ಶ್ರೀರಂಗಪಟ್ಟಣ:
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಾಗೂ ಅಚೀವರ್ಸ್ ಅಕಾಡೆಮಿ ಅಧ್ಯಕ್ಷ ಡಾ.ರಾಘವೇಂದ್ರ ಮಾತನಾಡಿ, ಕನ್ನಡ ಕೇವಲ ಒಂದು ಭಾಷೆಯಲ್ಲ. ಅದು ನಮ್ಮ ಸಂಸ್ಕೃತಿ, ನಮ್ಮ ಪರಂಪರೆ, ನಮ್ಮ ಆತ್ಮಗೌರವ ಮತ್ತು ನಮ್ಮ ಅಸ್ಮಿತೆಯ ಪ್ರತೀಕವಾಗಿದೆ ಎಂದರು.
ಪಂಪ, ರನ್ನ, ಬಸವಣ್ಣ, ಕುವೆಂಪು, ಬೇಂದ್ರೆ ಸೇರಿದಂತೆ ಅನೇಕ ಮಹನೀಯರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ರಾಜ್ಯೋತ್ಸವ ಆಚರಿಸುವುದು ಎಂದರೆ ಕೇವಲ ಕೆಂಪು-ಹಳದಿ ಧ್ವಜ ಹಾರಿಸುವುದು ಮತ್ತು ಸಿಹಿ ಹಂಚುವುದಲ್ಲ. ನಮ್ಮ ದೈನಂದಿನ ಜೀವನದಲ್ಲಿ ಕನ್ನಡವನ್ನು ಬಳಸುವುದು, ಕನ್ನಡ ಶಾಲೆಗಳನ್ನು ಪ್ರೋತ್ಸಾಹಿಸುವುದು ಕನ್ನಡ ಸಾಹಿತ್ಯವನ್ನು ಓದುವುದು ಮತ್ತು ಮುಂದಿನ ಪೀಳಿಗೆಗೆ ಕನ್ನಡದ ಮಹತ್ವವನ್ನು ತಿಳಿಸುವುದೇ ನಿಜವಾದ ಕನ್ನಡಾಭಿಮಾನ ಎಂದರು. ಕನ್ನಡವೇ ಸತ್ಯ, ಕನ್ನಡವೇ ನಿತ್ಯ; ಕನ್ನಡ ನಮ್ಮ ಹೆಮ್ಮೆ, ಕನ್ನಡ ನಮ್ಮ ಉಸಿರು ಎಂದರು.ತಾಲೂಕಿನ ಮಲ್ಲೇಗೌಡನ ಕೊಪ್ಪಲು, ಗೌರಿಪುರ, ಶೆಟ್ಟಳ್ಳಿ, ಗ್ರಾಮಗಳಿಗೆ ತೆರಳಿ ಕನ್ನಡವನ್ನು ಉಳಿಸಿ , ಬೆಳೆಸುವ ಉದ್ದೇಶದಿಂದ ಕನ್ನಡ ಭಾಷೆಯಲ್ಲಿ ಹೆಸರು ಬರೆಯುವುದನ್ನು ಕಲಿಸಿಕೊಡಲಾಯಿತು. ಈ ವೇಳೆ ಮೈಸೂರಿನ ಶಾರದವಿಲಾಸ ಕಾನೂನು ಕಾಲೇಜಿನ ಎನ್. ಎಸ್. ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಸವಿತಾ ಹೆಚ್.ಎಂ, ಸ್ವಯಂ ಸೇವಕರಾದ ಅಕ್ಷಯ್. ಎಂ, ಕಿರಣ್ ಎಂ.ಎಂ, ಬಸವರಾಜ.ಡಿ, ವಿ.ಪ್ರವೀಣಕುಮಾರ್, ಸುದರ್ಶನ್ ಹೆಚ್.ಎಸ್ ಸೇರಿದಂತೆ ಗ್ರಾಮಸ್ಥರು ಭಾಗಿಯಾಗಿದ್ದರು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣಪಟ್ಟಣದ ಐಕ್ಯ ಅಲೈಯನ್ಸ್ ಕ್ಲಬ್, ರೋಟರಿ ಸಂಸ್ಥೆ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು.
ಆಚಾರ್ಯ ವಿನೋಬಾ ಭಾವೆ ಅವರು ಕನ್ನಡ ಭಾಷೆಯ ಅಕ್ಷರಗಳ ಸೌಂದರ್ಯ ಮತ್ತು ವ್ಯವಸ್ಥಿತ ವಿನ್ಯಾಸವನ್ನು ಕಂಡು ಮೆಚ್ಚಿ, ಕನ್ನಡವನ್ನು ‘ವಿಶ್ವ ಲಿಪಿಗಳ ರಾಣಿ’ ಎಂದು ಬಣ್ಣಿಸಿದ್ದಾರೆ ಎಂದು ಹೇಳಿದರು.ಈ ವೇಳೆ ಅಲೈಯನ್ಸ್ ಕ್ಲಬ್‌ನ ಪ್ರಾದೇಶಿಕ ಅಧ್ಯಕ್ಷೆ ಎನ್.ಸರಸ್ವತಿ, ಐಕ್ಯ ಅಲೈಯನ್ಸ್ ಕ್ಲಬ್ ಅಧ್ಯಕ್ಷೆ ಆಶಾಲತಾ, ಮುಖಂಡರಾದ ವಿಜಯಕುಮಾರ್, ಡಾ. ರಾಘವೇಂದ್ರ, ಮಾಜಿ ಪುರಸಭಾ ಸದಸ್ಯ ಪ್ರಕಾಶ್, ಕರವೇ ಹರೀಶ್, ಕೇಬಲ್ ಶಿವು, ಸಿದ್ದರಾಜು ಹಾಗೂ ರೋಟರಿ ಸಂಸ್ಥೆ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.