ಕೊಪ್ಪಕನ್ನಡ ಕೇವಲ ನವೆಂಬರ್ ತಿಂಗಳ ಆಚರಣೆಯಾಗದೆ, ನಿತ್ಯ ಜೀವನದ ಉಸಿರಾಗಬೇಕು. ನಾಡಿನ ನೆಲ, ಜಲ, ಪರಿಸರ ಹಾಗೂ ಉದ್ಯೋಗ ಅವಲಂಬಿಸಿ ಬದುಕುವ ಪ್ರತಿಯೊಬ್ಬರೂ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಗೌರವ ನೀಡಿ ಕನ್ನಡತನ ಮೈಗೂಡಿಸಿಕೊಳ್ಳಬೇಕು ಎಂದು ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ತಿಳಿಸಿದರು.
ಕೊಪ್ಪದಲ್ಲಿ 71ನೇ ಕನ್ನಡ ರಾಜ್ಯೋತ್ಸವ ಸಂಭ್ರಮ:
ಕನ್ನಡಪ್ರಭ ವಾರ್ತೆ ಕೊಪ್ಪಕನ್ನಡ ಕೇವಲ ನವೆಂಬರ್ ತಿಂಗಳ ಆಚರಣೆಯಾಗದೆ, ನಿತ್ಯ ಜೀವನದ ಉಸಿರಾಗಬೇಕು. ನಾಡಿನ ನೆಲ, ಜಲ, ಪರಿಸರ ಹಾಗೂ ಉದ್ಯೋಗ ಅವಲಂಬಿಸಿ ಬದುಕುವ ಪ್ರತಿಯೊಬ್ಬರೂ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಗೌರವ ನೀಡಿ ಕನ್ನಡತನ ಮೈಗೂಡಿಸಿಕೊಳ್ಳಬೇಕು ಎಂದು ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ತಿಳಿಸಿದರು.
ಪಟ್ಟಣದಲ್ಲಿ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿ ಕನ್ನಡ ಕುಲಪುರೋಹಿತ ಆಲೂರು ವೆಂಕಟ ರಾವ್ ಮೊದಲಾದ ಹಿರಿಯ ಹೋರಾಟಗಾರರ ತ್ಯಾಗದಿಂದ 1956ರಲ್ಲಿ ಮೈಸೂರು ರಾಜ್ಯ ಉದಯವಾಯಿತು. ನಂತರ 1973ರಲ್ಲಿ ಡಿ. ದೇವರಾಜ ಅರಸು ''''ಕರ್ನಾಟಕ'''' ಎಂದು ಮರುನಾಮಕರಣ ಮಾಡಿದರು. ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಸಂದಿರುವುದು ಹೆಮ್ಮೆಯ ವಿಚಾರ ಎಂದರು.ವಿದ್ಯಾರ್ಥಿ ದಿಸೆಯಲ್ಲಿ ಗೋಕಾಕ್ ಚಳವಳಿಯಲ್ಲಿ ಪಾಲ್ಗೊಂಡು ಚಿಕ್ಕಮಗಳೂರಿನಲ್ಲಿ ಕನ್ನಡ ನಾಮಫಲಕಗಳನ್ನು ಪ್ರಥಮ ವಾಗಿ ಅಳವಡಿಸಲು ಹೋರಾಟ ನಡೆಸಿದ್ದೆವು. ವರನಟ ಡಾ. ರಾಜ್ಕುಮಾರ್ ಸಾಂಸ್ಕೃತಿಕ ರಾಯಭಾರಿಯಾಗಿ ನಾಡಿಗೆ ನೀಡಿದ ಕೊಡುಗೆ ಅನನ್ಯ ಎಂದು ಸ್ಮರಿಸಿದರು.
