ರಾಜಕೀಯಕ್ಕೆ ಹೊಸ ಭಾಷ್ಯ ಬರೆದ ವ್ಯಕ್ತಿತ್ವದ ಗುಣಗಾನ: ಡಾ. ಸಿ.ಟಿ.ರವಿ

KannadaprabhaNewsNetwork |  
Published : Sep 18, 2026, 01:15 AM IST
 | Kannada Prabha

ಸಾರಾಂಶ

ಮೂಡಿಗೆರೆನಮೋತ್ಸವ ವ್ಯಕ್ತಿ ವೈಭವೀಕರಣಕ್ಕಾಗಿ ಆಯೋಜಿಸಿದ್ದಲ್ಲ. ವ್ಯಕ್ತಿ ಶಾಶ್ವತವಲ್ಲ, ಆದರೆ ವ್ಯಕ್ತಿತ್ವ ಸಮಾಜದ ಮೇಲೆ ದೀರ್ಘಕಾಲ ಪ್ರಭಾವ ಬೀರುತ್ತದೆ. ನರೇಂದ್ರ ಮೋದಿ ಅವರ ವ್ಯಕ್ತಿತ್ವದ ಮೂಲಕ ದೇಶದ ರಾಜಕೀಯ ಸಂಸ್ಕೃತಿಗೆ ಹೊಸ ಭಾಷ್ಯ ಬರೆದಿರುವುದನ್ನು ಸ್ಮರಿಸುವುದೇ ನಮೋತ್ಸವದ ಉದ್ದೇಶ ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ ಪ್ರತಿಪಾದಿಸಿದರು.

ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ ‘ನಮೋತ್ಸವ’ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಮೂಡಿಗೆರೆ

