಶಿವರಾಯಪ್ಪ ಜೋಗಿನ, ಪುರಸಭೆಯ ಅಧಿಕಾರಿಗಳು,ರಾಜು ತಾಪಾಟಿಯಾ,ಶ್ರೀಕಾಂತ ಹುನಗುಂದ.ರಡ್ಡಿ ಎಚ್.ನಡುವಿನಮನಿ,ಹಾಗೂ ಮುಸ್ಲಿಂ ಸಮುದಾಯದ ಹಿರಿಯರು. ಪೊಲೀಸ್ ಠಾಣೆಯ ಸಿಬ್ಬಂದಿ, ಪಟ್ಟಣದ ವಿವಿಧ ಗಜಾನನ ಮಂಡಳಿಯವರು, ಸಾರ್ವಜನಿಕರು, ಗ್ರಾಮೀಣ ಬಾಗಗಳ ಗಣೇಶ ಮಂಡಳಿಯವರು ಉಪಸ್ಥಿತರಿದ್ದರು.

Share this article