ಕನ್ನಡದಲ್ಲಿ 125 ಅಂಕ-ಅಭಿನಂದನೆ: ಎಸ್ಎಸ್ಎಲ್ಸಿಯಲ್ಲಿ ಕನ್ನಡ ಭಾಷಾ ಪತ್ರಿಕೆಯಲ್ಲಿ ಸಣ್ಣ ವ್ಯಾಕರಣ ಅಥವಾ ಒತ್ತಕ್ಷ ರದ ದೋಷವಾದರೂ ಅಂಕಗಳು ಕಡಿತಗೊಳ್ಳುತ್ತವೆ. ಹಾಗಿದ್ದೂ ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 125 ಅಂಕಗಳನ್ನು ಪಡೆದ 60 ವಿದ್ಯಾರ್ಥಿಗಳ ಸಾಧನೆ ಶ್ಲಾಘನೀಯ. ಈ ವಿದ್ಯಾರ್ಥಿಗಳು ಹೆತ್ತವರು, ಗುರುಗಳು,ಇಡೀ ನಾಡಿಗೆ ಕೀರ್ತಿ ತಂದು ದೇಶದ ದೊಡ್ಡ ಆಸ್ತಿಯಾಗಲಿ ಎಂದು ಹಾರೈಸಿದರು.ರಸ್ತೆಗಳ ಸಮಗ್ರ ಅಭಿವೃದ್ಧಿಗೆ ಬದ್ಧ: ಕ್ಷೇತ್ರ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸುರಿದ ನಿರಂತರ ಮಳೆಯಿಂದ ರಸ್ತೆ ಕಾಮಗಾರಿಗಳಿಗೆ ಅಡ್ಡಿಯಾಗಿತ್ತು. ಪ್ರಸ್ತುತ ಕಾಮಗಾರಿ ಮರುಪ್ರಾರಂಭಿಸಲಾಗಿದ್ದು, ಕೇವಲ ತೇಪೆ (ಪ್ಯಾಚ್ ವರ್ಕ್) ಹಾಕದೆ ಗುಣಮಟ್ಟದ ಮರು ಡಾಂಬರೀಕರಣ ಕೈಗೊಳ್ಳಲಾಗುವುದು. ಜಯಪುರ, ಬಾಳೆಹೊನ್ನೂರು, ಎನ್.ಆರ್. ಪುರ, ಕಡಬುಗೆರೆ ರಸ್ತೆಗಳ ಮಾದರಿಯಲ್ಲಿ ಶೃಂಗೇರಿ, ಕೊಪ್ಪ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಸಂಪರ್ಕ ರಸ್ತೆಗಳನ್ನೂ ಹಂತ ಹಂತವಾಗಿ ಸುಸಜ್ಜಿತ ರಸ್ತೆಗಳನ್ನಾಗಿ ನಿರ್ಮಿಸುವ ಭರವಸೆ ನೀಡಿದರು.
ಮಧುರಾ ಮಂಜುನಾಥ್ ಮಾತನಾಡಿ ಕನ್ನಡದ ಉಳಿವಿಗೆ ಕೇವಲ ಆಡಂಬರದ ಘೋಷಣೆಗಳಿಗಿಂತ ಮಕ್ಕಳಿಗೆ ಮೊದಲು ಕನ್ನಡ ಅಕ್ಷರಗಳನ್ನು ಪ್ರೀತಿಯಿಂದ ಕಲಿಸುವ ಮನಸ್ಸು ಪೋಷಕರಲ್ಲಿ ಬರಬೇಕು. ಕನ್ನಡ ಅಕ್ಷರಗಳನ್ನು ಸ್ಪಷ್ಟವಾಗಿ ಕಲಿತರೆ ಜಗತ್ತಿನ ಯಾವುದೇ ಲಿಪಿಯನ್ನಾದರೂ ಸುಲಭವಾಗಿ ಕಲಿಯಬಹುದು. ನಮ್ಮ ಗ್ರಾಮೀಣ ಆಡುಭಾಷೆ, ಸೊಗಡು ಮತ್ತು ಜೀವಂತಿಕೆ ಬಗ್ಗೆ ಕೀಳರಿಮೆ ಬಿಟ್ಟು ಹೆಮ್ಮೆಯಿಂದ ಬಳಸಬೇಕು ಎಂದು ಕರೆ ನೀಡಿದರು.ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಆಶೀಶ್ ಕೊಪ್ಪಾರ್, ಅಕ್ಷರ ದಾಸೋಹದ ಸಿಬ್ಬಂದಿ ಯೋಗಿ ಹಾಗೂ ಪ್ರೌಢಶಾಲಾ ಶಿಕ್ಷಕರಾದ ರುದ್ರಾದ್ಯ ಅವರನ್ನು ಗೌರವಿಸಲಾಯಿತು.