ನಮೋತ್ಸವ ವ್ಯಕ್ತಿ ವೈಭವೀಕರಣಕ್ಕಾಗಿ ಆಯೋಜಿಸಿದ್ದಲ್ಲ. ವ್ಯಕ್ತಿ ಶಾಶ್ವತವಲ್ಲ, ಆದರೆ ವ್ಯಕ್ತಿತ್ವ ಸಮಾಜದ ಮೇಲೆ ದೀರ್ಘಕಾಲ ಪ್ರಭಾವ ಬೀರುತ್ತದೆ. ನರೇಂದ್ರ ಮೋದಿ ಅವರ ವ್ಯಕ್ತಿತ್ವದ ಮೂಲಕ ದೇಶದ ರಾಜಕೀಯ ಸಂಸ್ಕೃತಿಗೆ ಹೊಸ ಭಾಷ್ಯ ಬರೆದಿರುವುದನ್ನು ಸ್ಮರಿಸುವುದೇ ನಮೋತ್ಸವದ ಉದ್ದೇಶ ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ ಪ್ರತಿಪಾದಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ರಕ್ಷಾ ಫೌಂಡೇಶನ್ ಅಧ್ಯಕ್ಷೆ ಹಾಗೂ ಬಿಜೆಪಿ ಮುಖಂಡರಾದ ಸುಷ್ಮಾ ನೇತೃತ್ವದಲ್ಲಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ ‘ನಮೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿ ನರೇಂದ್ರ ಮೋದಿ ಅವರು ಸಂಸತ್ತಿನ ಮೆಟ್ಟಿಲುಗಳಿಗೆ ನಮಸ್ಕರಿಸಿ ಪ್ರವೇಶಿಸಿದ್ದು, ಸಂಸತ್ತು ಪ್ರಜಾಪ್ರಭುತ್ವದ ದೇಗುಲ ಎಂಬ ನಿಲುವು ತೋರಿಸುತ್ತದೆ. ಸಂವಿಧಾನಕ್ಕೆ ನಮಸ್ಕರಿಸಿ ಪ್ರಮಾಣ ವಚನ ಸ್ವೀಕರಿಸಿದ ಅವರು, ಡಾ. ಬಿ.ಆರ್. ಅಂಬೇ ಡ್ಕರ್ ಅವರಿಗೆ ಸಂಬಂಧಿಸಿದ ಪಂಚಧಾಮ ಪಂಚತೀರ್ಥಗಳಾಗಿ ಅಭಿವೃದ್ಧಿಪಡಿಸುವ ಕಾರ್ಯ ಮಾಡಿದ್ದಾರೆ ಎಂದರು.ಜನ್‌ಧನ್ ಖಾತೆಗಳ ಮೂಲಕ ಕೋಟ್ಯಂತರ ಬಡ ಕುಟುಂಬಗಳನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಜೋಡಿಸಲಾಗಿದೆ. ಆರ್ಥಿಕ ಸಾಕ್ಷರತೆ ಅಗತ್ಯವನ್ನು ಈ ಯೋಜನೆ ತೋರಿಸಿದೆ. ದೇಶದ ಭದ್ರತೆ ಹಾಗೂ ವಿದೇಶಾಂಗ ನೀತಿಯಲ್ಲಿ ಮೋದಿ ನಾಯಕತ್ವದಿಂದ ಬದಲಾವಣೆಗಳಾಗಿವೆ ಎಂದು ಅಭಿಪ್ರಾಯಪಟ್ಟರು.ಭಯೋತ್ಪಾದನೆ ವಿರುದ್ಧ ಭಾರತ ದೃಢ ನಿಲುವು ತಳೆದಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನಮಾನ ಬದಲಾಗಿದೆ. ವಿವಿಧ ರಾಷ್ಟ್ರಗಳ ಅತ್ಯುನ್ನತ ಗೌರವ ಮೋದಿ ಅವರಿಗೆ ದೊರೆತಿರುವುದು ದೇಶಕ್ಕೆ ಹೆಮ್ಮೆಯ ವಿಚಾರ ಎಂದು ಹೇಳಿದರು.2047ಕ್ಕೆ ಆತ್ಮನಿರ್ಭರ ಭಾರತ: 2047ರಲ್ಲಿ ಭಾರತ ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವ ವೇಳೆಗೆ ಆತ್ಮನಿರ್ಭರ ಹಾಗೂ ವಿಶ್ವಗುರು ಭಾರತ ನಿರ್ಮಾಣವಾಗಬೇಕು ಎಂಬುದು ಮೋದಿ ಅವರ ಕನಸು. ದೇಶದ ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟರೆ ಭಾರತ 140 ಕೋಟಿ ಹೆಜ್ಜೆ ಮುಂದೆ ಸಾಗುತ್ತದೆ. ಪ್ರತಿಯೊಂದು ಕುಟುಂಬ ಸ್ವಾವಲಂಬಿ ಹಾಗೂ ಸ್ವಾಭಿಮಾನಿ ಯಾಗಬೇಕು ಎಂದರು.ಆಡಳಿತದಲ್ಲಿ ಸುಧಾರಣೆ, ಪ್ರಗತಿ ಹಾಗೂ ಪ್ರಗತಿ ಲಾಭ ಕಟ್ಟಕಡೆ ಮನುಷ್ಯನಿಗೆ ತಲುಪುವ ಬದಲಾವಣೆಯನ್ನು ‘ರಿಫಾರ್ಮ್ಸ್, ಪರ್ಫಾರ್ಮ್ಸ್, ಟ್ರಾನ್ಸ್‌ಫಾರ್ಮ್ಸ್’ ಎಂಬ ಮೂರು ಪದಗಳಲ್ಲಿ ವಿವರಿಸಿದರು. ಮೋದಿ ಅವರ ಆರೋಗ್ಯ ಹಾಗೂ ಪೂರ್ಣಾಯುಷ್ಯಕ್ಕಾಗಿ ಪ್ರಾರ್ಥಿಸಿ, ಸಂಜೆ 6ರಿಂದ 7 ಗಂಟೆಯೊಳಗೆ ಪ್ರತಿಯೊಂದು ಮನೆಯಲ್ಲಿ ‘ಆಶೀರ್ವಾದದ ದೀಪ’ ಹಚ್ಚುವಂತೆ ಕರೆ ನೀಡಿದರು.ಈ ವೇಳೆ ಸಫಾಯಿ ಕರ್ಮಚಾರಿ ನಿಯೋಗದ ಸದಸ್ಯ ಹರ್ದೀಪ್ ಸಿಂಗ್ ಗಿಲ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್. ದೇವರಾಜ್ ಶೆಟ್ಟಿ, ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್, ಹಿರಿಯ ಮುಖಂಡರಾದ ದೀಪಕ್ ದೊಡ್ಡಯ್ಯ, ಗಜೇಂದ್ರ, ರವಿ, ದಿನೇಶ್ ಸೇರಿದಂತೆ ವಿವಿಧ ಮುಖಂಡರು, ಗಣ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.-- ಬಾಕ್ಸ್---

ಮೂಡಿಗೆರೆಯಲ್ಲಿ ಕಮಲ ಅರಳಬೇಕು

ಚಿಕ್ಕಮಗಳೂರು ಜಿಲ್ಲೆ ಹಾಗೂ ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರಬೇಕು ಎಂಬುದು ಕಾರ್ಯಕರ್ತರ ಆಶಯ. ಮೂಡಿಗೆರೆ, ಶೃಂಗೇರಿ, ಚಿಕ್ಕಮಗಳೂರು, ತರೀಕೆರೆ ಹಾಗೂ ಕಡೂರು ಕ್ಷೇತ್ರಗಳಲ್ಲಿ ಕಮಲ ಅರಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಸಂಘಟಿತರಾಗಿ ಕೆಲಸ ಮಾಡಬೇಕು ಎಂದು ಸಿ.ಟಿ.ರವಿ ಕರೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದತ್ತಾತ್ರೇಯನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಸಿಎಂ ಡಿಕೆ ಶಿವಕುಮಾರ್‌
ರಾತ್ರೋರಾತ್ರಿ ಸಿದ್ದರಾಮಯ್ಯ ಪ್ರತಿಮೆ ಸ್ಥಾಪನೆ; ಬೆಳಗ್ಗೆ ತೆರವು