ವೇದಿಕೆಯ ಮುಂಭಾಗ ರಾಷ್ಟ್ರಕವಿ ಕುವೆಂಪು ಚಿತ್ರ ಹಾಗೂ ಕರ್ನಾಟಕದ ಭೂಪಟವನ್ನು ಅತ್ಯಂತ ಆಕರ್ಷಕವಾಗಿ ಸ್ಥಳದಲ್ಲೇ ರಚಿಸಿದ ನುಗ್ಗಿ ಯುವ ಕಲಾವಿದ ಕೀರ್ತನ್ ಕಲಾ ನೈಪುಣ್ಯತೆ ಶ್ಲಾಘಿಸಿದ ಶಾಸಕರು ಅವರ ಕಲಾ ಸೇವೆಗೆ ಸದಾ ಬೆಂಬಲ ನೀಡುವ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಶುದ್ಧ-ಸ್ಪಷ್ಟ ಕನ್ನಡ ಕೈಬರಹ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ನೃತ್ಯ ಪ್ರದರ್ಶನ ಜರುಗಿತು.ತಹಸೀಲ್ದಾರ್ ಲಿಖಿತಾ ಮೋಹನ್, ತಾಪಂ ಕಾರ್ಯ ನಿರ್ವಹಣಾಧಿಕಾರಿ ನವೀನ್ ಕುಮಾರ್ ಎಚ್.ಡಿ., ತಾಲೂಕು ಕಸಾಪ ಅಧ್ಯಕ್ಷ ಹರ್ಷ, ಪಿಸಿಎಆರ್ಡಿ ಬ್ಯಾಂಕ್ ಅಧ್ಯಕ್ಷ ದಿನೇಶ್, ಬಗರ್ಹುಕುಂ ಸಮಿತಿ ಸದಸ್ಯ ಮಂಜುನಾಥ್ ನುಗ್ಗಿ, ಕೆಡಿಪಿ ಸದಸ್ಯರಾದ ಚಿಂತನ್ ಬಿ.ಪಿ., ಎಸ್. ಅಶೋಕ್, ರಾಜಶಂಕರ್ ಜಿ.ಆರ್., ಮೊಹಮ್ಮದ್ ಸಾದಿಕ್, ರಾಜೇಂದ್ರ ಬಿ.ಸಿ., ಸುರೇಶ್ ನಾಯಕ್, ಕ್ಷೇತ್ರ ಶಿಕ್ಷಣಾಧಿಕಾರಿ ಜಯಣ್ಣ, ತಾಲೂಕು ಆರೋಗ್ಯಾಧಿಕಾರಿ ಡಾ. ಮಹೇಂದ್ರ ಕಿರೀಟಿ, ಪಪಂ ಮುಖ್ಯಾಧಿಕಾರಿ ಕುರಿಯಾಕೋಸ್, ಪ.ಪಂ. ಮಾಜಿ ಸದಸ್ಯೆ ಮೈತ್ರಾ ಗಣೇಶ್, ಮುಖಂಡ ಆರ್.ಡಿ. ನವೀನ್ ಉಪಸ್ಥಿತರಿದ್ದರು.